ಬಿಬಿಎಂಪಿ ಶಾಲೆಗಳಲ್ಲಿ ಮೂಲ ಸೌಕರ್ಯ, ಶಿಕ್ಷಕರ ಕೊರತೆ
Team Udayavani, Dec 20, 2021, 11:29 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಾಲಾ ವಾತಾವರಣಕ್ಕೆ ಪೂರಕವಾಗಿ ಕಟ್ಟಡಗಳಿಲ್ಲ, ಮೂಲಸೌಕರ್ಯಗಳಿಲ್ಲ, ಕುಡಿಯಲು ಶುದ್ಧ ನೀರಿಲ್ಲ, ಪಾಠ ಮಾಡಲು ಶಿಕ್ಷಕರು ಇಲ್ಲ….. ಇದು ಬಿಬಿಎಂಪಿ ನಡೆಸುತ್ತಿರುವ ಶಾಲೆಗಳ ಚಿತ್ರಣ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ 91 ಶಿಶುವಿಹಾರ, 16 ಪ್ರಾಥಮಿಕ ಶಾಲೆ, 33 ಪ್ರೌಢ ಶಾಲೆ, 15 ಪದವಿಪೂರ್ವ ಹಾಗೂ 4 ಪದವಿ ಕಾಲೇಜುಸೇರಿದಂತೆ ಸುಮಾರು 68 ಶಾಲಾ- ಕಾಲೇಜುಗಳನ್ನು ನಡೆಸುತ್ತಿದೆ. ಇದರಲ್ಲಿ ಬಹುತೇಕ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಮುಖ್ಯವಾಗಿ ನಗರದ ಕಾಕ್ಸ್ ಟೌನ್, ಫ್ರೆàಜರ್‌ಟೌನ್, ಮಾಗಡಿ ರಸ್ತೆ ಹಾಗೂ ಪಾದರಾಯನಪುರ ಸೇರಿ ಹಲವು ಪಾಲಿಕೆ ಶಾಲಾ-ಕಾಲೇಜುಗಳ ಕಟ್ಟಡ ಗಳಲ್ಲಿ ಮೂಲ ಸೌಕರ್ಯದಕೊರತೆ ಇದೆ. ಕಳೆದ ಒಂದು ತಿಂಗಳಿಗೂ ಹೆಚ್ಚಿನ ಕಾಲ ನಿರಂತರವಾಗಿ ಮಳೆ ಸುರಿದ ಸಂದರ್ಭದಲ್ಲಿ ಮಕ್ಕಳು ಕೊಠಡಿಗಳ ಯಾವುದೋ ಒಂದು ಮೂಲೆಯಲ್ಲಿ ನಿಂತು ಪಾಠ ಕೇಳಿರುವ ಘಟನೆಗಳು ಕೂಡ ನಡೆದಿವೆ.
ಅನೇಕ ಶಾಲಾ ಕಟ್ಟಡಗಳು ಸೋರುತ್ತಿರುವುದರಿಂದ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದುಆಯಾ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳಒತ್ತಾಯವಾಗಿದೆ. ಫ್ರೆàಜರ್‌ಟೌನ್ ಪ್ರೌಢಶಾಲೆ ಮತ್ತುಪಿಯು ಕಾಲೇಜು ಕಟ್ಟಡಕ್ಕೆ ಒಂದು ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಕಾಮಗಾರಿ ಇನ್ನೂ ಆರಂಭಿಸಿಲ್ಲ. ಅದೇ ರೀತಿ ಪಾದರಾಯನಪುರ ಶಾಲೆಯಲ್ಲಿ ಟೈಲ್ಸ್‌ಗಳು ಕಿತ್ತುಹೋಗಿದ್ದು, ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಮಾಗಡಿ ರಸ್ತೆ ವೆಂಕಟೇಶ್ವರ ಟೆಕ್ಸ್‌ಟೈಲ್ಸ್ ಎದುರಿನ ಪಾಲಿಕೆ ಕಾಲೇಜು ಕಟ್ಟಡ ಕೂಡ ಸೋರುತ್ತಿದೆ. ಇದೇ ರೀತಿ ಹಲವು ಕಟ್ಟಡಗಳು ತುಂಬಾ ಹಳೆಯದ್ದಾಗಿವೆ.
ಕುಡಿವ ನೀರಿನ ವ್ಯವಸ್ಥೆ ಸರಿಯಿಲ್ಲ: ಹಲವು ಶಾಲಾ – ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಯಂತ್ರಗಳು ಕೆಟ್ಟಿರುವುದರಿಂದವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಕೂಡಲೇ ಗಮನಹರಿಸಬೇಕಿದೆ ಎಂದು ಶಿಕ್ಷಕರೊಬ್ಬರು ಹೇಳುತ್ತಾರೆ.
680 ಶಿಕ್ಷಕರ ಹುದ್ದೆ ಖಾಲಿ: ಪಾಲಿಕೆ ವ್ಯಾಪ್ತಿಯ ಶಿಶು ವಿಹಾರ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಒಟ್ಟಾರೆ 680 ಶಿಕ್ಷಕರ ಹುದ್ದೆಗಳುಖಾಲಿ ಇವೆ. ಈ ಪೈಕಿ ಶಿಶುವಿಹಾರದಲ್ಲಿ 119,ಪ್ರಾಥಮಿಕ ಶಾಲೆಯಲ್ಲಿ 104, ಪ್ರೌಢಶಾಲೆಯಲ್ಲಿ 396 ಹಾಗೂ ಪಿಯು ಕಾಲೇಜಿನಲ್ಲಿ 61 ಹುದ್ದೆಗಳು ಖಾಲಿ ಇವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಹೊರಗುತ್ತಿಗೆ ಆಧಾರದಲ್ಲಿ 622 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಯಂಗೆ ಶಿಕ್ಷಕರ ಒತ್ತಾಯ:
2009ರಿಂದಲೂ ಬಿಬಿಎಂಪಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸೇವಾ ಅನುಭವದ ಆಧಾರದಲ್ಲಿ ಶಿಕ್ಷಕರನ್ನು ಕಾಯಂ ಮಾಡಿಕೊಳ್ಳಬೇಕು ಎಂಬುದು ಶಾಲಾ ಶಿಕ್ಷಕರ ಆಗ್ರಹವಾಗಿದೆ. ಆದರೆ, ನಿಯಮಗಳ ಪ್ರಕಾರ, ಕಾಯಂ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.
–ಎನ್.ಎಲ್. ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.