Lalbagh Flower Show: ಲಾಲ್‌ಬಾಗ್ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧ
Team Udayavani, Jan 16, 2025, 12:01 PM IST
ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನದ ಹಿನ್ನೆಲೆಯಲ್ಲಿ ಕೆಲವು ರಸ್ತೆಗಳ ಸಂಚಾರಗಳಲ್ಲಿ ವಾಹನ ನಿಲುಗಡೆ ಹಾಗೂ ಸಂಚಾರ ನಿಷೇಧಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷ ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಸುತ್ತಮುತ್ತ ಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಸುಗಮ ಸಂಚಾರ ಏರ್ಪಡಿಸುವ ನಿಟ್ಟಿನಲ್ಲಿ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಡಾ.ಮರೀಗೌಡ ರಸ್ತೆ, ಲಾಲ್‌ಬಾಗ್ ರಸ್ತೆ, ಕೆ.ಎಚ್.ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಮಟ್ಟಿಗೆ ಬಿಎಂಟಿಸಿ ಬಸ್‌ಗಳು, ಮೆಟ್ರೋ, ಕ್ಯಾಬ್‌ಗಳನ್ನು ಬಳಸಲು ಹಾಗೂ ವಾಹನಗಳ ನಿಲುಗಡೆಗೆ ಮಾಡಲಾಗಿರುವ ವ್ಯವಸ್ಥೆ ಅನುಸರಿಸಲು ಕೋರಲಾಗಿದೆ.
ರಸ್ತೆ ನಿರ್ಬಂಧ ಮಾಡುವ ಸ್ಥಳಗಳ ವಿವರ: ಸರ್ಕಾರಿ ರಜೆ ದಿನಗಳಲ್ಲಿ ಮಾತ್ರ ಕೆಲವು ರಸ್ತೆಗಳನ್ನು ನಿರ್ಬಂಧಿಸಲಾಗುವುದು. ಡೈರಿ ಸರ್ಕಲ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ಬರುವ ವಾಹನಗಳು, ಊರ್ವಶಿ ಜಂಕ್ಷನ್ ಬಳಿ ಸುಬ್ಬಯ್ಯ ಸರ್ಕಲ್ ಕಡೆಯಿಂದ ಲಾಲ್‌ಬಾಗ್ ಮುಖ್ಯ ದ್ವಾರದ ಕಡೆಗೆ ಬರುವ ವಾಹನಗಳು, ಸಿದ್ದಯ್ಯ ರಸ್ತೆ ಕಡೆಯಿಂದ ಲಾಲ್‌ಬಾಗ್ ಮುಖ್ಯ ದ್ವಾರದ ಕಡೆಗೆ ಬರುವ ವಾಹನಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ.
ಪಯಾಯ ರಸ್ತೆ ಎಲ್ಲೆಲ್ಲಿ ?: ಸರ್ಕಾರಿ ರಜೆ ದಿನಗಳಲ್ಲಿ ಮಾತ್ರ ನಿರ್ಬಂಧಿಸಿರುವ ರಸ್ತೆಗಳಿಗೆ ಪರ್ಯಾಯ ರಸ್ತೆ ಕಲ್ಪಿಸಲಾಗಿದೆ.10ನೇ ಕ್ರಾಸ್ ಡಾ.ಮರಿಗೌಡ ರಸ್ತೆ ನಿರ್ಬಂಧಕ್ಕೆ ಸಂಬಂಧಿಸಿದಂತೆ (ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ ಹಾಗೂ ಬಿಟಿಎಸ್ ರಸ್ತೆ ಕಡೆಗೆ): ಡೈರಿ ಸರ್ಕಲ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ಬರುವ ವಾಹನಗಳು 10ನೇ ಕ್ರಾಸ್ ಜಂಕ್ಷನ್‌ಲ್ಲಿ ಬಲ ತಿರುವು ಪಡೆದು ಸಿ.ಟಿ ಮಾರ್ಕೆಟ್, ಮೆಜೆಸ್ಟಿಕ್, ಕಡೆಗೆ ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆಯ ಹಾಗೂ ಬಿಟಿಎಸ್ ರಸ್ತೆಯ ಮುಖಾಂತರ ಬಿಂಟಿಸಿ (ಕೆ.ಎಚ್) ರಸ್ತೆಯ ಕಡೆಗೆ ಸಂಪರ್ಕಿಸಬಹುದಾಗಿದೆ. ಊರ್ವಶಿ ಜಂಕ್ಷನ್ ಲಾಲ್ ಬಾಗ್ ರಸ್ತೆ ನಿರ್ಬಂಧಕ್ಕೆ ಸಂಬಂಧಿಸಿದಂತೆ: ಸುಬ್ಬಯ್ಯ ಸರ್ಕಲ್ ಕಡೆಯಿಂದ, ಸಿಟಿ ಮಾರ್ಕೆಟ್ ಕಡೆಯಿಂದ, ಲಾಲ್‌ಬಾಗ್, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಕಡೆ ಸಂಚರಿಸುವ ವಾಹನಗಳು ಊರ್ವಶಿ ಜಂಕ್ಷನ್‌ನಲ್ಲಿ ನೇರ ಹಾಗೂ ಎಡ ತಿರುವು ಪಡೆದು ಸಿದ್ದಯ್ಯ ರಸ್ತೆಯ ಮುಖಾಂತರ ಸಂಚರಿಸಿ ಡಾ.ಮರಿಗೌಡ ರಸ್ತೆಗೆ ಸಂಪರ್ಕಿಸಬಹುದು.
ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು
- ಡಾ: ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ.
- ಕೆ.ಎಚ್.ರಸ್ತೆ, ಕೆ.ಎಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ.
- ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರದ ವರೆಗೆ.
- ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ ವರೆಗೆ.
- ಬಿಟಿಎಸ್ ಬಸ್ ಸ್ಟಾಪ್ ಬಿಎಂಟಿಸಿ ಜಂಕ್ಷನ್ ನಿಂದ ಪೋಸ್ಟ್ ಆಪೀಸ್ ರಸ್ತೆಯ ಎರಡೂ ಬದಿಗಳಲ್ಲಿ.
- ಕೃಂಬಿಗಲ್ ರಸ್ತೆಯ ಎರಡೂ ಕಡೆಗಳಲ್ಲಿ.
- ಲಾಲ್‌ಬಾಗ್ ವೆಸ್ಟ್‌ಗೇಟ್‌ನಿಂದ ಆರ್.ವಿ.ಟೀಚರ್ಸ್ ಕಾಲೇಜ್ ವರೆಗೆ.
- ಆರ್‌ವಿ ಟೀಚರ್ಸ್ ಕಾಲೇಜಿನಿಂದ ಅಶೋಕ ಪಿಲ್ಲರ್ ವರೆಗೆ.
- ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಹಣ ಕಳ್ಳತನ: ಓಜಿಕುಪ್ಪಂ ಗ್ಯಾಂಗ್ ಸದಸ್ಯರ ಸೆರೆ
Drug Selling Case: 1 ತಿಂಗಳಲ್ಲಿ 85 ಆರೋಪಿಗಳ ಬಂಧನ
Arrested: ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್ ಮಹಿಳೆ ಸೆರೆ
Lalbagh Flower Show: ಲಾಲ್‌ಬಾಗ್‌ನಲ್ಲಿ ಇಂದಿನಿಂದ 11 ದಿನ ಫಲಪುಷ್ಪ ಮೇಳ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.