ಆ.29ಕ್ಕೆ ಕೆಂಗೇರಿ ಮೆಟ್ರೋ ಮಾರ್ಗ ಲೋಕಾರ್ಪಣೆ
Team Udayavani, Aug 22, 2021, 2:19 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ವಿಸ್ತರಿಸಿದ ಕೆಂಗೇರಿ ಮಾರ್ಗಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಆ. 29ಕ್ಕೆ ಉದ್ಘಾಟನೆಗೊಳ್ಳಲಿದ್ದು, 30ಕ್ಕೆ ಸಂಚಾರ ಸೇವೆಗೆ ಲಭ್ಯವಾಗಲಿದೆ.
ಸದ್ಯ ಕೋವಿಡ್ ನಿರ್ಬಂಧಗಳು, ಬಹುತೇಕ ಕಂಪನಿಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಮುಂದುವರಿದಿರುವುದರಿಂದ ಈಗಾಗಲೇ ಇರುವ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ.ಇದನ್ನು ಗಮನದಲ್ಲಿಟ್ಟುಕೊಂಡು ಆರಂಭದಲ್ಲಿ 15 ನಿಮಿಷ ಅಂತರದಲ್ಲಿ ಮೆಟ್ರೋ
ಸೇವೆ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ‘ಫ್ರಿಕ್ವೆನ್ಸಿ’ ಹೆಚ್ಚಿಸಲಾಗುವುದು ಎಂದು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ತರಿಸಿದ ಮಾರ್ಗದ ಬೆನ್ನಲ್ಲೇ ಆರು ಬೋಗಿಗಳ ಮತ್ತೆ 8 ರೈಲುಗಳು ನೇರಳೆ ಮಾರ್ಗಕ್ಕೆ ಸೇರ್ಪಡೆ ಆಗಲಿವೆ.ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಅವುಗಳು ಕಾರ್ಯಾಚರಣೆ ಮಾಡಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಲರ್‌ಫುಲ್ ರಂಗನಾಯಕ ಶೂಟಿಂಗ್‌ನಲ್ಲಿ ಬಿಝಿ
ನಾಲ್ಕೈದು ದಿನಗಳ ಹಿಂದಷ್ಟೇ ಉದ್ದೇಶಿತ ಮಾರ್ಗದಲ್ಲಿ ಸೇವೆ ಆರಂಭಿಸಲು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ದೊರಕಿತ್ತು. ಬಿಎಂಆಆರ್‌ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ದಿನಾಂಕ ನಿಗದಿ ಎದುರು ನೋಡುತ್ತಿತ್ತು. ಶನಿವಾರ ಇದಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು,ಆಗಸ್ಟ್ 29ರಂದು ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ.
ಕೇಂದ್ರ ವಸತಿ, ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಭಾಗವಹಿಸಲಿದ್ದಾರೆ. ಒಟ್ಟಾರೆ 7.53 ಕಿ.ಮೀ. ಉದ್ದದ ಈ ಮಾರ್ಗವು 1,560 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಒಟ್ಟು 6
ನಿಲ್ದಾಣಗಳು ಬರಲಿವೆ.ಈ ವಿಸ್ತರಣೆಯಿಂದ ನಿತ್ಯ 75 ಸಾವಿರ ಜನರಿಗೆ ಅನುಕೂಲ ಎಂದು ನಿರೀಕ್ಷಿಸಲಾಗಿದೆ.2018ರ ಲ್ಲೇ ಈ ಮಾರ್ಗ ಉದ್ಘಾಟನೆಗೊಳ್ಳಬೇಕಿತ್ತು. ಹಲವು ಕಾರಣದಿಂದ ಗಡುವು ಮೀರಿತ್ತು. ಮಾಜಿ ಸಿಎಂ ಬಿಎಸ್‌ವೈ ಮಾರ್ಗ ಪರಿಶೀಲಿಸಿ ಜುಲೈನಲ್ಲಿ ಲೋಕಾರ್ಪಣೆ ಎಂದಿದ್ದರು.
ಚಲಘಟ್ಟ ಡಿಪೋವರೆಗೆ ಓಡಾಟ
ಮೈಸೂರು ರಸ್ತೆಯಿಂದ ಚಲ್ಲಘಟ್ಟ ಡಿಪೋವರೆಗೆ ಒಟ್ಟಾರೆ 7.53 ಕಿ.ಮೀ. ಎತ್ತರಿಸಿದ ಮಾರ್ಗದ ಉದ್ದವಾಗಿದೆ. ಆದರೆ, ಆ ಪೈಕಿ ಸದ್ಯಕ್ಕೆ 6.2ಕಿ.ಮೀ. ಅಂದರೆ ಕೆಂಗೇರಿವರೆಗೆ ಮಾತ್ರ ಲೋಕಾರ್ಪಣೆಗೊಳ್ಳುತ್ತಿದೆ.ಕೆಂಗೇರಿಯಿಂದ ಚಲ್ಲಘಟ್ಟ ಒಂದೂವರೆ ಕಿ.ಮೀ. ಉದ್ದದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.