ಇಂದು ರಾತ್ರಿ ಪಾರ್ಶ್ವ ಚಂದ್ರಗ್ರಹಣ
Team Udayavani, Aug 7, 2017, 1:23 PM IST
ಬೆಂಗಳೂರು: ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲಪಕ್ಷ ಹುಣ್ಣಿಮೆಯಾದ ಸೋಮವಾರ ಭಾರತದಲ್ಲಿ ಚಂದ್ರಗ್ರಹಣ ಸಂಭವಿಸಲಿದ್ದು, ಮಂಗಳವಾರ ಬೆಳಗಿನಜಾವದವರೆಗೂ ಮುಂದುವರಿಯಲಿದೆ.
ಯೂರೋಪ್, ಏಷ್ಯಾ, ದಕ್ಷಿಣ ಆಫ್ರಿಕಾಗಳಲ್ಲೂ ಈ ಗ್ರಹಣ ಕಾಣಿಸಲಿದೆ. ರಾಜ್ಯದಲ್ಲಿ ರಾತ್ರಿ 10.52ರ ನಂತರ ಗ್ರಹಣ ನೋಡಲು ಸಾಧ್ಯವಾಗಲಿದ್ದು, 11.50ಕ್ಕೆ ಗರಿಷ್ಠಮಟ್ಟದ ಗ್ರಹಣ ಸಂಭವಿಸಲಿದೆ. ಬರಿಗಣ್ಣಿನಿಂದಲೂ ಈ ಗ್ರಹಣವನ್ನು ವೀಕ್ಷಿಸಬಹುದು.
ಚಂದ್ರ ಗ್ರಹಣದಲ್ಲಿ ಎರಡು ಪ್ರಕಾರಗಳಿದ್ದು, ಒಂದು ಚಂದ್ರ ಭೂಮಿಯನ್ನು ಪ್ರವೇಶಿಸುವಾಗ ದಟ್ಟ ನೆರಳಿನ ಭಾಗದಲ್ಲಿ ಚಂದ್ರ ಪೂರ್ಣವಾಗಿ ಹಾಯ್ದುಹೋದರೆ, ಆಗ ಪೂರ್ಣಗ್ರಹಣ ಸಂಭವಿಸುತ್ತದೆ. ಅದೇ ರೀತಿ ದಟ್ಟ ನೆರಳಿನ ಮೂಲಕ ಭಾಗಶಃ ಹಾದುಹೋದರೆ, ಪಾರ್ಶ್ವ ಗ್ರಹಣ ಉಂಟಾಗುತ್ತದೆ. ಸೋಮವಾರ ರಾತ್ರಿ ಪಾರ್ಶ್ವ ಗ್ರಹಣ ಸಂಭವಿಸಲಿದೆ ಎಂದು ನೆಹರು ತಾರಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.
ತಾರಾಲಯದಲ್ಲಿ ವ್ಯವಸ್ಥೆ
ಸೋಮವಾರ ರಾತ್ರಿ 10.52ಕ್ಕೆ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುವ ಚಂದ್ರ, 12.48ಕ್ಕೆ ನೆರಳಿನಿಂದ ಆಚೆಗೆ ಸರಿಯಲಿದೆ. ಅಂದು ರಾತ್ರಿ ಉಂಟಾಗಲಿರುವ ಪ್ರಾರ್ಶ್ವ ಚಂದ್ರಗ್ರಹಣ ವೀಕ್ಷಣೆಗೆ ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೋಡಗಳ ಅಡಚಣೆ ಇಲ್ಲವಾದರೆ, ಅತ್ಯಂತ ಸ್ಪಷ್ಟವಾಗಿ ಗ್ರಹಣವು ಕಣ್ಣಿಗೆ ಗೋಚರಿಸಲಿದೆ.
21ಕ್ಕೆ ಸೂರ್ಯಗ್ರಹಣ
ಸಾಮಾನ್ಯವಾಗಿ ಚಂದ್ರ ಭೂಮಿಯನ್ನು ಪ್ರವೇಶಿಸುವಾಗ ದಟ್ಟ ನೆರಳಿನಲ್ಲಿ ಪೂರ್ಣವಾಗಿ ಅಥವಾ ಭಾಗಶಃ ಹಾದುಹೋಗುತ್ತದೆ. ಈ ಸಂದರ್ಭದಲ್ಲಿ ಗ್ರಹಣ ಉಂಟಾಗುತ್ತದೆ. ಚಂದ್ರಗ್ರಹಣದ ಬೆನ್ನಲ್ಲೇ ಆಗಸ್ಟ್ 21ರಂದು ಸೂರ್ಯಗ್ರಹಣ ಸಂಭವಿಸಲಿದೆ. ಆದರೆ, ಇದು ಭಾರತ ಸೇರಿದಂತೆ ಏಷ್ಯಾ ಮತ್ತು ಆಫ್ರಿಕಾದ ಕೆಲ ಭಾಗಗಳಲ್ಲಿ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
-ಗ್ರಹಣ ಆರಂಭ 10.52
-ಗರಿಷ್ಠ ಪ್ರಮಾಣದ ಗ್ರಹಣ 11.50
-ಗ್ರಹಣ ಪೂರ್ಣಗೊಳ್ಳುವುದು 12.48
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.