ಕೆಂಗೇರಿಯಲ್ಲಿ ಪೈ ಇಂಟರ್‌ನ್ಯಾಷನಲ್‌ನ ಹೊಸ ಮಳಿಗೆ ಆರಂಭ
Team Udayavani, Jul 25, 2017, 11:17 AM IST
ಬೆಂಗಳೂರು: ಟಿವಿ, ಫ್ರಿಡ್ಜ್, ಲ್ಯಾಪ್‌ಟಾಪ್, ಮೊಬೈಲ್, ಕುಕ್ಕರ್, ವಾಷಿಂಗ್ ಮೆಷಿನ್, ಜಿಮ್ ಉಪಕರಣಗಳು… ಕೆಂಗೇರಿಯಲ್ಲಿ ಆರಂಭವಾಗಿರುವ ಹೆಸರಾಂತ ಪೈ ಇಂಟರ್‌ನ್ಯಾಷನಲ್ ಸಂಸ್ಥೆಯ ಹೊಸ ಶೋರೂಮ್‌ನಲ್ಲಿ ಲಭ್ಯವಿರುವ ವಸ್ತು, ಸಾಧನಗಳ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ!
ದಕ್ಷಿಣ ಭಾರತ ಸೇರಿದಂತೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ತನ್ನ ಮಳಿಗೆ ಹೊಂದಿರುವ ಪೈ ಇಂಟರ್ ನ್ಯಾಷನಲ್‌ನ ಹೊಸ ಮಳಿಗೆ ಕೆಂಗೇರಿ ರಿಂಗ್ ರಸ್ತೆಯ ನಾಗದೇವನಹಳ್ಳಿಯಲ್ಲಿ ಈಗ ಶುಭಾರಂಭಗೊಂಡಿದೆ.
ನಿವೃತ್ತ ಡಿಸಿಪಿ ವೆಂಕಟಸ್ವಾಮಿ, ಪೈ ಇಂಟರ್‌ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಜಕುಮಾರ್ ಪೈ, ನಿರ್ದೇಶಕರಾದ ಮೀನಾ ರಾಜಕುಮಾರ್ ಪೈ ಹಾಗೂ ಉತ್ತಮ್ ಪೈ ಮೊದಲಾದ ಗಣ್ಯರು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರಗು ತಂದರು.
6 ಸಾವಿರ ಚದರ ಅಡಿ ಅಳತೆಯ ಈ ಶೋರೂಂನಲ್ಲಿ ಮೂರು ಅಂತಸ್ತುಗಳಿದ್ದು, ವಿವಿಧ ಬ್ರ್ಯಾಂಡ್‌ನ ಮೊಬೈಲ್, ಟಿವಿ, ಲ್ಯಾಪ್‌ಟಾಪ್, ಫ್ರೀಡ್ಜ್, ವಾಷಿಂಗ್ ಮೆಷಿನ್, ಕುಕ್ಕರ್, ಜಿಮ್ ಸಲಕರಣೆ ಸೇರಿದಂತೆ ಎಲ್ಲ ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಧನಗಳು ಲಭ್ಯವಿವೆ. ಶೋರೂಂ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಕೂಡ ಪೈ ಇಂಟರ್‌ನ್ಯಾಷನಲ್ ಸಂಸ್ಥೆ ಘೋಷಿಸಿದೆ.
ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿ ಮಾಡುವರ ಗ್ರಾಹಕರಿಗೆ 5 ಗ್ರಾಂ. ಚಿನ್ನದ ನಾಣ್ಯ, ಒಂದು ಲಕ್ಷಕ್ಕಿಂತ ಅಧಿಕ ಖರೀದಿಗೆ 2.5 ಗ್ರಾಂ. ಚಿನ್ನದ ನಾಣ್ಯ, 40 ಸಾವಿರಕ್ಕಿಂತ ಅಧಿಕ ಖರೀದಿಗೆ 1 ಗ್ರಾಂ. ಚಿನ್ನದ ನಾಣ್ಯ, 20 ಸಾವಿರಕ್ಕಿಂತ ಅಧಿಕ ಖರೀದಿಗೆ 0.5 ಗ್ರಾಂ. ಚಿನ್ನದ ನಾಣ್ಯ ಹಾಗೂ 10 ಸಾವಿರಕ್ಕಿಂತ ಅಧಿಕ ಖರೀದಿಗೆ 10 ಗ್ರಾಂ. ಬೆಳ್ಳಿ ನಾಣ್ಯ ಮತ್ತು 5 ಸಾವಿರಕ್ಕಿಂತ ಅಧಿಕ ಮೌಲ್ಯದ ಖರೀದಿ ಮಾಡಿದಾಗ 5 ಗ್ರಾಂ. ಬೆಳ್ಳಿ ನಾಣ್ಯ ಕೊಡುಗೆಯಾಗಿ ನೀಡಲಾಗುತ್ತದೆ. ಹಾಗೆಯೇ ಎರಡು ಸಾವಿರಕ್ಕಿಂತ ಅಧಿಕ ಮೌಲ್ಯದ ವಸ್ತು ಖರೀದಿಸಿದ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಪೈ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಇದು ನಮ್ಮ ಸಂಸ್ಥೆಯ 83ನೇ ಶೋರೂಂ ಆಗಿದ್ದು, 22 ಮೊಬೈಲ್ ಸ್ಟೋರ್, ರಾಜ್ಯದ ಬೇರೆ ಬೇರೆ ಭಾಗದಲ್ಲಿ 14, ತೆಲಂಗಾಣದಲ್ಲಿ 16, ಆಂಧ್ರದಲ್ಲಿ 1 ಹಾಗೂ ಬೆಂಗಳೂರಿನಲ್ಲಿ 30 ಶೋರೂಮ್‌ಗಳನ್ನು ನಾವು ಹೊಂದಿದ್ದೇವೆ. ಇದರಲ್ಲಿ ತಲಾ ಎರಡು ಸ್ಯಾಮಸಂಗ್ ಹಾಗೂ ಎಲ್‌ಜಿ ಮತ್ತು ಒಂದು ಸೋನಿ ಬ್ರ್ಯಾಂಡ್ ಶಾಪ್ ಜತೆಗೆ 25 ಮಲ್ಟಿ ಬ್ರ್ಯಾಂಡ್ ಸ್ಟೋರ್‌ಗಳು ಬೆಂಗಳೂರಿನಲ್ಲಿವೆ,’ ಎಂದರು.
“ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್‌ನ “ಹೆನ್ರಿ’ ಟಿವಿಗಳಿಗೆ ಉತ್ತಮ ಬೇಡಿಕೆಯಿದ್ದು, ಅತಿ ಶೀಘ್ರವದಲ್ಲೇ ಸ್ಮಾರ್ಟ್ ಮತ್ತು 4ಕೆ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದೇವೆ. ಗುಣಮಟ್ಟದ ಜತೆಗೆ ಅತ್ಯುತ್ತಮ ಸೇವೆ ಒದಗಿಸಲು ಪೈ ಇಂಟರ್‌ನ್ಯಾಷನಲ್ ಹೆಸರಾಗಿದೆ. ಗ್ರಾಹಕರ ವಿಶ್ವಾಸ ಗಳಿಸುವ ಮೂಲಕ ಕಳೆದ ವರ್ಷ 1050 ಕೋಟಿ ರಿಟೇಲ್ ವಹಿವಾಟು ನಡೆಸಿದ್ದೇವೆ.
ಈ ವರ್ಷ 1400 ಕೋಟಿ ರಿಟೇಲ್ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ. ಈ ಹಣಕಾಸು ವರ್ಷದಲ್ಲಿ 20 ಹೊಸ ಮಳಿಗೆಗಳನ್ನು ತೆರೆಯುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಫರ್ನಿಚರ್ ಮಳಿಗೆ ಕ್ಷೇತ್ರವನ್ನೂ ಸಂಸ್ಥೆ ಪ್ರವೇಶಿಸಿದ್ದು, ಈಗಾಗಲೇ ಮೂರು ಮಳಿಗೆಗಳನ್ನು ಹೊಂದಿದೆ. ಶೀಘ್ರದಲ್ಲೇ ಇನ್ನೂ ಮೂರು ಹೊಸ ಪೀಠೊಪಕರಣ ಮಳಿಗೆಗಳನ್ನು ತೆರೆಯಲಿದ್ದೇವೆ,’ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.