![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 6, 2023, 12:16 PM IST
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿ ಕೆ.ಆರ್.ಶಬರೀಶ್ (32) ಮತ್ತು ಸೋಮೇಶ್ವರನಗರದ ಅರೆ ಕೆಂಪನಹಳ್ಳಿ ನಿವಾಸಿ ಫಾಜಿಲ್ ಪಾಷಾ (29) ಬಂಧಿತರು.
ಆರೋಪಿ ಗಳಿಂದ 9 ಲಕ್ಷ ರೂ. ಮೌಲ್ಯದ 39 ಲ್ಯಾಪ್‌ಟಾಪ್‌ಗ್ಳನ್ನು ಜಪ್ತಿ ಮಾಡ ಲಾಗಿದೆ. ಇತ್ತೀಚೆಗೆ ಆಂಧ್ರಪ್ರದೇಶದ ಸಾರಿಗೆ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾ ಣಿ ಸುತ್ತಿದ್ದ ಕೆ.ವಿ.ಸುಬ್ಟಾರೆಡ್ಡಿ ಎಂಬುವರ ಲ್ಯಾಪ್‌ಟಾಪ್ ಕಳುವಾಗಿತ್ತು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಗಳ ಪೈಕಿ ಕೆ.ಆರ್.ಶಬರೀಶ್ ರಾತ್ರಿ ವೇಳೆ ಆಂಧ್ರಪ್ರದೇಶದಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳುವ ಬಸ್‌ಗಳಲ್ಲಿ ಪ್ರಯಾಕರ ಸೋಗಿನಲ್ಲಿ ಪ್ರಯಾಸುತ್ತಿದ್ದ. ಈ ವೇಳೆ ಲ್ಯಾಪ್‌ಟಾಪ್ ಬ್ಯಾಗ್ ಇರುವ ಪ್ರಯಾಣಿಕರನ್ನು ಗಮನಿಸಿ, ಪ್ರಯಾಣಿಕರು ಗಾಢ ನಿದ್ದೆಗೆ ಜಾರಿದಾಗ ಲ್ಯಾಪ್‌ಟಾಪ್ ಬ್ಯಾಗ್ ಎಗರಿಸಿ ಮಾರ್ಗ ಮಧ್ಯೆಯೇ ಇಳಿದು ಪರಾರಿಯಾಗುತ್ತಿದ್ದ. ಈ ಕದ್ದ ಲ್ಯಾಪ್‌ಟಾಪ್‌ಗ್ಳನ್ನು ಬೆಂಗಳೂರಿನ ಫಾಜಿಲ್ ಮೂಲಕ ವಿಲೇವಾರಿ ಮಾಡಿಸಿ ಹಣ ಪಡೆಯುತ್ತಿದ್ದ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.