ಕೆಂಪೇಗೌಡರ ಕೋಟೆ, ಸ್ಮಾರಕ ಅವಸಾನದ ಅಂಚಿಗ
Team Udayavani, Jun 28, 2018, 4:27 PM IST
ಮಾಗಡಿ: ಮಾಗಡಿ ಎಂದೊಡನೆ ಪ್ರತಿಯೊಬ್ಬರಿಗೆ ನೆನಪಾಗುವುದು ನಾಡಪ್ರಭು ಕೆಂಪೇಗೌಡ. ಜತೆಗೆ ಇಲ್ಲಿನ ಪ್ರಸಿದ್ಧ ತಿರುಮಲೆ ಶ್ರೀ ರಂಗನಾಥಸ್ವಾಮಿ ಮತ್ತು ಸೋಮೇಶ್ವರ ದೇವಾಲಯ ಹಾಗೂ ಸಾವನದುರ್ಗ, ಕೆರೆಕಟ್ಟೆ, ಕೋಟೆ, ಕೊತ್ತಲುಗಳು. ಇವೆಲ್ಲವೂ ಕೆಂಪೇಗೌಡರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರುವುದು.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಎರಡು ವರ್ಷ ಕಳೆದರೂ ಸಹ ಇನ್ನೂ ಮಾಗಡಿ ತಾಲೂಕಿನ ಕೆಂಪಾಪುರವನ್ನು ರಾಷ್ಟ್ರೀಯ ಸ್ಮಾರಕ ವನ್ನಾಗಿಸುವ ಕನಸು ನನಸಾಗಲೇ ಇಲ್ಲ. ಪ್ರಾಧಿಕಾರ ರಚನೆಯಾದ ಕೂಡಲೇ ಸರ್ಕಾರ ಕೆಂಪೇಗೌಡರ ಹುಟ್ಟೂರು ಕೆಂಪಾಪುರವನ್ನು ದತ್ತು ಪಡೆದು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಿ ಸಂರಕ್ಷಿ ಸಲು 5 ಕೋಟಿ ರೂ. ಮೀಸಲಿಟ್ಟಿತು. ಅಲ್ಲದೇ ಬಿಬಿಎಂಪಿ ಸಹ 3 ಕೋಟಿ ರೂ. ಮೀಸಲಿಟ್ಟಿದೆ.
ಆದರೂ ಇಲ್ಲಿಯವರೆವಗೂ ಒಂದು ನಯಾಪೈಸೆ ಖರ್ಚು ಮಾಡದೆ ನಿರ್ಲಕ್ಷ್ಯ ತೋರಿರುವ ಪ್ರಾಧಿಕಾರ, ಸ್ಮಾರಕಗಳ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ಹಿರಿಯ ಕೆಂಪೇಗೌಡರ ಐಕ್ಯ ಸ್ಥಳ
ಸಮಾಧಿ ಪತ್ತೆಯಾಗಿ 3 ವರ್ಷಗಳೇ ಕಳೆದಿದೆ.
ಸಚಿವರು, ಸಂಸದರು, ಶಾಸಕರು, ಮಠಾಧೀಶರು, ಸಾಹಿತಿಗಳು, ಚಿಂತಕರು, ಸಂಶೋಧಕರು, ಪ್ರಾಚ್ಯವಸ್ತು, ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಕೆಂಪಾಪುರದಲ್ಲಿನ ಐಕ್ಯ ಸ್ಥಳ ಸಮಾಧಿಯನ್ನು ಕಂಡು ಸಂತಸಪಟ್ಟರು.
ಬಂದವರೆಲ್ಲರೂ ಕೆಂಪೇಗೌಡರ ಆಳ್ವಿಕೆಯ ಕಾಲವನ್ನು ಹೊಗಳಿ ಹೊಗಳಿ ಹೊನ್ನಸೂಲಕ್ಕೆ ಏರಿಸಿ ಹೋದರೆ ಹೊರತು ಇಲ್ಲಿಯವರೆಗೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕೆಂಪೇಗೌಡ ಅಭಿವೃದ್ಧಿ ಸಮಿತಿ ಹಾಗೂ ಸಚಿವರ, ಸಂಸದರ ಮನವಿ ಮೇರೆಗೆ ಹಿಂದಿನ ಸರ್ಕಾರ, ಕಳೆದ 2 ವರ್ಷಗಳ ಹಿಂದೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿತು.
ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿಗಳೇ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರಾಗಿ ಸಚಿವ ಡಿ.ಕೆ.ಶಿವಕುಮಾರ್ ಇದ್ದಾರೆ. ಉಳಿದಂತೆ 7 ಮಂದಿ ನಿರ್ದೇಶಕರು ಇದ್ದಾರೆ. ಇದರಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಇದ್ದಾರೆ. ಇವರು ಅನೇಕ ವರ್ಷಗಳಿಂದ ಕೆಂಪೇಗೌಡರ ಹೆಸರಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಚರಿಸಿ ಕೊಂಡು ಬರುತ್ತಿದ್ದಾರೆ. ಪುರಸಭೆ ಕಚೇರಿ ಆವರಣದಲ್ಲಿ ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.
ತಾಲೂಕಿನಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಕೆಂಪೇಗೌಡ ಸಂಶೋಧನಾ ಕೇಂದ್ರ, ಅಧ್ಯಯನ ಕೇಂದ್ರವನ್ನು ಸರ್ಕಾರ ಸ್ಥಾಪಿಸಿ ಮುಂದಿನ ಯುವ ಪೀಳಿಗೆಗೆ ಕೆಂಪೇಗೌಡ ದೂರದೃಷ್ಟಿ, ಚಿಂತನೆಗಳನ್ನು ಪ್ರಾಧಿಕಾರದಿಂದ ನಡೆಸ
ಬೇಕಿದೆ. ಜತೆಗೆ ಕೆಂಪೇಗೌಡರ ಆಳ್ವಿಕೆಯಲ್ಲಿನ ಕೆರೆ ಕಟ್ಟೆ, ಗೋಕಟ್ಟೆಗಳು, ಗುಡಿಗೋಪುರಗಳು, ಕೋಟೆ ಕೊತ್ತಲುಗಳು ಸೇರಿದಂತೆ ಮಠಗಳು, ಸ್ಮಾರಕಗಳು, ಪಳೆಯುಳಿಕೆಗಳ ಸಂರಕ್ಷಣೆ ಮಾಡುವುದು ಪ್ರಾಧಿಕಾರದ ಉದ್ದೇಶವಾ ಗಿದೆ. ಆದೆ ಇದ್ಯಾವುದು ಆಗದಿರುವುದು ದುರಂತ. ಹಿಂದಿನ ಸರ್ಕಾರ 2017 ಜು.27 ರಂದು ಕೆಂಪೇಗೌಡ ಜಯಂತಿ ಆಚರಣೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.
ಆದರೆ ಜಯಂತಿ ಆಚರಣೆ ಆಡಂಬರ ಹಾಗೂ ಭಾಷಣಕ್ಕೆ ಮಾತ್ರ ಸೀಮಿತಗೊಂಡಿದೆ. ಕೆರೆ ಕಟ್ಟೆಗಳು, ಕಲ್ಯಾಣಿಗಳು, ಕೋಟೆ ಕೊತ್ತಲುಗಳು, ಗುಡಿಗೋಪುರ, ಸ್ಮಾರಕ ಅಭಿವೃದ್ಧಿಪಡಿಸುವಲ್ಲಿ ಪ್ರಾಧಿಕಾರ ವಿಫಲವಾಗಿರುವುದು
ಅಲ್ಲಿಯ ಅವ್ಯವಸ್ಥೆಗೆ ಸಾಕ್ಷಿ.
ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.