ಆಲಸಿಗಳೆಂದರೆ ಹೃದ್ರೋಗಕ್ಕೆ ಪಂಚಪ್ರಾಣ: ಡಾ.ಮಂಜುನಾಥ್
Team Udayavani, Jan 5, 2020, 3:09 AM IST
ಬೆಂಗಳೂರು: ಭಾರತೀಯ ವದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವರದಿ ಪ್ರಕಾರ ಭಾರತದ ಜನಸಂಖ್ಯೆ ಪೈಕಿ ಶೇ.51 ಮಂದಿ ಆಲಸಿಗರಿದ್ದು, ಈ ಅಂಶ ಕೂಡ ಹೃದ್ರೋಗ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಸಮ್ಮೇಳನ “ಭಾರತದಲ್ಲಿ ಹೃದ್ರೋಗ ವಿವರ; ಅಪಾಯ ಹಾಗೂ ಇತ್ತೀಚಿನ ಅಂಶಗಳು’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷಿಪ್ರ ಗತಿಯಲ್ಲಿ ಹೆಚ್ಚಾಗುತ್ತಿರುವ ಅಸಾಂಕ್ರಾಮಿಕ ರೋಗಗಳ ಪೈಕಿ ಹೃದ್ರೋಗ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ ನಾಲ್ಕು ಮಂದಿ ಹೃದ್ರೋಗ ದಿಂದ ಸಾವಿಗೀಡಾಗುತ್ತಿದ್ದು, ಈಸಂಖ್ಯೆ ಜಾಗತಿಕ ಮಟ್ಟದಲ್ಲೇ ಅತಿ ಹೆಚ್ಚು.
ಇತ್ತೀಚಿನ ದಿನಗಳಲ್ಲಿ ಹೃದ್ರೋಗಕ್ಕೆ ಒತ್ತಡ ಜತೆಗೆ ಆಲಸ್ಯದ ಜೀವನ ಶೈಲಿಯೂ ಪ್ರಮುಖ ಕಾರಣವಾಗಿದೆ. ಅಂತೆಯೇ ಐಸಿಆರ್‌ಎಸ್ ವರದಿಯು ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.51 ಮಂದಿ ಆಲಸಿ ಗಳಿದ್ದಾರೆ ಎಂದು ಹೇಳಿದೆ. ಹೀಗಾಗಿ, ಸದಾ ಚಟುವಟಿಕೆ ಒಳಗೊಂಡ ಜೀವನ ಶೈಲಿ ಭಾರತೀಯರಿಗೆ ಅವಶ್ಯಕವಾಗಿದೆ ಎಂದರು.
ಯುವಜನತೆಯಲ್ಲಿ ಹೆಚ್ಚಾದ ಹೃದ್ರೋಗ: ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಡೆದ ಸಂಶೋಧನೆಯಲ್ಲಿ 25-35 ವಯಸ್ಸಿನವರಲ್ಲಿ ಹೃದ್ರೋಗ ಹೆಚ್ಚಾಗುತ್ತಿರುವುದು ತಿಳಿದುಬಂದಿದೆ. ಕಳೆದ ಎರಡು ವರ್ಷದಲ್ಲಿ 35 ವರ್ಷದೊಳಗಿನ 2200 ಮಂದಿ ಹೃದ್ರೋಗ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಶೇ.22ರಷ್ಟು ಹೆಚ್ಚಳವಾಗಿದೆ. ಇನ್ನು ವಯಸ್ಸಿಗೆ ಮೊದಲೇ ಹೃದ್ರೋಗ ಕಾಣಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ಶೇ.45 ಮಂದಿ 38-40 ವಯಸ್ಸಿನವರು, ಶೇ.33 ಮಂದಿ 31-35 ವಯಸ್ಸಿನವರು, ಶೇ.17 ಮಂದಿ 26-30 ವರ್ಷದವರಿದ್ದಾರೆ. ಇನ್ನು ಇವರ ಪೈಕಿ ಶೇ.51 ಮಂದಿಯ ಹೃದ್ರೋಗಕ್ಕೆ ಧೂಮಪಾನವೇ ಕಾಣವಾಗಿದೆ ಡಾ.ಮಂಜು ನಾಥ್ ಎಂದರು.
80 ವರ್ಷ ಬದುಕುವುದೇ ಮಕ್ಕಳಿಗೆ ನೀಡುವ ಕೊಡುಗೆ: ಭಾರತದಲ್ಲಿ ಶೇ.15 ಮಂದಿ ಕೌಟುಂಬಿಕ ಹಿನ್ನೆಲೆಯಿಂದ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಕುಟುಂಬದಲ್ಲಿ 50 ವರ್ಷದೊಳಗೆ ಯಾರಾದರೂ ಹೃದ್ರೋಗದಿಂದ ಸಾವಿಗೀಡಾಗಿದ್ದರೆ ಆ ಅಂಶವು ಮುಂದಿನ ಸಂತತಿಯಲ್ಲಿ ಕಂಡುಬರುತ್ತಿದೆ. ಹೀಗಾಗಿ, ಹಣ ಆಸ್ತಿಗಿಂತಲೂ 70-80 ವರ್ಷ ತಂದೆ ತಾಯಿ ಬದುಕಿದರೆ ಅದೇ ಅವರು ತಮ್ಮ ಕುಟುಂಬದ ಮುಂದಿನ ಪೀಳಿಗೆಗೆ ಹಾಗೂ ತಮ್ಮ ಮಕ್ಕಳಿಗೆ ನೀಡುವ ದೊಡ್ಡ ಕೊಡುಗೆ ಎಂದು ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
3 ತಾಸು ಕೂರುವುದು ಐದು ಸಿಗರೇಟಿಗೆ ಸಮ: ಜೀವನ ಶೈಲಿಯಿಂದ ಹೊಸ ರೋಗಗಳು ಹೆಚ್ಚಾಗುತ್ತಿದ್ದು, ಆ ಪೈಕಿ ಸಿಟ್ಟಿಂಗ್ ಡಿಸೀಸ್ ಕೂಡ ಒಂದು. ಒಂದೇ ಕಡೆ ಮೂರು ಗಂಟೆ ಕುಳಿತುಕೊಳ್ಳುವುದು ಐದು ಸಿಗರೇಟು ಸೇದುವುದಕ್ಕೆ ಸಮ. ಒಂದೇ ಕಡೆ ಹೆಚ್ಚು ಸಮಯ ಕುಳಿತುಕೊಳ್ಳುವುದು ಕೂಡ ಹೃದ್ರೋಗಕ್ಕೆ ಕಾರಣವಾಗುತ್ತಿದೆ.
ದಿನದಲ್ಲಿ 6 ಗಂಟೆ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಪುರುಷರ ಜೀವಿತಾವಧಿಯಲ್ಲಿ ಶೇ.20, ಮಹಿಳೆಯರ ಜೀವಿತಾವಧಿಯಲ್ಲಿ ಶೇ.40ರಷ್ಟು ಕಡೆಮೆಯಾಗುತ್ತಿದೆ. ಜತೆಗೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದೆ. ದಿನದ ಹೆಚ್ಚು ಸಮಯ ನಿಂತುಕೊಳ್ಳುವುದು, ಓಡಾಡುವುದರ ಜತೆಗೆ ಚಟುವಟಿಕೆಯಿಂದ ದಿನ ಕಳೆಯುವುದು ಒಂದು ರೀತಿಯ ಆರೋಗ್ಯ ಕಾಳಜಿಯಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.