ಕಿಡ್ನಿ ಜಾಗೃತಿ ಜಾಥಾದಲ್ಲಿ ಶಿವಣ್ಣ ಹೆಜ್ಜೆ
Team Udayavani, Mar 10, 2017, 11:54 AM IST
ಮಹದೇವಪುರ: ವಿಸ್ವ ಮೂತ್ರ ಪಿಂಡ ದಿನಾಚರಣೆ ಅಂಗವಾಗಿ ವೈಟ್‌ಫೀಲ್ಡ್ ನ ವೈದೇಹಿ ಆಸ್ಪತ್ರೆ ಬಳಿ ಕಾಲ್ನಡಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಚಿತ್ರನಟ ಡಾ. ಶಿವರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದರು.
“ಒಬ್ಬ ವ್ಯಕ್ತಿಯ ಅಂಗಾಂಗಗಳ ದಾನದಿಂದ 15 ಮಂದಿಯ ಜೀವ ಉಳಿಸಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ ಅಂಗಾಂಗಗಳ ದಾನಕ್ಕೆ ಮನಸ್ಸು ಮಾಡಬೇಕು. ವ್ಯಕ್ತಿಯೊಬ್ಬರು ಮೃತಟ್ಟರೆ ಅವರ ಇಡೀ ಕುಟುಂಬ ನೋವಿನಲ್ಲಿರುತ್ತದೆ. ಅಂಥ ಸಂದರ್ಭದಲ್ಲೂ ಮತ್ತೂಂದು ಜೀವದ ಉಳಿವಿಕೆಗೆ ಯೋಚನೆ ಮಾಡುವುದು ದೊಡ್ಡತನ. ಅಂಗಾಂಗ ದಾನದ ಬಗ್ಗೆ ಕೆಲವರಲ್ಲಿ ಪೂರ್ವಪೀಡಿತ ಕಲ್ಪನೆಗಳಿವೆ. ಅವುಗಳನ್ನು ಅಳಿಸಿಹಾಕಬೇಕಾದ ಅಗತ್ಯವಿದೆ,” ಎಂದರು.
“ದೇಶದಲ್ಲಿ ಪ್ರತಿವರ್ಷ 1ಲಕ್ಷ ಜನ ಶಾಶ್ವತ ಕಿಡ್ನಿ ವೈಪಲ್ಯಕ್ಕೆ ಸಿಲುಕುತ್ತಿದ್ದಾರೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದು ಮಾತ್ರ ಕೇವಲ 6ರಿಂದ 7ಸಾವಿರ ಜನ. ಇದಕ್ಕೆ ಹಣಕಾಸಿನ ಬಿಕ್ಕಟ್ಟೂ ಕಾರಣವಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು. ಇದೆ ವೇಳೆ ಮಾತನಾಡಿದ ಮಲ್ಯ ಆಸ್ಪತ್ರೆಯ ನೆಪ್ರಾಲಜಿ ತಜ್ಞ ಡಾ.ಅರುಣ್ “ಪ್ರತಿದಿನ ಅರ್ಧ ಗಂಟೆ ಒಬ್ಬ ವ್ಯಕ್ತಿ ವ್ಯಾಯಾಮ ಮಾಡಿದರೆ ಕಿಡ್ನಿ ವೈಪಲ್ಯ ತಡೆಯಬಹುದು,” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.