ಎನ್‌ಎಂಐಟಿಯಿಂದ ಕಿಟ್ ವಿತರಣೆ
Team Udayavani, May 8, 2020, 4:00 PM IST
ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ತಮ್ಮ ಬೆಳೆಗಳಿಗೆ ತಕ್ಕುದಾದ ಬೆಲೆ ಸಿಗದೆ ನಮ್ಮ ರೈತ ಬಾಂಧವರು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ಆಧಾರ ವಾಗಿರುವ ಕೃಷಿಕಾರ್ಮಿಕರ ಯೋಗಕ್ಷೇಮ ಕಾಪಾಡುವುದು ನಾಗರಿಕ ಸಮಾಜದ ಹೊಣೆ ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ (ಎನ್‌ಎಂಐಟಿ) ಹಿರಿಯ ಸಲಹೆಗಾರ ಹಾಗೂ ಕರ್ನಾಟಕ ಕೇಂದ್ರೀಯ ವಿವಿ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಯಲಹಂಕದ ಎನ್‌ಎಂಐಟಿ “ಉನ್ನತ ಭಾರತ ಅಭಿಯಾನ’ದ ಘಟಕ ಹಮ್ಮಿಕೊಂಡಿದ್ದ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳ ಕಿಟ್ ವಿತರಣೆ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಡತನ, ಅಸಮಾನತೆ ಹಾಗೂ ನಿರುದ್ಯೋಗ ಸಂಪೂರ್ಣ ನಿವಾರಣೆಯಾಗಬೇಕು. ಆಗಲೇ ಅಭಿವೃದ್ಧಿ ಸಾಧ್ಯ ಎಂದರು. ಎನ್‌ಎಂಐಟಿ ಪ್ರಾಂಶುಪಾಲ ಡಾ. ಎಚ್.ಸಿ.ನಾಗರಾಜ್ ಮಾತನಾಡಿ, ಈ ಘಟಕ ನಮ್ಮ ಶಿಕ್ಷಣ ಸಂಸ್ಥೆಯ ನೆರೆಹೊರೆಯ ಬೆಟ್ಟಹಲಸೂರು, ದೊಡ್ಡಜಾಲ, ತರುಹುಣಿಸೆ, ತಳಗವಾರ ಹಾಗೂ ಮುತ್ತೂರು ಗ್ರಾಮಗಳಲ್ಲಿನ ಬಡ ಕೃಷಿಕಾರ್ಮಿಕ ಕುಟುಂಬಗಳಿಗೆ ಈ ತನಕ ಸುಮಾರು 5 ಸಾವಿರ ದಿನಸಿ ಹಾಗೂ ತರಕಾರಿ ಪ್ಯಾಕೆಟ್‌ಗಳನ್ನು ವಿತರಿಸಿದೆ ಎಂದು ತಿಳಿಸಿದರು.
ಉನ್ನತ ಭಾರತ ಅಭಿಯಾನ 2014ರಲ್ಲಿ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗ್ರಾಮೀಣಾಭಿವೃದ್ಧಿಗೆ ಆರಂಭಿಸಿದ ಆಂದೋಲನ. ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದನೆ ಮಾತ್ರವಲ್ಲದೆ, ಹಳ್ಳಿಗರಿಗೆ ಪರಿಸರಸ್ನೇಹಿ ತಂತ್ರಜ್ಞಾನವನ್ನು ಪರಿಚಯಿಸುವುದೂ ಈ ಆಂದೋಲನದ ಗುರಿ ಎಂದು ಘಟಕದ ಶಿಕ್ಷಕ ಸಂಯೋಜಕ ಪ್ರೊ. ಎಂ.ಎನ್. ತಿಪ್ಪೇಸ್ವಾಮಿ ವಿವರಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಟಿ.ಆರ್. ವಿನಯ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.