ಪೊಲೀಸರ ಕಲಾವಿದರ ಖಾಕಿ ಕ್ರಾನಿಕಲ್
Team Udayavani, Jun 29, 2018, 11:38 AM IST
ಬೆಂಗಳೂರು: ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವ ಕೈಗಳು ಇದೀಗ ಕುಂಚ ಹಿಡಿದು ಕಲೆ ಅರಳಿಸಿದ ಕ್ಷಣವದು. ಪೊಲೀಸರೇ ರೂಪಿಸಿದ ವಿಭಿನ್ನ ರೀತಿಯ ಪೇಂಟಿಂಗ್, ಕರಕುಶಳ ಕಲೆ, ಫೋಟೋಗ್ರಾಫಿ ಸೇರಿದಂತೆ ಒಟ್ಟು 77 ಪ್ರಕಾರದ ಕಲೆಗಳನ್ನು ಒಳಗೊಂಡ “ಖಾಕಿ ಕ್ರಾನಿಕಲ್ಸ್’ ಪ್ರದರ್ಶನ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ಆರಂಭವಾಗಿದೆ.
ಜುಲೈ 1ರವರೆಗೆ ನಡೆಯಲಿರುವ ಕಲಾ ಪ್ರದರ್ಶನವನ್ನು ನಟ ಯಶ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಉದ್ಘಾಟಿಸಿದರು. ಸಿಎಆರ್ ಡಿಸಿಪಿ ವರ್ತಿಕಾ ಕಟಿಯಾರ್, ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ, ಮುನಿರಾಬಾದ್‌ನ ಇಂಡಿಯಾ ರಿಸರ್ವ್ ಬೆಟಾಲಿಯನ್‌ನ ಕಮಾಂಡೆಂಟ್ ನಿಶಾ ಜೇಮ್ಸ್ ಸೇರಿ ವಿವಿಧ ದರ್ಜೆಯ 19 ಅಧಿಕಾರಿ ಮತ್ತು ಸಿಬ್ಬಂದಿ ರಚಿಸಿರುವ ಕಲಾ ಪ್ರದರ್ಶನಗಳು ಗಮನ ಸೆಳೆಯುತ್ತಿವೆ. ಇದೇ ವೇಳೆ ಕೆಎಸ್‌ಆರ್‌ಪಿ ಪೇದೆ ಶ್ರೀರಾಮುಲು ರಚಿಸಿರುವ ಪೇಟಿಂಗ್ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಸಂತಸ ಉಂಟು ಮಾಡಿತು.
ಈ ವೇಳೆ ಮಾತನಾಡಿದ ಪ್ರದರ್ಶನದ ಆಯೋಜಕರಾದ ರೇವಾಸ್ ಆರ್ಟ್ ಗ್ಯಾಲರಿ ಸಂಯೋಜಕಿ, ಕಲಾವಿದೆ ರಜನಿ ರೇಖಾ, ಆರಂಭದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಕಲೆಯನ್ನು ಪ್ರದರ್ಶನ ಮಾಡುವ ಯೋಚನೆ ಇತ್ತು. ಆದರೆ, ದಿನ ಕಳೆದಂತೆ ಹಲವು ಪೊಲೀಸರು ಒಂದೊಂದೆ ಕಲೆಗಳು, ಕೌಶಲ್ಯಗಳು ಪ್ರದರ್ಶನಕ್ಕೆ ಬಂದವು ಎಂದರು. ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರವೀಣ್ ಸೂದ್, ಕೆ.ತ್ಯಾಗರಾಜನ್, ಎಂ.ಎ ಸಲೀಂ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.