ಫ‌ಲಪುಷ್ಪ ಪ್ರದರ್ಶನಕ್ಕೆ ಕುವೆಂಪು ಅವರ ಇನ್ನೊಂದು ಪ್ರತಿಕೃತಿ

Team Udayavani, Aug 10, 2017, 12:10 PM IST

kuvempu.jpg

ಬೆಂಗಳೂರು: ಕೆಂಪುತೋಟ ಲಾಲ್‌ಬಾಗ್‌ ನಲ್ಲಿ ನಡೆಯುತ್ತಿರುವ ಫ‌ಲಪುಷ್ಪ ಪ್ರದರ್ಶನಕ್ಕೆ ಆರನೇ ದಿನವಾದ ಬುಧವಾರವೂ
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜತೆಗೆ ಫ‌ಲಪುಷ್ಪ ಪ್ರದರ್ಶನಕ್ಕೆ ಕುವೆಂಪು ಅವರ ಮತ್ತೂಂದು
ಪ್ರತಿಕೃತಿ ಸೇರ್ಪಡೆಯಾಗಿದೆ. ಆ.4ರಿಂದ ಫ‌ಲಪುಷ್ಪ ಪ್ರದರ್ಶನ ಆರಂಭಗೊಂಡಿದ್ದು, ಇದುವರೆಗೂ ಸುಮಾರು 52,85,230 ರೂ. ಟಿಕೆಟ್‌ ಶುಲ್ಕ ಸಂಗ್ರಹವಾಗಿದೆ. ಬುಧವಾರ ಲಾಲ್‌ಬಾಗ್‌ಗೆ 10 ಸಾವಿರ ಮಂದಿ ವಯಸ್ಕರು, 600 ವಿದ್ಯಾರ್ಥಿಗಳು, 2 ಸಾವಿರ ಮಂದಿ ಪಾಸ್‌ ಪಡೆದವರು ಸೇರಿ 12600 ಮಂದಿ ಭೇಟಿ ನೀಡಿ ಫ‌ಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ಪ್ರದರ್ಶನವು ಆ.15ರವರೆಗೆ
ನಡೆಯಲಿದ್ದು, ವೀಕೆಂಡ್‌ ಮತ್ತು ಸ್ವಾತಂತ್ರ್ಯದಿನೋತ್ಸವ ಇರುವುದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು ಬರುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್‌ ತಿಳಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ: ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ದಾರ್ಶನಿಕ ರೂಪ ಎಂಬ ವಿಷಯದ ಮೇಲೆ ನಾಟಕಕಾರ ಡಾ. ಕೆ.ವೈ. ನಾರಾಯಣ ಸ್ವಾಮಿ ಉಪನ್ಯಾಸ ನೀಡಿದರು. ಸದ್ವಿದ್ಯಾ ಶಾಲಾ ಮಕ್ಕಳಿಂದ ಜಲಗಾರ ನಾಟಕದ ಪ್ರದರ್ಶನ ನಡೆಯಿತು
ಇಂದಿನ ವಿಶೇಷ: ಆ.10ರಂದು ಸಂಜೆ 5ಕ್ಕೆ ಕಾನೂರು ಹೆಗ್ಗಡಿತಿ ಕಾದಂಬರಿಯಲ್ಲಿ ಚಿತ್ರಿಸಿರುವ ಆಧುನಿಕತೆಯ ವಿನ್ಯಾಸ ಎಂಬ
ವಿಷಯ ಕುರಿತು ಡಾ. ಜೆ. ಬಾಲಕೃಷ್ಣ ಉಪನ್ಯಾಸ ನೀಡಲಿದ್ದಾರೆ. ಸಂಜೆ 6 ಗಂಟೆಯಿಂದ ವಿವಿಧ ಕಲಾತಂಡಗಳಿಂದ ಕುವೆಂಪು ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ನೂಲಿನಲ್ಲಿ ಕುವೆಂಪು: ಬುಧವಾರ ಪುಷ್ಪ ಪ್ರದರ್ಶನಕ್ಕೆ ಹೊಸದೊಂದು ಕಲಾಕೃತಿ ಸೇರ್ಪಡೆಗೊಂಡಿದೆ. ಕೇವಲ ಉಕ್ಕಿನ
ಮೊಳೆಗಳು ಮತ್ತು ಕಪ್ಪು ಬಣ್ಣದ ದಾರವನ್ನು ಬಳಸಿ ಸೃಷ್ಟಿಸಿರುವ ಕುವೆಂಪು ಪ್ರತಿಕೃತಿ ಇದಾಗಿದೆ. ಗಿರಿನಗರದ ಶಾಂತಿನಿಕೇತನ ಶಾಲೆ
ಯವರು ಈ ಕಲಾಕೃತಿಯನ್ನು ನಿರ್ಮಿಸಿದ್ದು, ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಕಲಾಕೃತಿಯನ್ನು ಲೋಕಾರ್ಪಣೆ
ಮಾಡಿದ ದೊಡ್ಡರಂಗೇಗೌಡ, “ಇದು ಸೃಜನೋದ್ಯಾನ. ಇಲ್ಲಿ ಕುವೆಂಪು ಜೀವನದ ಅನುರಣನ, ಮನೋನಂದನದ ಸವಿ ಸ್ಪಂದನ”  ಎಂದು ಬಣ್ಣಿಸಿದರು.

ಸಮರ್ಪಕ ಕಸ ನಿರ್ವಹಣೆ: ಲಾಲ್‌ಬಾಗ್‌ನಲ್ಲಿ ಫ‌ಲಪುಷ್ಪ ಪ್ರದರ್ಶನ ಮತ್ತು ಕವಿಮನೆ, ಕವಿಶೈಲ, ಜೋಗ ಜಲಪಾತ ಸೇರಿದಂತೆ ವಿವಿಧ ಪುಷ್ಪ ಕಲಾಕೃತಿಗಳು ಜನರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿವೆ. ಅದರ ಜತೆಜತೆಗೇ ಕಸ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ಕ್ರಮ ಕೈಗೊಂಡಿದೆ. ಇದಕ್ಕಾಗಿಯೇ ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಲಾಲ್‌ಬಾಗ್‌ ಉದ್ಯಾನದ ಸಿಬ್ಬಂದಿಗಳನ್ನು
ಬಳಸಿಕೊಂಡು ಎಂಟು ತಂಡಗಳನ್ನು ರಚಿಸಲಾಗಿದ್ದು, ಕಸದ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಲಾಗುತ್ತಿದೆ. ಗಾಜಿನ ಮನೆ, ಬ್ಯಾಂಡ್‌ಸ್ಟಾಂಡ್‌, ವಿವಿಧ ಮಳಿಗೆಗಳ ಪ್ರದೇಶ, ಫೋಟೋ ಗ್ಯಾಲರಿ, ಸಂಗೀತ ವೇದಿಕೆ ಪ್ರದೇಶದಲ್ಲಿ ಸ್ವಲ್ಪವೂ ಕಸ ಬೀಳದಂತೆ ನಿರ್ವಹಿಸಲು 3 ತಂಡಗಳನ್ನು ನೇಮಕ ಮಾಡಲಾಗಿದೆ. ಉಳಿದ 4 ತಂಡಗಳನ್ನು ಲಾಲ್‌ಬಾಗ್‌ನ ನಾಲ್ಕು ಪ್ರವೇಶದ್ವಾರಗಳಿಂದ ಗಾಜಿನಮನೆಯವರೆಗೂ ತ್ಯಾಜ್ಯವಸ್ತುಗಳು ಎಲ್ಲಿಯೂ ಕಾಣದಂತೆ ಸ್ವತ್ಛವಾಗಿಡಲು ಬಳಸಿಕೊಳ್ಳಲಾಗುತ್ತಿದೆ. ಮತ್ತೂಂದು ತಂಡಕ್ಕೆ ಫ‌ುಡ್‌ಕೋರ್ಟ್‌ಗಳ ಸುತ್ತಮುತ್ತ ಕಸ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿದೆ.

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.