ಖಾತಾ ಸಮಸ್ಯೆ ಇತ್ಯರ್ಥಕ್ಕೆ ಖಾತಾ ಅಭಿಯಾನ

Team Udayavani, Feb 25, 2023, 1:12 PM IST

TDY-6

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿ ಸೇರಿ ಇನ್ನಿತರ ಕಾರ್ಯಕ್ಕಾಗಿ ಅಗತ್ಯವಿರುವ ಆಸ್ತಿಗಳ ಖಾತೆ ಪಡೆಯುವುದಕ್ಕೆ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಫೆ.27ರಿಂದ ಮಾ. 31ರವರೆಗೆ ಎಲ್ಲ 8 ವಲಯ ವ್ಯಾಪ್ತಿಯಲ್ಲಿ ಖಾತಾ ಆಂದೋಲನ ನಡೆಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಆರ್‌.ಎಲ್‌.ದೀಪಕ್‌, ಆಸ್ತಿಯ ಮಾಲೀಕತ್ವ ದೃಢಪಡಿಸಲು ಪ್ರಮುಖವಾಗಿ ಖಾತೆ ಪ್ರಮಾಣಪತ್ರದ ಅವಶ್ಯಕತೆಯಿದೆ. ಅದರಲ್ಲೂ ಎ ಮತ್ತು ಬಿ ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲ ನಿವಾರಿಸಲು ಖಾತಾ ನೋಂದಣಿ ಮಾಡಿಕೊಳ್ಳಬೇಕು. ಆದರೆ, ಖಾತೆ ಪಡೆಯುವ ಸಲುವಾಗಿ ಬಿಬಿಎಂಪಿಯ ಕಂದಾಯ ವಿಭಾಗದ ಕಚೇರಿಗಳಿಗೆ ಜನರು ಅಲೆಯಬೇಕಾಗುತ್ತದೆ. ಈ ತಾಪತ್ರಾಯವನ್ನು ತಪ್ಪಿಸಲು ಸಲುವಾಗಿ ಒಂದು ತಿಂಗಳ ಕಾಲ ಖಾತಾ ಆಂದೋಲನ ನಡೆಸಲಾಗುತ್ತಿದೆ. ಹೊಸ ಬಡಾವಣೆಯಲ್ಲಿ ನಿವೇಶನ ಖರೀದಿಸಿರುವವರು, ಅಪಾರ್ಟ್ ಮೆಂಟ್‌ಗಳಲ್ಲಿ ಫ್ಲಾಟ್‌ ಖರೀದಿಸಿರುವವರು, ಖಾತೆಯ ಹೆಸರು ಬದಲಿಸಿಕೊಳ್ಳುವವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ‌

ಬಿಬಿಎಂಪಿಯ ಎಲ್ಲ 64 ಉಪವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳ ಬಳಿ ಖಾತೆಗೆ ಸಂಬಂಧಿಸಿದ ಕಾರ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೀಗೆ ಖಾತೆಗೆ ಅರ್ಜಿ ಸಲ್ಲಿಸಿದ ದಿನದಂತೆ ಆ ಕಾರ್ಯ ಮಾಡಲಾಗು ತ್ತದೆಯೇ, ದಾಖಲೆಗಳು ಸಮರ್ಪಕವಾಗಿವೆಯೇ ಎಂಬ ಬಗ್ಗೆ ಅರ್ಜಿದಾರರಿಗೆ ತಿಳಿಸಬೇಕು ಎಂದು ಸಹಾಯಕ ಕಂದಾಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೆ, ಕಂದಾಯ ಅಧಿಕಾರಿಗಳು ಅನುಮೋದನೆ ನೀಡಬಹುದಾದ ಅರ್ಜಿಗಳನ್ನು 7 ದಿನಗಳಲ್ಲಿ ವಿಲೇವಾರಿ ಮಾಡಬೇಕು. ವಲಯ ಉಪ ಆಯುಕ್ತರು 10 ದಿನ ಹಾಗೂ ವಲಯ ಜಂಟಿ ಆಯುಕ್ತರು 15 ದಿನಗಳೊಳಗಾಗಿ ಅರ್ಜಿ ವಿಲೇವಾರಿ ಮಾಡುವಂತೆ ದಿನ ನಿಗದಿ ಮಾಡಲಾಗಿದೆ. ಹೀಗಾಗಿ ಯಾವುದೇ ಅರ್ಜಿಯಾದರೂ ಎ ಮತ್ತು ಬಿ ಖಾತೆ ನೀಡುವ ಸಂಬಂಧ 7ರಿಂದ 15 ದಿನಗಳೊಳಗಾಗಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಅರ್ಜಿ ಸಲ್ಲಿಸಿ ಎ ಖಾತೆ ಪಡೆಯುವವರಿಗೆ ನೋಂದಣಿ ಶುಲ್ಕದ ಶೇ. 2ರಷ್ಟು ಅಥವಾ ಕನಿಷ್ಠ 500 ರೂ.ಗಳನ್ನು ಶುಲ್ಕದ ರೂಪದಲ್ಲಿ ವಸೂಲಿ ಮಾಡಲಾಗುವುದು. ಬಿ ಖಾತಾ ಪಡೆಯುವವರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಒಟ್ಟಾರೆ ಒಂದು ತಿಂಗಳ ಆಂದೋಲನದಲ್ಲಿ ಬಿಬಿಎಂಪಿಗೆ 100 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ. ಖಾತಾ ಆಂದೋಲದ ಮೇಲೆ ನಿಗಾವಹಿಸಲು ಹಾಗೂ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು ಆಯಾ ವಲಯಗಳ ಉಪ ಆಯುಕ್ತರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ ಎಂದು ಹೇಳಿದರು.

ನಕಲಿ ಎ ಖಾತೆಗಳ ಪರಿಶೀಲನೆ : ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾಗಳಿಗೆ ಅಕ್ರಮವಾಗಿ ಎ ಖಾತಾ ನೀಡಿರುವ ಕುರಿ ತಂತೆ ದೂರುಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಅಕ್ರಮ ಎ ಖಾತಾಗಳ ಪತ್ತೆಗೆ ಮುಖ್ಯ ಆಯುಕ್ತರು ಸಮಿತಿ ರಚಿಸಿದ್ದಾರೆ. ಈಗಾಗಲೇ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಗ್ರಾಮ ಪಂಚಾಯಿತಿ, ನಗರಸಭೆ, ಪಟ್ಟಣ ಪಂಚಾಯಿತಿಗಳಿಂದ ನೀಡಲಾಗಿದ್ದ ಖಾತೆಗಳು, ನೋಂದಣಿಯಾಗಿದ್ದ ಸ್ವತ್ತುಗಳ ಡಿಜಿಟಲ್‌ ಮಾಹಿತಿಯನ್ನು ಪಡೆಯಲಾಗಿದೆ. ಅದನ್ನು ಅಧಿಕಾರಿಗಳ ಮೂಲಕ ಸ್ಥಳಕ್ಕೆ ಭೇಟಿ ನೀಡಿ ಅಥವಾ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಬೇಕಿದೆ ಎಂದು ಡಾ. ದೀಪಕ್‌ ಮಾಹಿತಿ ನೀಡಿದರು.

ಖಾತೆ ಮಾಡಿಕೊಳ್ಳಲು ಅಗತ್ಯವಿರುವ ದಾಖಲೆಗಳು :

ಕಂದಾಯ ಪ್ರದೇಶ: ಸತ್ತಿನ ಹಕ್ಕು ನಿರೂಪಿಸುವ ದಾಖಲೆ, ಭೂಪರಿವರ್ತನೆ ಆದೇಶ, ಸರ್ವೇ ನಕ್ಷೆ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ

ಗ್ರಾಮಠಾಣ: ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆ, ಹಿಂದಿನ ಸ್ಥಳೀಯ ಸಂಸ್ಥೆ ವಿತರಿಸಿರುವ ಅರ್ಜಿ ನಮೂನೆ 9, ತಹಶೀಲ್ದಾರ್‌ ಅಥವಾ ಭೂಮಾಪಕರು ನೀಡಿರುವ ಸರ್ವೇ ನಕ್ಷೆ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ

ಬಿಡಿಎ, ಕೆಎಚ್‌ಬಿ, ಇತರ ಪ್ರಾಧಿಕಾರದಿಂದ ಹಂಚಿಕೆಯಾದ ಸ್ವತ್ತುಗಳು: ಹಂಚಿಕೆ ಪತ್ರ, ಸಂಬಂಧಪಟ್ಟ ಪ್ರಾಧಿಕಾರದಿಂದ ಹಂಚಿಕೆ ಮಡಿರುವ ಸ್ವಾಧೀನ ಪತ್ರ, ಗುತ್ತಿಗೆ ಕರಾರು ಪತ್ರ ಅಥವಾ ಕ್ರಯಪತ್ರ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ

ಬಿಡಿಎ ಅನುಮೋದಿತ ಬಡಾವಣೆ: ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು, ಅನುಮೋದಿತ ಬಡಾವಣೆ ನಕ್ಷೆ, ಬಿಡಿಎಯಿಂದ ಬಿಡುಗಡೆ ಆದೇಶ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ

ಬಿಡಿಎ ರಿಕನ್ವೆ ಪ್ರದೇಶ: ಸ್ವತ್ತಿನ ಹಕ್ಕು ವರ್ಗಾವಣೆ ದಾಖಲೆ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ, ಸುಧಾರಣಾ ವೆಚ್ಚ ಪಾವತಿಸಿರುವ ರಶೀದಿ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.