ಕುವೆಂಪು ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆಗೆ ಸಿದ್ಧ

Team Udayavani, Jul 8, 2017, 3:55 AM IST

kuvempu-hd.jpg

ಬೆಂಗಳೂರು: ಯುಗದ ಕವಿ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನೊಳಗೊಂಡ 11 ಸಂಪುಟಗಳು ಮರು ಮುದ್ರಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುವೆಂಪು ಅವರ ಸಾಹಿತ್ಯದ ಸುಮಾರು 10 ಸಾವಿರಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ 11 ಸಂಪುಟಗಳನ್ನು ಹೊರತರುತ್ತಿದ್ದು, ಅದಕ್ಕಾಗಿ ಅಂದಾಜು 30 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. 

ಸರ್ವೋದಯವೆಂಬ ಯುಗದ ಮಂತ್ರದ ಆಶಯವನ್ನು ಕುವೆಂಪು ಅವರು ತಮ್ಮ ಕಾವ್ಯದಲ್ಲಿ ಮಾತ್ರವಲ್ಲದೆ ಹೆಚ್ಚು ಸ್ಪುಟವಾಗಿ, ವಿಚಾರಪೂರ್ಣವಾಗಿ ತಮ್ಮ ಗದ್ಯ ಸಾಹಿತ್ಯದಲ್ಲೂ ಮಂಡಿಸಿದ್ದಾರೆ. ಅವರು ಬರೆದ ನಾಟಕಗಳು-ಕಾದಂಬರಿಗಳು-ಚಿಂತನೆಯ ಬರಹಗಳೆಲ್ಲವೂ ಎಚ್ಚರಗೊಳ್ಳುತ್ತಿದ್ದ ಶ್ರೀಸಾಮಾನ್ಯನ ಪ್ರಜ್ಞೆಗೆ ಸಾಣೆ ಹಿಡಿದಿವೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶೂದ್ರ ಪ್ರಜ್ಞೆಯನ್ನು, ಕನ್ನಡ ಸಾಹಿತ್ಯ ಲೋಕದ ಮುಂಚೂಣಿಗೆ ತಂದು ನಿಲ್ಲಿಸಿದ್ದ ಕುವೆಂಪು ಅವರ ಗದ್ಯ ಬರಹಗಳ ಪಾತ್ರ ಬಹಳ ದೊಡ್ಡದು. ಇದೆಲ್ಲವನ್ನು ಕುವೆಂಪು ಸಮಗ್ರ ಸಾಹಿತ್ಯ ಸಂಪುಟ ಒಳಗೊಂಡಿದೆ.

11 ಸಂಪುಟಗಳು: 
ಕುವೆಂಪು ಅವರ ಆತ್ಮಚರಿತ್ರೆ-ನೆನಪಿನದೋಣಿಯಲ್ಲಿ(ಒಂದು ಸಂಪುಟ), ಜೀವನ ಚರಿತ್ರೆ: ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ (ಒಂದು ಸಂಪುಟ), ನಾಟಕಗಳು: ಯಮನ ಸೋಲು, ಜಲಗಾರ, ಬಿರುಗಾಳಿ, ಸ್ಮಶಾನ ಕುರುಕ್ಷೇತ್ರಂ, ರಕ್ತಾಕ್ಷಿ, ಬೆರಳ್‌ಗೆ ಕೊರಳ್‌, ಬಲಿದಾನ, ಚಂದ್ರಹಾಸ, ಮಹಾರಾತ್ರಿ, ಶೂದ್ರ ತಪಸ್ವಿ, ಕಾನೀನ, ವಾಲ್ಮೀಕಿಯ ಭಾಗ್ಯ ಸೇರಿ 12 ನಾಟಕಗಳು (ಒಂದು ಸಂಪುಟ), ಕಾದಂಬರಿ: ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ (ಎರಡು ಸಂಪುಟ), ರಾಮಾಯಣ ದರ್ಶನಂ (ಒಂದು ಸಂಪುಟ), 23 ಕವನ ಸಂಕಲನಗಳನ್ನು ಒಳಗೊಂಡ ಕಾವ್ಯ ಸಂಪುಟ (ಎರಡು ಸಂಪುಟ), ಗದ್ಯ (ಎರಡು ಸಂಪುಟ ), ಸಣ್ಣ ಕತೆಗಳು (ಒಂದು ಸಂಪುಟ) ಹೀಗೆ ಒಟ್ಟು 11 ಸಂಪುಟಗಳನ್ನು ಮರು ಮುದ್ರಣ ಮಾಡಲಾಗಿದೆ. 

30 ಲಕ್ಷ ರೂ.ವೆಚ್ಚ:
2013-14ರಲ್ಲಿ ಕುವೆಂಪು ಸಮಗ್ರ ಸಾಹಿತ್ಯ ಸಂಪುಟಗಳನ್ನು ಮುದ್ರಿಸಲಾಗಿತ್ತು. ಅಂದು ಕೇವಲ ಮೂರು ಸಾವಿರಕ್ಕೆ ಎಲ್ಲ ಸಂಪುಟಗಳನ್ನು ಒಂದು ಕಿಟ್‌ನಲ್ಲಿ ಮಾರಾಟ ಮಾಡಲಾಗಿತ್ತು. ಸಂಪುಟಗಳ ಮುದ್ರಣಕ್ಕೆ ಸರ್ಕಾರ ಅನುದಾನ ನೀಡಿತ್ತು. ಆದರೆ, 2ನೇ ಮುದ್ರಣಕ್ಕೆ ಸರ್ಕಾರದ ನೆರವನ್ನು ಪ್ರತಿಷ್ಠಾನ ಪಡೆದಿಲ್ಲ. ಬದಲಿಗೆ ಈ ಹಿಂದೆ ಮುದ್ರಣಗೊಂಡು ಮಾರಾಟವಾದ ಸಂಪುಟಗಳಿಂದ ಬಂದ ಹಣವನ್ನೇ ತೆಗೆದಿಟ್ಟು, ಎರಡನೇ ಮುದ್ರಣಕ್ಕೆ ಬಳಕೆ ಮಾಡಿಕೊಂಡಿದೆ. ಪ್ರಸ್ತುತ ಎರಡನೇ ಮುದ್ರಣಕ್ಕೆಂದು ಅಂದಾಜು 30 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ.

ಮುದ್ರಣ ವೆಚ್ಚ ದುಬಾರಿ:
ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಿದ್ದು, ಮುದ್ರಣ ವೆಚ್ಚ ಸೇರಿ ಪುಸ್ತಕಗಳನ್ನು ಗ್ರಾಹಕರಿಗೆ ತಲುಪಿಸುವ ಶುಲ್ಕ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಕೇವಲ ಮೂರು ಸಾವಿರ ರೂ.ಗಳಿಗೆ ಮಾರಾಟ ಮಾಡಿದ ಕೃತಿಗಳ ಬೆಲೆಯನ್ನು ಈ ಬಾರಿ ಸ್ವಲ್ಪ ಜಾಸ್ತಿ ಮಾಡಲಾಗಿದೆ. ಈ ಬಾರಿ ಶೇ.30ರಷ್ಟು ರಿಯಾಯಿತಿ ನೀಡಿ 5600 ರೂ.ಗಳಿಗೆ ಮಾರಾಟ ಮಾಡಲಾಗುವುದು. 2ನೇ ಮುದ್ರಣಗೊಂಡ 11 ಸಂಪುಟಗಳನ್ನು ಒಂದು ಕಿಟ್‌ನಲ್ಲಿಟ್ಟು ಕೇವಲ 4 ಸಾವಿರ ರೂ.ಗಳಿಗೆ ಗ್ರಾಹಕರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಪ್ರತಿಷ್ಠಾನ ಮಾಡಲಿದೆ. 11 ಸಂಪುಟಗಳನ್ನು ಒಳಗೊಂಡ ಕಿಟ್‌ ಬರೋಬರಿ 13 ಕೆ.ಜಿ ತೂಕವಿದೆ. ಗ್ರಾಹಕರು ವಾಹನಗಳಲ್ಲಿ ಬಂದು ಖರೀದಿಸಿದರೆ, ತೆಗೆದುಕೊಂಡು ಹೋಗಲು ಸಾಧ್ಯ. ಇಲ್ಲವಾದರೆ ಕಷ್ಟವಾಗುತ್ತದೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ಮಾಹಿತಿ ನೀಡಿದರು.
ಓದುಗರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಸುಲಭವಾಗಿ ತಮಗೆ ಬೇಕಾದ ಗದ್ಯ, ಕಾವ್ಯ, ನಾಟಕ ಇತ್ಯಾದಿ ಪ್ರಕಾರಗಳ ವಿಭಾಗವನ್ನು ಹುಡುಕಲು ಅನುಕೂಲವಾಗುವಂತೆ ಪರಿವಿಡಿ(ಇಂಡೆಕ್ಸ್‌)ಯನ್ನು ಈ ಸಂಪುಟಗಳಲ್ಲಿ ನೀಡಿರುವುದು ವಿಶೇಷ. 

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ 11 ಸಂಪುಟಗಳನ್ನು ಖರೀದಿ ಮಾಡುವವರಿಗೆ ಮಾತ್ರ ಶೇ.30ರಷ್ಟು ರಿಯಾಯಿತಿ ಸಿಗಲಿದೆ. ಉಳಿದಂತೆ ವಿವಿಧ ಪುಸ್ತಕ ಮಳಿಗೆಗಳಲ್ಲಿ ಹೇಗೆ ದರ ನಿಗಧಿ ಮಾಡಿರುತ್ತಾರೋ ಗೊತ್ತಿಲ್ಲ. ಶೀಘ್ರವೇ 2ನೇ ಮುದ್ರಣದ ಸಂಪುಟಗಳನ್ನು ಎಲ್ಲಿ ಬಿಡುಗಡೆ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ. 
– ಕಡಿದಾಳ್‌ ಪ್ರಕಾಶ್‌, ಕಾರ್ಯದರ್ಶಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ

– ಸಂಪತ್‌ ತರೀಕೆರೆ

ಟಾಪ್ ನ್ಯೂಸ್

bola

Karkala: ಬೋಳದಲ್ಲಿ ಅಬಕಾರಿ ದಾಳಿ… ಅಕ್ರಮ ದಾಸ್ತಾನಿಸಿರಿದ್ದ ಮದ್ಯದ ಬಾಕ್ಸ್ ಗಳು ವಶಕ್ಕೆ

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

IPL 2025: My preference is a team that gives freedom: KL Rahul

IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್‌.ರಾಹುಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ

MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUST WATCH

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

ಹೊಸ ಸೇರ್ಪಡೆ

3

Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

bola

Karkala: ಬೋಳದಲ್ಲಿ ಅಬಕಾರಿ ದಾಳಿ… ಅಕ್ರಮ ದಾಸ್ತಾನಿಸಿರಿದ್ದ ಮದ್ಯದ ಬಾಕ್ಸ್ ಗಳು ವಶಕ್ಕೆ

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.