ಕೇರಳ ಬಂದ್; ಕೆಎಸ್ಆರ್ಟಿಸಿಗೆ 10 ಲಕ್ಷ ರೂ.ನಷ್ಟ
Team Udayavani, Jan 4, 2019, 12:50 AM IST
ಬೆಂಗಳೂರು: ಕೇರಳ ಬಂದ್ ಪರಿಣಾಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ದ ಮೇಲೂ ಆಗಿದ್ದು, ಗುರುವಾರ ಸುಮಾರು 10.16 ಲಕ್ಷ ರೂ. ನಷ್ಟ ಆಗಿದೆ.
ಪ್ರತಿದಿನ ಬೆಂಗಳೂರು ಸೇರಿದಂತೆ ಕೆಎಸ್ಆರ್ಟಿಸಿ ವ್ಯಾಪ್ತಿಯ ವಿವಿಧ ವಿಭಾಗಗಳಿಂದ ಸುಮಾರು 180 ಬಸ್ಗಳು ಕರ್ನಾಟಕ-ಕೇರಳ ನಡುವೆ 230 ಟ್ರಿಪ್ಗ್ಳು ಕಾರ್ಯಾಚರಣೆ ಮಾಡುತ್ತವೆ. 9,200 ಜನ ಸಂಚರಿಸುತ್ತಾರೆ. ಆದರೆ, ಕೇರಳ ಬಂದ್ ಹಿನ್ನೆಲೆಯಲ್ಲಿ 92 ಬಸ್ಗಳು ಸಂಚಾರ ಸ್ಥಗಿತಗೊಳಿಸಿದವು. ಇದರ ಪರಿಣಾಮ ನಿಗಮಕ್ಕೆ 10.16 ಲಕ್ಷ ರೂ. ಆದಾಯ ಖೋತಾ ಆಗಿದೆ ಎಂದು ಕೆಎಸ್ಆರ್ಟಿಸಿ ಅಂದಾಜು ಮಾಡಿದೆ.
ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮೈಸೂರು ಗ್ರಾಮಾಂತರ 12, ಮಂಡ್ಯ 1, ಚಾಮರಾಜನಗರ 9, ಹಾಸನ 1, ಚಿಕ್ಕಮಗಳೂರು 2, ಮಂಗಳೂರು 43, ಪುತ್ತೂರಿನಿಂದ 24 ಬಸ್ಗಳು ರದ್ದಾಗಿವೆ. ಇದರಿಂದ 29,120 ಕಿ.ಮೀ. ಸಂಚಾರ ರದ್ದಾಗಿದ್ದು, 10.16 ಲಕ್ಷ ಆದಾಯ ಇಳಿಕೆಯಾಗಿದೆ. ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲೇ ಏಳೂವರೆ ಲಕ್ಷ ರೂ. ನಷ್ಟವಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಗುರುವಾರ ರಾತ್ರಿಯಿಂದ ಬಸ್ಗಳ ಕಾರ್ಯಾಚರಣೆ ಪುನರಾರಂಭಗೊಂಡಿದ್ದು, ರಾತ್ರಿ 11ರವರೆಗೆ ಸುಮಾರು 90 ಬಸ್ಗಳು ಕೇರಳಕ್ಕೆ ತೆರಳಿವೆ ಎಂದೂ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.