ಸುಮಲತಾ ಅವರಿಗೆ ಅನುಕಂಪವೇ ಬಂಡವಾಳ


Team Udayavani, Jul 9, 2021, 8:14 PM IST

kumaraswamy

ಬೆಂಗಳೂರು: “ಸುಮಲತಾ ಅವರಿಗೆ ಅನುಕಂಪವೇಬಂಡವಾಳವಾಗಿದ್ದು, ಮಂಡ್ಯ ಜನರಿಗೆ ಈಗೀಗಎಲ್ಲವೂ ಅರ್ಥವಾಗುತ್ತಿದೆ. ನಾನು ಹತಾಶೆಗೊಂಡಿಲ್ಲ,

ನಮ್ಮದು ನಾಟಕ ಕಂಪನಿಯಲ್ಲ.’-ಇದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಮಾತುಗಳು.ಅಕ್ರಮ ಗಣಿಗಾರಿಕೆ ಹಾಗೂ ಕೆಆರ್‌ಎಸ್‌ ಡ್ಯಾಂ ಬಿರುಕು ವಿಚಾರದಲ್ಲಿನಡೆಯುತ್ತಿ ರುವ ಮಾತಿನ ಸಮರರಾಜಕೀಯ ಸ್ವರೂಪ ಪಡೆಯುತ್ತಿದ್ದುಈ ಕುರಿತು “ಉದಯವಾಣಿ’ಗೆಸಂದರ್ಶನ ನೀಡಿದ ಅವರು, ಸಣ್ಣವಿಚಾರ ದೊಡ್ಡ ದು ಮಾಡಿ ನನ್ನನ್ನುವಿಲನ್‌ ಮಾಡುವ ವ್ಯವಸ್ಥಿತ ಷಡ್ಯಂತ್ರನಡೆಯುತ್ತಿದೆ. ಇದಕ್ಕೆಲ್ಲ ನಾನುತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.ಸಂದರ್ಶನ ಸಾರಾಂಶ

ನಿಮ್ಮ, ಸುಮಲತಾ ಅವರ ನಡುವೆ ಇದ್ದಕ್ಕಿದ್ದಂತೆಯಾಕೆ ಮಾತಿನ ಸಮರ ಶುರುವಾಗಿದೆ?

ನಾನು ಹೇಳಿದ್ದೇ ಬೇರೆ. ಅವರಿಗೆ ಬೇಕಾದಂತೆಅನುಕೂಲವಾಗುವಂತೆ ಆ ಹೇಳಿಕೆ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವ ಹುನ್ನಾರವಷ್ಟೇ. ನನಗೆ ಸಂಬಂಧವೇ ಇಲ್ಲದ ವಿಚಾರದಲ್ಲಿಬೇಕೆಂತಲೇ ಕೆಣಕಿ ಪ್ರಚೋದಿಸಲಾಗುತ್ತಿದೆ.zಮಂಡ್ಯದಲ್ಲಿ ನಿಜಕ್ಕೂ ಅಕ್ರಮ ಗಣಿಗಾರಿಕೆನಡೆಯುತ್ತಿದೆಯಾ?ಖುದ್ದು ಗಣಿ ಸಚಿವ ಮುರುಗೇಶ್‌ ನಿರಾಣಿನಾಲ್ಕು ತಿಂಗಳಿನಿಂದ ಗಣಿಗಾರಿಕೆ ನಿಲ್ಲಿಸಲಾಗಿದೆಎಂದು ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ 20 ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿ144ನೇ ಸೆಕ್ಷನ್‌ ಜಾರಿ ಗೊಳಿಸಿದ್ದೆ.

ಅಷ್ಟಕ್ಕೂ ಅಕ್ರಮ ಗಣಿ ಗಾರಿಕೆನಡೆಯುತ್ತಿದ್ದರೆ ಸರ್ಕಾರ ಕ್ರಮಕೈಗೊಳ್ಳಲಿ ಬೇಡ ಎಂದವರು ಯಾರು?

ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡಿ ದುಡ್ಡುಮಾಡುವ ಅಥವಾ ಮತ್ತೂಬ್ಬರ ಮೂಲಕ ಬ್ಲಾಕ್‌ಮೇಲ್‌ ದಂಧೆ ನಡೆಸುವ ಅನಿವಾರ್ಯತೆ ನನಗೆಇಲ್ಲ.zಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆಯಾ?ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳುಇಲ್ಲ ಎಂದು ಹೇಳುತ್ತಿದ್ದಾರೆ. ಸಂಸದರು ಬಿರುಕುಬಿಟ್ಟಿದೆ ಅಂತಾರೆ. ಸರ್ಕಾರ ಮತ್ತು ಅಧಿಕಾರಿಗಳುಹೇಳುತ್ತಿರುವುದು ಸುಳ್ಳಾ? ಇದೆಲ್ಲದರ ಹಿಂದೆಬೇರೆಯದೇ ಉದ್ದೇಶ ಇದೆ.

ಮನ್ಮುಲ್‌, ಮೈಶುಗರ್‌ ವಿಚಾರಗಳೆಲ್ಲಪ್ರಸ್ತಾಪವಾಗುತ್ತಿವೆ?

ಒಂದಕ್ಕೊಂದು ಸಂಬಂಧವಿಲ್ಲದ ವಿಚಾರ ಪ್ರಸ್ತಾಪಿಸಿ ಜನರಲ್ಲಿ ಗೊಂದಲ ಮೂಡಿಸುವ ತಂತ್ರ.ಯಾವುದೇ ಕಾರಣಕ್ಕೂ ಮನ್ಮುಲ್‌, ಮೈಶುಗರ್‌ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.  ಮಂಡ್ಯದಲ್ಲಿ ಜನರು ಸತ್ತಾಗ ಬರದವರುಅಕ್ರಮ ಗಣಿಗಾರಿಕೆ ತೋರಿಸಲು ಯಾಕೆ ಬಂದರು?

ಮಂಡ್ಯ ಸೋಲಿನ ನಂತರ ಕುಮಾರಸ್ವಾಮಿಹತಾಶೆಗೊಂಡಿದ್ದಾರಾ?

ನಾನೇಕೆ ಹತಾಶೆಯಾಗಲಿ. ಸೋಲು-ಗೆಲುವುಸಮಾನವಾಗಿ ಸ್ಪೀಕರಿಸುವವನು ನಾನು. ಆಯಿತುಬರಲಿ ನೋಡಿಯೇ ಬಿಡೋಣ. ಮಾತನಾಡಲುನನಗೂ ಬರುತ್ತದೆ. ಸೋತಿದ್ದರೂ ಆರು ಲಕ್ಷ ಮತಕೊಟ್ಟಿದಾರೆ ಜನ. ಆಗಿನ ರಾಜಕೀಯ ಚಿತ್ರಣ ಬೇರೆಯಿತ್ತು. ಈಗೀಗ ಮಂಡ್ಯ ಜನರಿಗೆ ವಾಸ್ತವಅರ್ಥವಾಗುತ್ತಿದೆ.

zಪ್ರಜ್ವಲ್‌ ರೇವಣ್ಣ ಹೆಸರು ಪ್ರಸ್ತಾಪವಾಗಿದ್ದೇಕೆ?

ನಮ್ಮ ಕುಟುಂಬ ಒಡೆಯುವ ಕೆಲಸ. ನಾನುಇವರಿಂದ ರಾಜಕಾರಣ ಅಥವಾ ಹೇಗೆ ನಡೆದುಕೊಳ್ಳಬೇಕು ಎಂಬುದು ಕಲಿಯಬೇಕಾ? ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಮೊದಲಿಗೆ ಗೊತ್ತಿಲ್ಲ.ಸುಮ ಲತಾ ಅವರಿಗೆ ನನ್ನ ಮೇಲೆ ಯಾಕೆ ವೈಷಮ್ಯಎಂಬುದೇ ಅರ್ಥವಾಗುತ್ತಿಲ್ಲ. ಚುನಾವಣೆಯಲ್ಲಿಗೆದ್ದಿ ದ್ದಾರೆ, ಜನರ ಕೆಲಸ ಮಾಡಲಿ. ನಾನು ಮಂಡ್ಯಕ್ಕೆಹೋದರೆ ಇವರೇಕೆ ಆತಂಕಪಡಬೇಕು. ಮಂಡ್ಯಸಂಸದರಾಗಿದ್ದಾರೆ ಎಂದ ಮಾತ್ರಕ್ಕೆ ಇವರಿಗೆ ಇಡೀಕ್ಷೇತ್ರ ಜಹಗೀರ್‌ದಾರ್‌ ಬರೆದುಕೊಟ್ಟಿದ್ದಾರಾ.

ಅಂಬರೀಶ್‌ ಹೆಸರು ಬೇಕಾದಾಗಲೆಲ್ಲಾ ಬಳಕೆಮಾಡಿಕೊಂಡಿದ್ದಾರೆ ಎಂದುಆರೋಪಿಸಿದ್ದಾರಲ್ಲಾ?

ಅಂಬರೀಶ್‌ ಹೆಸರಿನಲ್ಲಿ ರಾಜಕೀಯ ಲಾಭಪಡೆ ಯುವ ಮಟ್ಟಕ್ಕೆ ನಾನು ಎಂದೂ ಇಳಿದಿಲ್ಲ. ಆತನನ್ನ ಆತ್ಮೀಯ ಸ್ನೇಹಿತ. ಪದೇ ಪದೆ ಅವರೇಅಂಬರೀಷ್‌ ಹೆಸರು ಎಳೆದು ತರುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು ಅನುಕಂಪವೇ ಅವರಿಗೆಬಂಡವಾಳ. ಮಂಡ್ಯದ ಬಗ್ಗೆ ಮಾತನಾಡುವಇವರು ಅಂಬರೀಶ್‌ ನಿಧನರಾದಾಗ ಮೃತದೇಹಮಂಡ್ಯಕ್ಕೆ ಕೊಂಡೊಯ್ಯುವ ಸಂಬಂಧ ವಿಕ್ರಂಆಸ್ಪತ್ರೆಯಲ್ಲಿ ಏನು ನಡೆಯಿತು, ಮಗನನ್ನು ಯಾವಮಟ್ಟದಲ್ಲಿ ಗದರಿದರು ಎಂಬುದರ ಬಗ್ಗೆ ಹೃದಯಮುಟ್ಟಿ ಹೇಳಲಿ ಸಾಕು. ಅಭಿಮಾನಿಗಳಿಗಾಗಿ ನಾನುಆ ದಿನ ರಿಸ್ಕ್ ತೆಗೆದುಕೊಂಡಿದ್ದೆ.

ನಿಮ್ಮಿಬ್ಬರ ಮಾತಿನ ಸಮರಕ್ಕೆ ಅಂತ್ಯ ಇಲ್ವಾ?

ಆಯ್ಯೋ ನಾನ್ಯಾಕೆ ಪದೇಪದೆ ಅವರ ಬಗ್ಗೆಮಾತನಾಡಲಿ? ಅವರ ಬಗ್ಗೆ ಮಾತನಾಡುವುದರಿಂದ ನನಗೆ ಆಗಬೇಕಾಗಿದ್ದು ಏನೂಇಲ್ಲ. ಮಂಡ್ಯದಲ್ಲಿ ಜನಪ್ರಿಯತೆ ಕಡಿಮೆಆಗಿರುವುದಕ್ಕೆ ಈ ಇಶ್ಯೂ ದೊಡ್ಡದಾಗಿಮಾಡಲಾಗುತ್ತಿದೆ. ಕೊಡಗು-ಮೈಸೂರುಸಂಸದರೇ ಹೇಳಿದ್ದಾರಲ್ಲಾ ಸಾಕು ಬಿಡಿ. ನಾನೇನೂಮಾತನಾಡಲ್ಲ. ಬಡ ಮಹಿಳೆಯರ ಕಷ್ಟದ ಬಗ್ಗೆಮಾತನಾಡುತ್ತೇನೆ. ಬೇರೆ ವಿಚಾರ ಬೇಕಿಲ್ಲ.ಉಳಿದದ್ದೆಲ್ಲಾ ಮಂಡ್ಯ ಜನರಿಗೆ ಬಿಡುತ್ತೇನೆ.ನಮ್ಮದು ನಾಟಕ ಕಂಪನಿ ಅಲ್ಲ.

ಆದರೂ, ಡ್ಯಾಂಗೆ ಅಡ್ಡಲಾಗಿ ಮಲಗಿಸಿ ಎಂಬ ಮಾತು ಸರಿಯಾ?

ನಾನು ಪ್ರಜ್ಞಾಪೂರ್ವಕವಾಗಿ ಯಾವುದೇ ಕೆಟ್ಟ ಉದ್ದೇಶದಿಂದಹೇಳಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಹೆಣ್ಣು ಮಕ್ಕಳಕಣ್ಣೀರು ಒರೆಸಿದ್ದೇನೆ. ಕಷ್ಟದಲ್ಲಿದ್ದವರಿಗೆ ನನ್ನ ಗೃಹ ಕಚೇರಿಯಲ್ಲಿಕೆಲಸ ಕೊಟ್ಟಿದ್ದೇನೆ. ನಾನೆಂದೂ ಹೆಣ್ಣು ಮಕ್ಕಳ ಬಗ್ಗೆ ಸಣ್ಣತನದಮಾತನ್ನು ಆಡುವವನಲ್ಲ. ಹಳ್ಳಿ ಭಾಷೆ ಪ್ರಯೋಗಿಸಿದೆ ಅದನ್ನೇದೊಡ್ಡದು ಮಾಡಿ ರಾಜಕಾರಣ ಮಾಡಲಾಗುತ್ತಿದೆ. ಮಂಡ್ಯಜನರೇ ಅದಕ್ಕೆ ಉತ್ತರ ನೀಡಲಿದ್ದಾರೆ.

ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.