ಗಣೇಶ ದರ್ಶನಂ ಪ್ರದರ್ಶನಕ್ಕೆ ಚಾಲನೆ
Team Udayavani, Sep 11, 2018, 12:28 PM IST
ಬೆಂಗಳೂರು: “ಗಣೇಶ ದರ್ಶನಂ’ ಶೀರ್ಷಿಕೆಯ ವಿಶಿಷ್ಟ ಕಲಾ ಪ್ರದರ್ಶನದೊಂದಿಗೆ, ರಾಜರಾಜೇಶ್ವರಿ ನಗರದ ಕೊಬಾಲ್ಟ್ ಕಲಾ ಗ್ಯಾಲರಿಯನ್ನು ಖ್ಯಾತ ಕಲಾವಿದ ಡಾ.ಬಿ.ಕೆ.ಎಸ್.ವರ್ಮ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ವಿಘ್ನ ನಿವಾರಕನ ವಿಭಿನ್ನ ರೂಪಗಳನ್ನು ಆಧರಿಸಿ ರೂಪಿಸಲಾದ ಕಲಾಕೃತಿಗಳ ಪ್ರದರ್ಶನ ಆಯೋಜಿಸಿರುವುದು ಸಂತಸ ತಂದಿದೆ. ಗಣೇಶ ಎಲ್ಲರೂ, ಎಲ್ಲ ಭಾಗಗಳಲ್ಲೂ ಆರಾಧಿಸುವ ದೈವವಾಗಿದ್ದಾನೆ ಎಂದರು.
ಕವಿ ಸಿದ್ದಲಿಂಗಯ್ಯ ಮಾತನಾಡಿ, ಕಲಾವಿದರನ್ನು ಸೃಷ್ಟಿಸುವುದು ದೇವರು. ಅದರೆ, ಆ ದೇವರು ಹೇಗಿದ್ದಾನೆ ಎಂದು ತಿಳಿಸಿಕೊಟ್ಟವರು ಮಾತ್ರ ಕಲಾವಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ, ಪಾಲಿಕೆ ಸದಸ್ಯೆ ನಳಿನಿ ಮಂಜು, ಜಿ.ಎಚ್.ರಾಮಚಂದ್ರ, ಎಂ.ರಾಜಕುಮಾರ್, ಎಂ.ತಿಬ್ಬೆಗೌಡ, ಕೆ.ಎನ್.ರಾಮಮೋಹನ್, ವಿಮರ್ಶಕ ಕೃಷ್ಣಶೆಟ್ಟಿ, ಕೊಬಾಲ್ಟ್ ಸಂಸ್ಥೆ ಅಧ್ಯಕ್ಷ ಗಣಪತಿ ಹೆಗಡೆ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.