ಹಕ್ಕುಪತ್ರ ನೀಡುವುದಾಗಿ ಹೇಳಿ, ಜನಸ್ಪಂದನೆ ನಡೆಸಿದ ನಾಯಕರು
Team Udayavani, Dec 22, 2017, 11:47 AM IST
ಬೆಂಗಳೂರು: ಹಕ್ಕುಪತ್ರ ನೀಡುವುದಾಗಿ ಕೊಳಗೇರಿ ನಿವಾಸಿಗಳಿಗೆ ಮಾಹಿತಿ ನೀಡಿ ಅವರನ್ನು ಕರೆಸಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದ ಜನಪ್ರತಿನಿಧಿಗಳ ಕ್ರಮಕ್ಕೆ ರಾಗೀಗುಡ್ಡ ಕೊಳಗೇರಿ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ. ಜೆ.ಪಿ.ನಗರದ ರಾಗೀಗುಡ್ಡ ಕೊಳಗೇರಿಯ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ
ಮಂಡಳಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ನಿವಾಸಿಗಳು ಹಕ್ಕುಪತ್ರ ನೀಡಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ರಾತ್ರಿ ತಮಟೆ ಹೊಡೆಸಿ ನಾಳೆ ಸಚಿವರು ಹಕ್ಕು ಪತ್ರಗಳ ವಿತರಿಸಲಿದ್ದು, ಎಲ್ಲ ನಿವಾಸಿಗಳು ಸಭೆಗೆ ಹಾಜರಾಗಬೇಕು ಎಂದು ಮಾಹಿತಿ ನೀಡಿದ್ದರು. ಹಕ್ಕುಪತ್ರ ನೀಡುತ್ತಾರೆಂದು ಕೆಲಸಕ್ಕೆ ರಜೆ ಹಾಕಿ ಸಭೆಗೆ ಬಂದರೆ, ಇವರು ಚುನಾವಣಾ ಪ್ರಚಾರಕ್ಕಾಗಿ ಸಭೆ ನಡೆಸಿದರು’ ಎಂದು ಸ್ಥಳೀಯ ನಿವಾಸಿ ಗೀತಾ ಬೇಸರ ವ್ಯಕ್ತಪಡಿಸಿದರು.
ಹಕ್ಕುಪತ್ರಗಳನ್ನು ನೀಡಲು ಮುಂದಾಗದ ಜನಪ್ರತಿನಿಧಿಗಳು ಕೇವಲ ಭರವಸೆ ನೀಡಿ ಹೋದರು. ಹಕ್ಕುಪತ್ರ ಪಡೆಯಲು 21,600 ರೂ. ಡಿ.ಡಿ. ಪಾವತಿಸಿ ಮೂರು ವರ್ಷವಾದರೂ ಈವರೆಗೆ ಹಕ್ಕು ಪತ್ರ ಕೈಸೇರಿಲ್ಲ’ ಎಂದು ಸುಶೀಲಮ್ಮ ದೂರಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಸರ್ಕಾರದಿಂದ ಬಡವರು, ಹಿಂದುಳಿದವರಿಗಾಗಿ ಸರ್ಕಾರ ದಿಂದ 1 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಹೇಳಲಾಗಿದೆ. ಮನೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೊಳಗೇರಿಯ ಕುರಿತು ಮಾಹಿತಿ ನೀಡಿದ ರಾಣಿಶ್ರೀ, ರಾಗೀಗುಡ್ಡ ಕೊಳಗೇರಿಯಲ್ಲಿ ಒಟ್ಟು 48 ಬ್ಲಾಕ್‌ಗಳಲ್ಲಿ 1500 ಮನೆಗಳಿದ್ದು, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಾಂಕೇತಿಕವಾಗಿ ಐದು ಜನರಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದಾರೆ. ಉಳಿದವರಿಗೆ ಈವರೆಗೆ ಹಕ್ಕುಪತ್ರ ನೀಡಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗಿಲ್ಲ ಎಂದು ಆರೋಪಿಸಿದರು. ನಿವಾಸಿಗಳಿಂದ ಅಹವಾಲು ಸ್ವೀಕರಿಸಿದ ವಸತಿ ಸಚಿವ ಎಂ.ಕೃಷ್ಣಪ್ಪ, ಕೊಳಗೇರಿ ನಿವಾಸಿಗಳ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಂಗನವಾಡಿಯೂ ಇಲ್ಲ: ಆಕ್ಷೇಪ
ರಾಗೀಗುಡ್ಡ ಕೊಳಗೇರಿಯಲ್ಲಿ ಸುಮಾರು 1500 ಮನೆಗಳಿದ್ದು, ನೂರಾರು ಮಕ್ಕಳು ಕಿಲೋ ಮೀಟರ್ ದೂರದ ಅಂಗನವಾಡಿ ಹಾಗೂ ಶಾಲೆಗಳಿಗೆ ಹೋಗಬೇಕಿದ್ದು, ಕೂಡಲೇ ಕೊಳಗೇರಿಗೆ ಸಮೀಪದಲ್ಲಿ ಅಂಗನವಾಡಿ ಹಾಗೂ ಶಾಲೆ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ವಿದ್ಯಾರ್ಥಿಗಳಾದ ಅಲ್ಮಾಸ್ ಹಾಗೂ ಹರ್ಷಿಯಾ ಸಭೆಯಲ್ಲಿ ಒತ್ತಾಯಿಸಿದರು.
ಕೊಳಗೇರಿ ಪ್ರದೇಶದಲ್ಲಿ ಇನ್ನೂ 150 ಮನೆಗಳನ್ನು ಹಂಚಿಕೆ ಮಾಡಬೇಕಿದ್ದು, ಜನವರಿ ಅಥವಾ ಫೆಬ್ರವರಿ ವೇಳೆಗೆ ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಮಾಡಬೇಕು. ಜತೆಗೆ ಹೊರಗಿನವರಿಗೆ ಮನೆಗಳನ್ನು ಹಂಚಿಕೆ ಮಾಡದೆ, ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು.
ಬಿ.ಎನ್.ವಿಜಯ್ ಕುಮಾರ್, ಶಾಸಕ
ಮನೆಗಳಿಗೆ ಒಳಚರಂಡಿ ನೀರು ನುಗ್ಗುತ್ತೆ ಒಳಚರಂಡಿ ಪೈಪುಗಳನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ 32ನೇ ಬ್ಲಾಕ್‌ನಿಂದ 34ನೇ ಬ್ಲಾಕ್‌ವರೆಗೆ ಮ್ಯಾನ್ ಹೋಲ್‌ಗಳು ಉಕ್ಕಿ ಹರಿಯುತ್ತವೆ. ಸಚಿವರು ಬರುತ್ತಿದ್ದಾರೆ ಎಂದು ಸ್ವತ್ಛಗೊಳಿಸಿದ್ದು, ತಿಂಗಳಿಗೆ ಪ್ರತಿ ಮನೆಯವರು 100 ರೂ. ಕೊಟ್ಟು ಸರಿಪಡಿಸಬೇಕಾದ ಪರಿಸ್ಥಿತಿಯಿದೆ ಎಂದು ನಾಗಮಣಿ ಎಂಬುವರು ಅಹವಾಲು ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.