Theft: ಲ್ಯಾಪ್ಟಾಪ್, ಮೊಬೈಲ್ ಕಳವು: ಮೂವರ ಬಂಧನ
Team Udayavani, Nov 8, 2023, 9:54 AM IST
ಬೆಂಗಳೂರು: ಪಿಜಿ, ಬ್ಯಾಚುಲರ್ಸ್ ರೂಮ್ ಗಳಲ್ಲಿ ಮೊಬೈಲ್ಗಳು, ಲ್ಯಾಪ್ಟಾಪ್ಗ್ಳನ್ನು ಕಳವು ಮಾಡುತ್ತಿದ್ದ ಪ್ರಮುಖ ಆರೋಪಿ ಸೇರಿ ಮೂವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಶ್ರೀನಾಥ್(30), ಆರ್.ಆರ್.ನಗರ ನಿವಾಸಿ ಮಂಜುನಾಥ್ (39) ಮತ್ತು ಸಹಕಾರನಗರ ನಿವಾಸಿ ಎಸ್. ಕೆ.ಸೆಲ್ವನ್(56) ಬಂಧಿತರು. ಆರೋಪಿಗಳಿಂದ 75 ಲಕ್ಷರೂ. ಮೌಲ್ಯದ 133 ವಿವಿಧ ಕಂಪನಿಗಳ ಲ್ಯಾಪ್ಟಾಪ್ಗ್ಳು, 19 ಮೊಬೈಲ್ ಗಳು, 14 ಟ್ಯಾಬ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಶ್ರೀನಾಥ್, ನಗರದ ವಿವಿಧೆಡೆ ಪಿಜಿ, ಬ್ಯಾಚುಲರ್ಸ್ಗಳ ರೂಮ್ಗಳಲ್ಲಿ ಲ್ಯಾಪ್ಟಾಪ್, ಮೊಬೈಲ್, ಟ್ಯಾಬ್ಗಳನ್ನು ಕಳವು ಮಾಡುತ್ತಿದ್ದ. ಅವುಗಳನ್ನು ಆರ್.ಆರ್.ನಗರದಲ್ಲಿ ಲಿಯೋ ವಿಸ್ಡಂ ಕಂಪ್ಯೂಟರ್ ಸೇಲ್ಸ್ ಆ್ಯಂಡ್ ಸರ್ವಿಸ್ ಮಾಲೀಕ ಮಂಜುನಾಥ್ ಮತ್ತು ಸಹಕಾರನಗರದಲ್ಲಿ ಇ-ಸೈಕಲ್ ಸಲ್ಯೂಷನ್, ವೆಸ್ಟ್ ಮ್ಯಾನೆಜ್ಮೆಂಟ್ ಕಂಪನಿ ಮಾಲೀಕ ಸೆಲ್ವನ್ಗೆ ಮಾರಾಟ ಮಾಡುತ್ತಿದ್ದ. ಈ ಆರೋಪಿಗಳು ಅವುಗಳನ್ನು ಫ್ಲ್ಯಾಷ್ ಮಾಡಿ, ಸೆಕೆಂಡ್ ಹ್ಯಾಂಡ್ ವಸ್ತುಗಳು ಎಂದು ಮಾರಾಟ ಮಾಡುತ್ತಿದ್ದರು. ಶ್ರೀನಾಥ್ ವಿರುದ್ಧ 2019ರಲ್ಲಿ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿ ಆರ್.ಪ್ರಕಾಶ್, ಠಾಣಾಧಿಕಾರಿ ಶಂಕರಗೌಡ ಬಸನಗೌಡರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.