ಬಡವರಿಗೆ ಉಚಿತವಾಗಿ ಮಂಡಿ ಶಸ್ತ್ರಚಿಕಿತ್ಸೆ ಶಿಬಿರ
Team Udayavani, Sep 1, 2017, 11:51 AM IST
ಬೆಂಗಳೂರು: ವಿವಿಧ ಬಗೆಯ ಆರ್ಥೋ (ಮೂಳೆ ) ಸಮಸ್ಯೆಯಿಂದ ನಡೆಯಲು ಸಾಧ್ಯವಾಗದ ಸಮಸ್ಯೆ ಎದುರಿಸುತ್ತಿರುವ ಬಡ ವರ್ಗದ ರೋಗಿಗಳಿಗೆ ಸಂಜಯ್ ಗಾಂಧಿ ತುರ್ತು ಮತ್ತು ಮೂಳೆ ಚಿಕಿತ್ಸಾ ಸಂಸ್ಥೆಯಿಂದ ಉಚಿತವಾಗಿ ಮೊಣಕಾಲು ಚಿಪ್ಪು ಬದಲು ಶಸ್ತ್ರಚಿಕಿತ್ಸೆ ಕಾರ್ಯಾಗಾರ ಆಯೋಜಿಸಲಾಗಿದೆ.
ರಾಜ್ಯದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಕುಟುಂಬ, ಯಶಸ್ವಿನಿ ಕಾರ್ಡ್ ಹೊಂದಿರುವರಿಗೆ ಶಸ್ತ್ರ ಚಿಕಿತ್ಸೆ ಉಚಿತ. ಈಗಾಗಲೇ ಆಸ್ಪತ್ರೆಯ ವತಿಯಿಂದಾಗಿ ಮೊದಲ ಹಂತವಾಗಿ 50 ಮಂದಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನು 90 ಮಂದಿಗೆ ಮುಂದಿನ ದಿನಗಳಲ್ಲಿ ಚಿಕಿತ್ಸೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ಎಚ್.ಎಸ್.ಚಂದ್ರಶೇಖರ್, “ಆಸ್ಪತ್ರೆಯಲ್ಲಿ ಈ ವರೆಗೆ ನೋಂದಣಿಯಾದ 140 ಜನರ ಪೈಕಿ ಈಗಾಗಲೇ 140 ಜನರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಉಳಿದ 90 ಮಂದಿಗೆ ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸಡೆ ನಡೆಸಲಾಗುವುದು,’ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಇಂತಹ ಶಸ್ತ್ರಚಿಕಿತ್ಸೆಗಾಗಿ 4-6 ಲಕ್ಷದವರೆಗೆ ಪಡೆಯುತ್ತಾರೆ. ಇದೇ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಮೊಣಕಾಲು ಚಿಪ್ಪು ಬದಲಿಗೆ ಕೇವಲ 75 ಸಾವಿರ ರೂ.ಗಳಲ್ಲಿ ಮಾಡಲಾಗುತ್ತಿದೆ. ಕೆಲವರಿಗೆ ಆ ಮೊತ್ತವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದಾನಿಗಳಿಂದ ಹಣ ಪಡೆದು ಅವರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಡಾ.ಪ್ರಕಾಶಪ್ಪ, ಡಾ.ಅವಿನಾಶ, ಡಾ.ಶೇಖರ್, ವಾಸುದೇವ್‌ರಾವ್ ಸೇರಿ ಪ್ರಮುಖರಿದ್ದರು.
ಆಯ್ಕೆ ಹೇಗೆ?
ರೋಗಿಯ ಆರ್ಥೋ ಸಮಸ್ಯೆ ಯಾವ ಹಂತದಲ್ಲಿದೆ ಎಂಬುದನ್ನು ವೈದ್ಯರು ಮೊದಲಿಗೆ ಪತ್ತೆ ಮಾಡಲಿದ್ದಾರೆ. ಒಂದೊಮ್ಮೆ ಮೊದಲ ಹಂತದಲ್ಲಿದ್ದರೆ ಔಷಧಿ ನೀಡಲಾಗುತ್ತದೆ. ಉಳಿದಂತೆ ಎರಡನೇ ಹಂತ ಕೊನೆ ಭಾಗ ಹಾಗೂ ಮೂರನೇ ಹಂತದಲ್ಲಿದ್ದರೆ ಮಾತ್ರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಆಯ್ಕೆಯಾದವರು 15-20 ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಆನಂತರದಲ್ಲಿ ಅವರಿಗೆ ಫಿಸಿಯೋ ಥೆರಪಿ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಯಾರಿಗೆ ಉಚಿತ ಚಿಕಿತ್ಸೆ
ಬಿಪಿಎಲ್ ಕಾರ್ಡ್, ಯಶಸ್ವಿನಿ ಕಾರ್ಡ್, ಆರೋಗ್ಯ ಶ್ರೀ ಸೇರಿದಂತೆ ನಾನಾ ಆರೋಗ್ಯ ಸೇವೆಗಳನ್ನು ಹೊಂದಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಆರ್ಥಿಕವಾಗಿ ಹಿಂದುಳಿದವರಿಗೂ ಚಿಕಿತ್ಸೆ ನೀಡಲಗುತ್ತದೆ. ಶ್ರೀ ಶಿವಶಕ್ತಿ ಚಾರಿಟಬಲ್ ಟ್ರಸ್ಟ್, ಇನ್ಫೋಸಿಸ್ ಮೊದಲಾದ ಸಂಸ್ಥೆಗಳು ಸೇರಿದಂತೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವರು ದಾನಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.