ಬಾಕಿ ಹಣ ವಸೂಲಿಗೆ ಉದ್ಯಮಿಯ ಪುತ್ರನ ಕಿಡ್ನ್ಯಾಪ್: 3 ತಾಸಲ್ಲೇ ಆರೋಪಿಗಳ ಸೆರೆ
Team Udayavani, Jul 20, 2022, 12:24 PM IST
ಬೆಂಗಳೂರು: ಉದ್ಯಮಿಯ ಮಗನನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳನ್ನು ಘಟನೆ ನಡೆದ 3 ಗಂಟೆಯೊಳಗೆ ಯಲಹಂಕಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಲಬುರಗಿ ಟೌನ್‌ನ ನಿವಾಸಿ ರಮೇಶ್‌ರಾಥೋಡ್ (43),ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್(23), ಹರೀಶ್ ಕುಮಾರ್ (24) ಬಂಧಿತರು.ಯಲಹಂಕ ಕಟ್ಟಿಗೇನಹಳ್ಳಿಯ ನಿವಾ ಸಿಜಗದೀಶ್ (19) ಅಪಹರಣಕ್ಕೊಳಗಾದ ಉದ್ಯಮಿಯ ಪುತ್ರ. ಆರೋಪಿಗಳಿಂದ 1ಇನ್ನೋವಾ, 1 ಫಾರ್ಚುನರ್ ಕಾರನ್ನು ಜಪ್ತಿ ಮಾಡಲಾಗಿದೆ.
ಜಗದೀಶ್ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಜು.18ರಂದುಕಾಲೇಜಿನಿಂದ ಬೈಕ್‌ನಲ್ಲಿ ಬರುತ್ತಿದ್ದಾಗಮಾರ್ಗಮಧ್ಯೆ ಕಟ್ಟಿಗೇನಹಳ್ಳಿಯ ಮುನೇಶ್ವರರಸ್ತೆ ಬಳಿ ಆರೋಪಿಗಳು ಆತನ ಬೈಕ್ ಅನ್ನುಅಡ್ಡಗಟ್ಟಿದ್ದರು. ನಂತರ ಬಲವಂತವಾಗಿ ತಮ್ಮಇನ್ನೋವಾ ಕಾರಿನೊಳಗೆ ಕೂರಿಸಿಕೊಂಡು ಬೆಂಗಳೂರಿನಿಂದ ಚಿತ್ರದುರ್ಗದ ಕಡೆ ತೆರಳಿದ್ದರು.
ಇದನ್ನೂ ಓದಿ: ಅಧ್ಯಕ್ಷರಾಗದೇ ಇದ್ದವರೂ ಸಿಎಂ ಆದ ಸಂಪ್ರದಾಯ ಇದೆ : ಡಿಕೆಗೆ ಸಿದ್ದು ತಿರುಗೇಟು
ಅಪಹರಣ ಮಾಡಿರುವುದನ್ನು ಜಗದೀಶ್‌ನ ಸಹಪಾಠಿಯೊಬ್ಬಳು ಗಮನಿಸಿದ್ದಳು. ಕೂಡಲೇ ಜಗದೀಶ್‌ನ ಸ್ನೇಹಿತ ಇಂದ್ರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ಇಂದ್ರ ಈ ವಿಚಾರವನ್ನು ಪೊಲೀಸರು ಹಾಗೂ ಜಗದೀಶ್ ಪಾಲಕರಿಗೆ ತಿಳಿಸಿದ್ದ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ಅಪಹರಣ ಮಾಡಿರುವುದನ್ನು ಗಮನಿಸಿದ ಜಗದೀಶ್ ಸಹಪಾಠಿಯಿಂದ ಪ್ರಕರಣದ ಮಾಹಿತಿ ಕಲೆಹಾಕಿದ್ದರು. ಆ ವೇಳೆ ಆಕೆ ಆರೋಪಿಗಳ ಕಾರಿನನಂಬರ್ ಅನ್ನು ಪೊಲೀಸರಿಗೆ ತಿಳಿಸಿದ್ದಳು.
ಆರೋಪಿಗಳ ಸುಳಿವು ಕೊಟ್ಟ ಕಾರ್ ನಂಬರ್: ಆರೋಪಿಗಳ ಇನ್ನೋವಾ ಕಾರಿನ ಜಾಡು ಹಿಡಿಯಲು ಹೊರಟ ಪೊಲೀಸರುಚಿತ್ರದುರ್ಗ ಹಾಗೂ ನೆಲಮಂಗಲಪೊಲೀಸರಿಗೆ ಕಾರಿನ ಮಾಹಿತಿ ನೀಡಿದ್ದರು.ಆರೋಪಿಗಳ ಕಾರು ನೆಲಮಂಗಲ ಟೋಲ್‌ಮೂಲಕ ಚಿತ್ರದುರ್ಗದ ಕಡೆ ಸಾಗಿರುವುದುಪತ್ತೆಯಾಗಿತ್ತು. ಈ ನಡುವೆ ತುಮಕೂರಿನಸಮೀಪ ಜಗದೀಶ್ ಆರೋಪಿಗಳಿಂದತಪ್ಪಿಸಿಕೊಂಡು ಬೆಂಗಳೂರಿನತ್ತ ಬಂದಿದ್ದ. ಇತ್ತ ಚಿತ್ರದುರ್ಗದಲ್ಲಿ ಆರೋಪಿಗಳ ಕಾರು ಓಡಾಡುತ್ತಿರುವುದನ್ನು ಅಲ್ಲಿನ ಪೊಲೀಸರುಪತ್ತೆ ಹಚ್ಚಿ ಯಲಹಂಕ ಪೊಲೀಸರಿಗೆ ಮಾಹಿತಿನೀಡಿದ್ದರು. ಯಲಹಂಕ ಪೊಲೀಸರ ತಂಡ ಚಿತ್ರದುರ್ಗಕ್ಕೆ ತೆರಳಿ ಪ್ರಕರಣ ದಾಖಲಾದ 3ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ, ನಗರಕ್ಕೆ ಕರೆ ತಂದಿದೆ.
3 ಕೋಟಿ ರೂ. ಬಾಕಿ ವಸೂಲಿಗೆ ಅಪಹರಣ :
ರಮೇಶ್ ರಾಥೋಡ್ ಕಲಬುರಗಿಯಲ್ಲಿ ಸ್ವಂತ ಮಿಲ್ ಹೊಂದಿದ್ದು, ತೋಗರಿ ಬೇಳೆ ಹಾಗೂ ಇನ್ನಿತರ ಧಾನ್ಯಗಳ ವ್ಯವಹಾರ ನಡೆಸುತ್ತಿದ್ದ. ಉದ್ಯಮಿ ಸುರೇಶ್ ರಿಟೈಲ್ ವ್ಯಾಪಾರಿಯಾಗಿದ್ದು, ಕೆಲ ಸಮಯದ ಹಿಂದೆ ರಮೇಶ್‌ನಿಂದ ಬೇಳೆ ಖರೀದಿಸುವ ಸಂಬಂಧ ಕೋಟ್ಯಂತರ ರೂ. ವ್ಯವಹಾರ ನಡೆಸಿದ್ದ. ಆದರೆ, ರಮೇಶ್‌ಗೆ 3 ಕೋಟಿ ರೂ. ಕೊಡಲು ಸುರೇಶ್ ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ಸಾಲದ್ದಕ್ಕೆ ಸುರೇಶ್ ಸಹೋದರನೂ ಆರೋಪಿಯೊಂದಿಗೆ ವ್ಯವಹಾರ ನಡೆಸಿ ಹಣ ಕೊಡಲು ಬಾಕಿ ಉಳಿಸಿಕೊಂಡಿದ್ದು, ಸದ್ಯ ಆತ ದುಬೈನಲ್ಲಿ ನೆಲೆಸಿದ್ದಾನೆ.ಈ ಬಗ್ಗೆ ಕಲಬುರಗಿ ಪೊಲೀಸ್ ಠಾಣೆಯಲ್ಲಿ ಸುರೇಶ್ ವಿರುದ್ಧ ಆರೋಪಿ ರಮೇಶ್ ದೂರು ನೀಡಿದರೂ, ಪ್ರಯೋಜನವಾಗಿರಲಿಲ್ಲ. ಹೇಗಾದರೂ ಮಾಡಿ ಬಾಕಿ ಇರುವ 3 ಕೋಟಿ ರೂ. ಅನ್ನು ವಾಪಾಸ್ ಪಡೆಯಬೇಕು ಎಂಬ ಉದ್ದೇಶದಿಂದ ಸುರೇಶ್ ಪುತ್ರ ಜಗದೀಶ್‌ನನ್ನುಅಪಹರಿಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಕೃತ್ಯ ಎಸಗಲೆಂದು ರಮೇಶ್ ತನ್ನ ಸಹಚರರಾದ ಇತರ ಆರೋಪಿಗಳ ಸಹಾಯ ಪಡೆದಿದ್ದ. ಜಗದೀಶ್‌ನನ್ನು ಅಪಹರಿಸಿ ಕಲಬುರಗಿಗೆ ಕರೆದುಕೊಂಡು ಹೋಗಲು ಆರೋಪಿಗಳು ಮುಂದಾಗಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.