ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಕಟ


Team Udayavani, Mar 8, 2018, 6:35 AM IST

Minister-Umashree–0752.jpg

ಬೆಂಗಳೂರು: ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ವಿವಿಧ ಕ್ಷೇತ್ರದ ಸಾಧಕಿಯರಿಗೆ ನೀಡುವ 2017-18ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಮಹಿಳೆಯರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು, ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದರ ಜತೆಗೆ ಕಲೆ, ಕ್ರೀಡೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಮಹಿಳೆಯರು ಮತ್ತು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದ ಮಹಿಳೆ ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ದೇವದಾಸಿ ಪದ್ದತಿಯ ನಿರ್ಮೂಲನೆಗಾಗಿ 2017-18ನೇ ಸಾಲಿನ ಪದ್ಮಶ್ರೀ ಪುರಸ್ಕೃತ ಸೀತವ್ವ ದುಂಡಪ್ಪ ಜೋಡತ್ತಿ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ, ಸ್ತ್ರೀಶಕ್ತಿ  ಗುಂಪಿನ ಮಹಿಳೆಯರು ಹಮ್ಮಿಕೊಂಡಿರುವ ಆದಾಯೋತ್ಪನ್ನ ಚಟುವಟಿಕೆಗಳ ಸಾಧನೆ ಬಿಂಬಿಸುವ ಅಂತರಾಳ ಕಿರುಹೊತ್ತಿಗೆಯ 13ನೇ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಅಭಿವೃದ್ದಿಗಾಗಿ ಶ್ರಮಿಸಿದ ಉತ್ತಮ ಸಂಸ್ಥೆಗಳು: ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸಮೃದ್ದಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವಿಜಯಪುರ ಶ್ರೀ ಗುರುಮಾತೆಯರ ಮಹಿಳಾ ಸೌಹಾರ್ದ ಸಹಕಾರಿ ನಿಗಮ, ಬೆಂಗಳೂರು ನಗರದ ಸಾಧನಾ ವನಿತಾ ಮಂಡಳಿ, ಮೈಸೂರಿನ ಓಂ ಶ್ರೀ ಸಾಯಿ ಟ್ರಸ್ಟ್‌, ಮಂಂಡ್ಯ ಜಿಲ್ಲೆ ಮಲವಳ್ಳಿ ತಾಲೂಕಿನ ಶ್ರೀ ಅಂಬಿಕಾ ಮಹಿಳಾ ಮಂಡಳಿ,ಧಾರವಾಡದ ಯಲ್ಲಾಪುರ ವಿಶ್ವಬಂಧು ಸೇವಾ ಸಂಸ್ಥೆ.

ಉತ್ತಮ ವ್ಯಕ್ತಿ ಪ್ರಶಸ್ತಿ:ಬೆಂಗಳೂರು ಲಿಂಗರಾಜಪುರದ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸಂಘದ ಸಲ್ಮಾ ತಾಜ್‌, ಯಲಹಂಕದ ರಾಮ ಗೊಂಡನಹಳ್ಳಿಯ ಸಾಯಿಚೈತನ್ಯ ಚಾರಿ ಟೆಬಲ್‌ ಟ್ರಸ್ಟ್‌ನ ಅನುಷಾ ಎನ್‌.ಆರ್‌. ರಮೇಶ್‌, ಸಂಪಂಗಿರಾಮ ನಗರದ ಕೆ.ಯನ್‌.ಸವಿತಾ ರಾಮು, ತುಮಕೂರಿನ ಎಚ್‌.ಆರ್‌.ಶಾಲಿನಿ, ಮೈಸೂರಿನ ರಚನಾ ಮಹೇಶ್‌, ಮಂಡ್ಯದ ಕೆ.ಪಿ.ಅರುಣಕುಮಾರಿ, ಬಾಗಲಕೋಟೆ ನವನಗರದ ಲಕ್ಷ್ಮೀ ಡಿ.ಗೌಡರ, ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ನಂದಾದೇವಿ.

ಕಲಾಕ್ಷೇತ್ರ: ವಿಜಯಪುರದ ಅನಸೂಯ ಕುಲಕರ್ಣಿ. ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಮಾಲತಿ ಸುಧೀರ್‌, ಬೆಂಗಳೂರು ಜಯನಗರದ ಪದ್ಮಾ ಹೇಮಂತ್‌, ಅನ್ನಪೂರ್ಣೇಶ್ವರಿನಗರದ ಪದ್ಮಜಾ ಜಯರಾಂ.

ಸಾಹಿತ್ಯ ಕ್ಷೇತ್ರ: ಮೈಸೂರು ಜಯನಗರದ ಪಿ.ಕುಸುಮ ಅಯರಹಳ್ಳಿ (ಕುಸುಮಬಾಲೆ), ಬೆಂಗಳೂರಿನ ಯಲಹಂಕದ ಅಟ್ಟೂರಿನ ಇಂದಿರಾ ಕೃಷ್ಣಪ್ಪ, ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಶಶಿಕಲಾ ವಸOಉದ.

ಕ್ರೀಡಾ ಕ್ಷೇತ್ರ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಲಿತಾ ಲಮಾಣಿ,ಮಂಡ್ಯ ಜಿಲ್ಲೆ ಮಲವಳ್ಳಿ ತಾಲೂಕಿನ ರತ್ನಮ್ಮ.

ಶಿಕ್ಷಣ ಕ್ಷೇತ್ರ: ಧಾರವಾಡ ಜಿಲ್ಲೆ ಹಳೆ ಹುಬ್ಬಳ್ಳಿಯ ಸುವರ್ಣಲತಾ ಜಿ. ಗದಿಗೆಪ್ಪಗೌಡ.

ವೀರ ಮಹಿಳೆ ಪ್ರಶಸ್ತಿ
– ಬೆಂಗಳೂರು ಎಚ್‌ಎಸ್‌ ಆರ್‌ ಲೇಔಟ್‌ನ ಶಾಲಿನಿ ಸರಸ್ವತಿ.

2017-18ನೇ ಸಾಲಿಗೆ ರಾಜ್ಯಮಟ್ಟದ ಪ್ರಶಸ್ತಿಗೆ
ಆಯ್ಕೆಯಾದ ಸ್ತ್ರೀಶಕ್ತಿ ಗುಂಪು/ ಒಕ್ಕೂಟಗಳು

–  ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕು ಹೆಸರಘಟ್ಟದ ಸ್ಪಂದನ ಸ್ತ್ರೀಶಕ್ತಿ ಗುಂಪು,ಕೋಲಾರ ಜಿಲ್ಲೆ ಮಾಲೂರು ತಾಲೂಕು ಭುವನಹಳ್ಳಿಯ ಶಿವಸ್ತ್ರೀಶಕ್ತಿ  ಗುಂಪು, ಧಾರವಾಡ ಜಿಲ್ಲೆ ಕಲಘಟಕಿಯ ದಮ್ಮವಾಡದ ನಂದಿನಿ ಸ್ತ್ರೀಶಕ್ತಿ ಗುಂಪು.

ವಿಭಾಗೀಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ
ಸ್ತ್ರೀಶಕ್ತಿ  ಗುಂಪುಗಳು

ಬೆಂಗಳೂರು ನಗರ ಜಿಲ್ಲೆ ಹೊಸಕೋಟೆ ತಾಲೂಕಿನ ತತ್ತನೂರು ತೇಜಸ್ವಿನಿ ಸ್ತ್ರೀಶಕ್ತಿ  ಗುಂಪು, ಹಾಸನ ಜಿಲ್ಲೆ ಅರಕಲಗೂಡಿನ
ದುರ್ಗಾಪರಮೇಶ್ವರಿ ಸ್ತ್ರೀಶಕ್ತಿ ಗುಂಪು, ಹಾವೇರಿ ತಾಲೂಕಿನ ಮೂಕಾಂಬಿಕ ಸ್ತ್ರೀಶಕ್ತಿ  ಗುಂಪು, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕು ಕೂಡ್ಲಿಯ ತಾಜ್‌ ಬೀಬಿ ಸ್ತ್ರೀಶಕ್ತಿ ಗುಂಪು.

ತಾಲೂಕು ಸ್ತ್ರೀಶಕ್ತಿ 
ಒಕ್ಕೂಟಗಳು

–  ಬೆಂಗಳೂರು ನಗರ ಜಿಲ್ಲೆ, ಉತ್ತರ ತಾಲೂಕು ಸ್ತ್ರೀಶಕ್ತಿ ಒಕ್ಕೂಟ
–  ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕುಸ್ತ್ರೀಶಕ್ತಿ  ಒಕ್ಕೂಟ,
– ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಸ್ತ್ರೀಶಕ್ತಿ  ಒಕ್ಕೂಟ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.