ಗಣರಾಜ್ಯೋತ್ಸವಕ್ಕೆ ಖಾಕಿ ಕಣ್ಗಾವಲು
Team Udayavani, Jan 26, 2018, 11:59 AM IST
ಬೆಂಗಳೂರು: ಮಹದಾಯಿ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಯಶಸ್ವಿಯಾದ ಪೊಲಿಸ್ ಇಲಾಖೆ ಶುಕ್ರವಾರ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಗೂ ಕಟ್ಟೆಚ್ಚರ ವಹಿಸಿದೆ.
ಮಾಣಿಕ್ ಷಾ ಪರೇಡ್ ಮೈದಾನ, ವಿಧಾನ ಸೌಧ, ಹೈಕೋರ್ಟ್, ಎಂ.ಎಸ್ ಬಿಲ್ಡಿಂಗ್ ಸೇರಿದಂತೆ ಸರ್ಕಾರಿ ಕಚೇರಿ ಕಟ್ಟಡಗಳ ಬಳಿ ಬಂದೋಬಸ್ತ್ ಕೈಗೊಂಡಿದೆ. ಆಯಾ ವಿಭಾಗದ ಎಲ್ಲ ಡಿಸಿಪಿಗಳಿಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸೂಚನೆ ನೀಡಿದ್ದಾರೆ.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜರುಗುವ ಗಣರಾಜ್ಯೋತ್ಸವದ ಭದ್ರತೆಗೆ 9 ಡಿಸಿಪಿ, 16 ಎಸಿಪಿ, 51 ಪಿಐ, 92 ಪಿಎಸ್‌ಐ, 16 ಮಹಿಳಾ ಪಿಎಸ್‌ಐ, 77 ಎಎಸ್‌ಐ, 535 ಎಚ್‌ಸಿ/ಪಿಸಿ, 71 ಮಹಿಳಾ ಸಿಬ್ಬಂದಿ, 56 ಕ್ಯಾಮೆರಾ ಸಿಬ್ಬಂದಿ, 126 ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ, 8 ಕೆಎಸ್‌ಆರ್‌ಪಿ ತುಕಡಿ, 2 ಡಿಸ್ವಾಟ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಗುರುಡ ಪಡೆ ಹಾಗೂ ಕಮಾಂಡ್ ಕಂಟ್ರೋಲ್ ವಾಹನಗಳು, 8 ಎ.ಎಸ್.ಪರಿಶೀಲನಾ ತಂಡಗಳನ್ನು ನಿಯೋಜಿಸಿದ್ದು ಮುಂಜಾನೆಯೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದೆ.
ಅಲದೆ ಸಾರ್ವಜನಿಕ ಪ್ರದೇಶಗಳಾದ ಮೆಜೆಸ್ಟಿಕ್, ರೈಲ್ವೇ ನಿಲ್ದಾಣ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದ್ದು, ಹೊಯ್ಸಳ ವಾಹನಗಳು ಗಸ್ತು ತಿರುಗಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್ ?
Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ
Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಸಮಸ್ಯೆ
Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು
Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.