Krishi Mela 2023: ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವ ಸೂರ್ಯಕಾಂತಿ
Team Udayavani, Nov 20, 2023, 11:10 AM IST
ಬೆಂಗಳೂರು: ರಾಜ್ಯದಲ್ಲಿ ಸೂರ್ಯಕಾಂತಿ ಎಣ್ಣೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವ ಬೆನ್ನಲ್ಲೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಡಿಮೆ ನೀರಿನಲ್ಲಿ 80 ದಿನಗಳಲ್ಲಿ ಕಟಾವಿಗೆ ಬರುವ, ಹೆಕ್ಟೇರ್‌ಗೆ 24 ಕ್ವಿಂಟಾಲ್ ಇಳುವರಿ ಕೊಡುವ “ಕೆಬಿಎಸ್‌ಎಚ್-90 ಸಂಕರಣ ಸೂರ್ಯಕಾಂತಿ ತಳಿ’ ಸಂಶೋಧಿಸಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದಿಂದ ಭಾರತಕ್ಕೆ ವಿದೇಶಗಳಿಂದ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಹೀಗಾಗಿ ಸ್ವಾವಲಂಬನೆ ಸಾಧಿಸಲು ಹೊಸ ಮಾದರಿಯ ಸೂರ್ಯಕಾಂತಿ ಬೆಳೆಗೆ ಕರ್ನಾಟಕದಲ್ಲಿ ಹೆಚ್ಚಿನ ಬೇಡಿಕೆವ್ಯಕ್ತವಾಗಿದೆ. “ಕೆಬಿಎಸ್‌ಎಚ್-90 ಸಂಕರಣ ಸೂರ್ಯಕಾಂತಿ’ಯು ಅಲ್ಪಾವದಿ ತಳಿಯಾಗಿದ್ದು, 80 ದಿನಗಳಲ್ಲಿ ಕಟಾವಿಗೆ ಬರಲಿದೆ. ಒಂದು ಹೆಕ್ಟೇರ್‌ಗೆ ನೀರಾವರಿಪ್ರದೇಶದಲ್ಲಿ 24 ಕ್ವಿಂಟಾಲ್, ಮಳೆ ಆಶ್ರಿತ ಪ್ರದೇಶದಲ್ಲಿ 12 ಕ್ವಿಂಟಾಲ್ ಇಳುವರಿ ಬರುತ್ತದೆ. ಶೇ.40ರಷ್ಟು ಎಣ್ಣೆಯ ಅಂಶ ಹೊಂದಿರುತ್ತದೆ. ವರ್ಷಪೂರ್ತಿ ಎಲ್ಲ ವಾತಾವರಣಗಳಲ್ಲೂ ಈ ಬೆಳೆ ಬೆಳೆಯಬಹುದಾಗಿದೆ.
ಬರಗಾಲದಲ್ಲಿ “ಕೆಬಿಎಸ್‌ಎಚ್ -90′ ಸೂಕ್ತ: ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಗಳಲ್ಲಿ ಎಲ್ಲೆಂದರಲ್ಲಿ ಬೆಳೆಯಬಹುದು. ಹೆಚ್ಚಿನ ನೀರಿನ ಅಗತ್ಯತೆ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಕಾಲಕ್ಕೆ ಕೆಬಿಎಸ್‌ಎಚ್-90 ಸೂರ್ಯಕಾಂತಿ ಬೆಳೆ ಸೂಕ್ತವಾಗಿದೆ.
ಕರಾವಳಿಯಂತಹ ನೀರು ನಿಲ್ಲುವ ಪ್ರದೇಶಗಳಲ್ಲಿ ಹಾಗೂ ಉಪ್ಪು ಮಣ್ಣು ಇರುವ ಪ್ರದೇಶಕ್ಕೆ ಈ ಬೆಳೆ ಸೂಕ್ತವಲ್ಲ. ಬತ್ತದ ಗದ್ದೆಗಳಲ್ಲೂ ಇದನ್ನು ಬಿತ್ತನೆ ಮಾಡಬಹುದು. 80 ದಿನಗಳಲ್ಲಿ ಬೆಳೆ ಬರುವುದರಿಂದ ಮುಂಗಾರಿನಲ್ಲಿ ಬೆಳೆ ತೆಗೆದು ಮತ್ತೆ ಹಿಂಗಾರಿನಲ್ಲಿ ಇನ್ನೊಂದು ಬೆಳೆ ತೆಗೆದುಕೊಂಡರೆ ಹೆಚ್ಚು ಇಳುವರಿ ನಿರೀಕ್ಷಿಸಬಹುದು. ಜಿಕೆ-ವಿಕೆಯಲ್ಲಿರುವ ರಾಷ್ಟ್ರೀಯ ಬೀಜ ಪ್ರಯೋಜನೆಯಲ್ಲಿ “ಕೆಬಿಎಸ್ ಎಚ್-90 ಬೀಜವನ್ನು ಉತ್ಪಾದಿಸಿ ರೈತರಿಗೆ ಮಾರುಕಟ್ಟೆಗೆ ಕೊಡುತ್ತಾರೆ. ಕೆಬಿಎಸ್‌ಎಚ್-90 ತಳಿಯ ಬೀಜಕ್ಕೆ ಒಂದು ಕೆಜಿಗೆ 500 ರೂ. ನಿಗದಿಪಡಿಸಲಾಗಿದೆ. 2024ರಿಂದ ಈ ಬೀಜ ಖರೀದಿಸಬಹುದು.
ಬಿತ್ತನೆ ಮಾಡುವುದು ಹೇಗೆ ?: ಒಂದು ಎಕರೆಗೆ ಎರಡು ಕೆಜಿ ಬೀಜ ಬೇಕಾಗುತ್ತದೆ. ಎರಡು ಅಡಿ ಸಾಲು ಮಾಡಬೇಕು. ಸಾಲಿನಿಂದ ಸಾಲಿಗೆ ಎರಡು ಅಡಿ, ಗಿಡದಿಂದ ಗಿಡಕ್ಕೆ ಸಾಲಿನೊಳಗೆ ಒಂದು ಅಡಿ ಅಂತರ ನಿರ್ಮಿಸಬೇಕು. ಸಾಲಿನಲ್ಲಿಗೊಬ್ಬರ ಹಾಕಿ ಒಂದೊಂದು ಗುಣಿಗೆ ಎರೆಡೆರಡು ಬೀಜ ಬಿತ್ತಿದರೆ ಅದು 6 ದಿನಕ್ಕೆ ಮೊಳಕೆ ಬರುತ್ತದೆ. 10 ದಿನಗೊಳಗೆ ಒಂದು ಗುಣಿಯಿಂದ ಒಂದೇ ಗಿಡ ಬಿಡುತ್ತದೆ. ಒಂದು ವೇಳೆ ಒಂದು ಗುಣಿಯಲ್ಲಿ ಎರಡು ಗಿಡ ಬಿಟ್ಟರೆ ಇಳುವರಿ ಕಡಿಮೆಯಾಗುತ್ತದೆ. ವರ್ಷದಲ್ಲಿ 3 ಬಾರಿ ಬೆಳೆ ತೆಗೆಯಬಹುದು. ಒಂದೇ ಪ್ರದೇಶದಲ್ಲಿ ಪದೇಪದೆ ಬೆಳೆದರೆ ಆ ಪ್ರದೇಶದ ಮಣ್ಣಿನ ಫಲವತ್ತತೆ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ.
ಹೀಗಾಗಿ ಒಂದು ವರ್ಷ ಒಂದು ಪ್ರದೇಶದಲ್ಲಿ ಬೆಳೆದರೆ ಮತ್ತೂಂದು ವರ್ಷ ಅದರ ಪಕ್ಕದ ಜಾಗದಲ್ಲಿ ಬೆಳೆಯಬೇಕು. ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಪ್ರಕಾರ 1 ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ 6,700 ರೂ. ಇದೆ.
ಕೆಬಿಎಸ್‌ಎಚ್-90 ವಿಶೇಷತೆ ಏನು ?: ಸಾಮಾನ್ಯ ಸೂರ್ಯಕಾಂತಿ ಬೆಳೆಗಳಲ್ಲಿ ಇತ್ತೀಚೆಗೆ ವಿವಿಧ ರೋಗಗಳು ಬಾಧಿಸಿ ಇಳುವರಿ ಕಡಿಮೆಯಾಗುತ್ತದೆ. ಆದರೆ, ಕೆಬಿಎಸ್‌ಎಚ್ -90 ತಳಿ ರೋಗ ರುಜಿನ ತಡೆದುಕೊಳ್ಳುವ ಶಕ್ತಿ ಹೆಚ್ಚಿರುತ್ತದೆ. ಇದು ಉತ್ತಮ ಸಂಕರಣ ತಳಿಯಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಸೂರ್ಯಕಾಂತಿಗಿಂತ ಇದರಲ್ಲಿ ಕಾಳು ಕಟ್ಟುವಿಕೆ ಹೆಚ್ಚಾಗಿ ಇಳುವರಿಗೆ ಸಹಕಾರಿಯಾಗಿದೆ. ಜೊತೆಗೆ ಎಣ್ಣೆಯ ಅಂಶ ಹೆಚ್ಚಿರುತ್ತದೆ. ಸೂರ್ಯಕಾಂತಿಗೆ ಹೆಚ್ಚಾಗಿ ಬಾಧಿಸುವ ಕೇದಿಗೆರೋಗ ಕೆಬಿಎಸ್ ಎಚ್-90ಗೆ ತಗುಲುವುದಿಲ್ಲ. ಹೀಗಾಗಿ ಇವುಗಳಿಗೆ ಔಷಧಿ ಸಿಂಪಡಿಸುವ ಅಗತ್ಯವಿಲ್ಲ
ಸೂರ್ಯಕಾಂತಿ ಗಿಡಗಳ ನಡುವೆ ಜೇನು ಕೃಷಿ: ಕೆಬಿಎಸ್‌ಎಚ್-90 ತಳಿಯ ಸೂರ್ಯಕಾಂತಿ ಗಿಡಗಳ ಮಧ್ಯೆ ಜೇನು ಕೃಷಿ ಮೂಲಕ ರೈತರು ಇನ್ನಷ್ಟು ಲಾಭಗಳಿಸಬಹುದು. ಜೇನು ನೊಣಗಳ ಪರಾಗಸ್ಪರ್ಶಕ್ಕಾದರೆ ಒಂದು ಎಕರೆಗೆ 4 ಜೇನು ಪೆಟ್ಟಿಗೆ ಇಡಬಹುದು. ಜೇನುತುಪ್ಪ ಸಂಗ್ರಹಕ್ಕಾದರೆ 10 ಅಡಿ ಅಂತರದಲ್ಲಿ ಒಂದೊಂದು ಜೇನು ಪೆಟ್ಟಿಗೆ ಇಡಬಹುದು. ಒಂದು ಜೇನುಪೆಟ್ಟಿಯಿಂದ 10 ಕೆಜಿ ಜೇನು ಸಂಗ್ರಹಿಸಬಹುದು ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜೇನು ಕೃಷಿ ತಜ್ಞ ನಿತಿನ್.
ಕಳೆದ 6 ವರ್ಷಗಳ ಸತತ ಸಂಶೋಧನೆ ನಡೆಸಿ ಕೆಬಿಎಸ್‌ಎಚ್-90 ಸಂಕರಣ ಸೂರ್ಯಕಾಂತಿ ತಳಿ ಪತ್ತೆ ಹಚ್ಚಿ ಅಭಿವೃದ್ಧಿಪಡಿಸಿದ್ದೇವೆ. 2024ರ ಆರಂಭದಲ್ಲಿ ಇದರ ಬೀಜ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಸಾಮಾನ್ಯ ಸೂರ್ಯಕಾಂತಿಗೆ ಹೋಲಿಸಿದರೆ ಈ ತಳಿಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ತೆಗೆಯಬಹುದು.–ಡಾ.ಎಸ್.ಡಿ.ನೆಹರು, ಹಿರಿಯ ವಿಜ್ಞಾನಿ, ಸೂರ್ಯಕಾಂತಿ ಪ್ರಾಯೋಜನೆ ವಿಭಾಗ, ಜಿಕೆ-ವಿಕೆ
–ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.