ರಾಜಧಾನಿಯಲ್ಲಿ ಜ್ಞಾನವಾಹಿನಿ ಸಂಚಾರ


Team Udayavani, Sep 20, 2019, 11:05 AM IST

bng-tdy-4

ಬೆಂಗಳೂರು: ವಿಜ್ಞಾನ, ತಂತ್ರಜ್ಞಾನ, ಕಥೆ, ಕಾದಂಬರಿ, ಗಣ್ಯರ ಜೀವನಚರಿತ್ರೆ, ಸಂವಿಧಾನ, ಮಕ್ಕಳ ಪುಸ್ತಕ ಸೇರಿದಂತೆ ಐದು ಸಾವಿರ ಪುಸ್ತಕಗಳನ್ನು ಹೊತ್ತ ಸಂಚಾರಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವಾಹನ ರಾಜಧಾನಿಯಲ್ಲಿ ಸಂಚರಿಸುತ್ತಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆ “ನ್ಯಾಷನಲ್‌ ಬುಕ್‌ ಟ್ರಸ್ಟ್‌ ಇಂಡಿಯಾ’ (ಎಸ್‌ಬಿಟಿ)ಗೆ ಸೇರಿದ ಬಸ್‌, ಆ.28ರಿಂದ ನಗರದಲ್ಲಿಯೇ ಸಂಚರಿಸುತ್ತಿದ್ದು, ಸೆ.21ರವರೆಗೆ ಸಂಚರಿಸಿ, ಅಕ್ಟೋಬರ್‌ ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಿರುಡಲಿದೆ.

ಬಳಿಕ ಆಂಧ್ರಪ್ರದೇಶ ಸೇರಿ ಇತರ ರಾಜ್ಯಗಳಿಗೆ ತೆರಳಲಿದೆ. ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿರುವ ಅಭ್ಯರ್ಥಿಗಳಿಗೆ ಅಗತ್ಯವಿರುವ ವಿಜ್ಞಾನ, ಸಂವಿಧಾನ ಸೇರಿ ಹಲವು ವಿಷಯಗಳ ಪುಸ್ತಕಗಳು ಈ ಬಸ್‌ನಲ್ಲಿ ಲಭ್ಯವಿದ್ದು, 2,57,420 ರೂ. ಮೌಲ್ಯದ 3,807 ಆಂಗ್ಲ ಪುಸ್ತಕ, 1,06,120 ರೂ. ಮೌಲ್ಯದ 1,257 ಕನ್ನಡ ಸೇರಿ ಒಟ್ಟು 3,63,540 ರೂ. ಮೌಲ್ಯದ 5064 ಪುಸ್ತಕಗಳಿವೆ.

ಬೆಂಗಳೂರಿನ ಹೆಬ್ಟಾಳ, ವಿಜಯನಗರ, ಬಸವನಗುಡಿ, ಕೆಂಗೇರಿ, ಎನ್‌.ಆರ್‌.ಕಾಲೋನಿ, ಬೆಂಗಳೂರು ವಿವಿ, ಅಂಬೇಡ್ಕರ್‌ ಕಾಲೇಜು ಆವರಣ, ವಿಜಯನಗರದ ಸುತ್ತಲಿನ ಕಾಲೇಜು, ಬಸ್‌ ನಿಲ್ದಾಣದಲ್ಲಿ ಸಂಚರಿಸಿದೆ. ಬಳಿಕ ರಾಜ್ಯದ ವಿವಿಧ ಜಿಲ್ಲೆಗಳು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿ ಒಂದೊಂದು ರಾಜ್ಯದಲ್ಲಿ ಎರಡು ತಿಂಗಳು ಸಂಚಾರ ನಡೆಸಲಿದೆ.

2020 ಆಗಸ್ಟ್‌ ತಿಂಗಳಲ್ಲಿ ಬಸ್‌ ರಾಜ್ಯಕ್ಕೆ ಮರಳಲಿದೆ. ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್‌, ತೆಲುಗು, ಮಲೆಯಾಳಂ ಸೇರಿ 23 ಭಾಷೆಗಳ, ಜಾನಪದ, ಜೀವನ ಚರಿತ್ರೆ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಿಧಾನ, ನೆಹರೂ ಬಾಲ ಪುಸ್ತಕಾಲಯ ಸೇರಿ ವಿವಿಧ ಪುಸ್ತಕಗಳು ಬಸ್‌ನಲ್ಲಿವೆ.

ಅಕ್ಟೋಬರ್‌ನಿಂದ ಜಿಲ್ಲೆಗಳಲ್ಲಿ ಸಂಚಾರ : ಸೆ.21ರವರೆಗೆ ಬೆಂಗಳೂರಿನಲ್ಲಿ ಸಂಚರಿಸಿ ಅಕ್ಟೋಬರ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರುವ ಬಸ್‌ “ಸಂಚಾರಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ’ ವಾಹನ, ಪ್ರಮುಖ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯ, ಮಾರುಕಟ್ಟೆ, ಗ್ರಂಥಾಲಯದ ಆವರಣದಲ್ಲಿ ನಿಲ್ಲಲಿದೆ. ಪುಸ್ತಕಗಳನ್ನು ವೀಕ್ಷಿಸಿ, ಖರೀದಿಸುವ ಜತೆಗೆ ಕುಳಿತು ಓದಲು ಕೂಡ ಬಸ್‌ನಲ್ಲಿ ಸ್ಥಳಾವಕಾಶವಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ಸ್ಥಳ ಮಧ್ಯಾಹ್ನದಿಂದ ಸಂಜೆವರೆಗೆ ಮತ್ತೂಂದು ಸ್ಥಳದಲ್ಲಿ ಬಸ್‌ ನಿಲ್ಲಲಿದೆ.

 

ಬೆಂಗಳೂರಲ್ಲಿ ಯಾವಪುಸ್ತಕ ಹೆಚ್ಚು ಮಾರಾಟ?: ಪುಸ್ತಕಗಳನ್ನು ಹೊತ್ತ ಬಸ್‌ ಬೆಂಗಳೂರಿನಲ್ಲಿ 18 ದಿನಗಳಿಂದ ಸಂಚರಿಸುತ್ತಿದ್ದು, ಈವರೆಗೆ 800ಕ್ಕೂ ಅಧಿಕ ಪುಸ್ತಕಗಳು ಮಾರಾಟವಾಗಿವೆ. ಅದರಲ್ಲಿ 500ಕ್ಕೂ ಅಧಿಕ ಇಂಗ್ಲಿಷ್‌, 300ಕ್ಕೂ ಅಧಿಕ ಕನ್ನಡ ಪುಸ್ತಕಗಳು ಮಾರಾಟವಾಗಿದ್ದು, “ವಿಜ್ಞಾನ ಮತ್ತು ವಿಜ್ಞಾನಿಗಳು’ ಪುಸ್ತಕ 50ಕ್ಕೂ ಅಧಿಕ ಪ್ರತಿ ಮಾರಾಟವಾಗಿದೆ. ಮಲ್ಲೇಶ್ವರ ಮತ್ತು ಬಸವನಗುಡಿಯಲ್ಲಿ ಹೆಚ್ಚಿನ ಮಂದಿ ಪುಸ್ತಕ ಕೊಂಡುಕೊಂಡಿದ್ದಾರೆ ಎಂದು ಬಸ್‌ನ  ಉಸ್ತುವಾರಿ ಚೆಲುವನಾರಾಯಣ ತಿಳಿಸಿದರು.

ಬೆಳಗ್ಗೆಯಿಂದ ಸಂಜೆವರೆಗೆ ಕಾಲೇಜು, ಬಸ್‌ನಿಲ್ದಾಣ, ಜನ ಸೇರುವ ಸ್ಥಳದಲ್ಲಿ ಬಸ್‌ ನಿಲ್ಲಿಸುತ್ತೇವೆ. ರಾತ್ರಿ ಪೊಲೀಸ್‌ ಠಾಣೆ, ಜಿಲ್ಲಾಧಿಕಾರಿ ಕಚೇರಿ ಬಳಿ ತಂಗುತ್ತೇವೆ.  ●ಶಂಕರ್‌, ಬಸ್‌ ಚಾಲಕ

 

●ಮಂಜುನಾಥ ಗಂಗಾವತಿ

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqeqwe

Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ

Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.