ಎಲ್‌ಇಡಿ ಲೈಟ್‌ನಲ್ಲಿ ಲೋಪ: 12 ಸಾವಿರ ರೂ. ಪರಿಹಾರ ನೀಡಲು ಕೋರ್ಟ್ ಸೂಚನೆ
Team Udayavani, Jun 23, 2022, 10:40 AM IST
ಬೆಂಗಳೂರು: ಎಲ್‌ಇಡಿ ಲೈಟ್‌ಗಳನ್ನು ವಿನಿಮಯಗೊಳಿಸಲು ನಿರಾಕರಿಸಿದ ಕಂಪನಿಯ ವಿರುದ್ಧ ಗ್ರಾಹಕರ ವ್ಯಾಜ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಬಡ್ಡಿ ಸಹಿತ ಪರಿಹಾರ ನೀಡುವಂತೆ ಆದೇಶ ನೀಡಲಾಗಿದೆ.
ಎಲ್‌ಇಡಿ ಲೈಟ್ ಸಂಸ್ಥೆಯು ದೂರುದಾರರು ಪಾವತಿಸಿದ್ದ 7,080 ರೂ. ಹಾಗೂ 1,000 ರೂ. ಬಡ್ಡಿ ಸೇರಿದಂತೆ 8,080 ರೂ. ಹಾಗೂ ಮಾಸಿಕ ಹಿಂಸೆ, ಕೋರ್ಟ್ ವ್ಯಾಜ್ಯ ಬಾಬ್ತು ತಲಾ 2,000 ರೂ.ನಂತೆ ಒಟ್ಟು 12,080 ರೂ. ಪಾವತಿಸುವಂತೆ ತೀರ್ಪು ನೀಡಿದೆ.
ಬೆಂಗಳೂರಿನ ನಿವಾಸಿ ಪುರುಷೋತ್ತಮ್ ಎಂಬುವರು 2019ರ ಜ.29ರಂದು ಕುಟುಂಬದ ಸಮಾರಂಭಕ್ಕೆ ಬರುವ ಅತಿಥಿಗಳಿಗೆ ಉಡುಗೊರೆ ನೀಡಲು 7,080 ರೂ. ಮೊತ್ತದ ಒಟ್ಟು 300 ಎಲ್‌ಇಡಿ ಲೈಟ್‌ಗಳನ್ನು ಖರೀದಿಸಿದ್ದರು. ಜ.30ರಂದು (ಮರುದಿನ) ಪರಿಶೀಲನೆ ನಡೆಸಿದಾಗ ಶೇ.50ರಷ್ಟು ಲೈಟ್‌ಗಳು ಹಾಳಾಗಿದ್ದವು. ಈ ಬಗ್ಗೆ ಸಂಸ್ಥೆಯನ್ನು ಸಂಪರ್ಕಿಸಿದ್ದು, ಈ ವೇಳೆ ಹಾಳಾದ ಎಲ್‌ಇಡಿ ಲೈಟ್‌ಗಳ ವಿನಿಮಯದ ಬದಲಾಗಿ ಎರಡು ಶೀಟ್ ಬ್ಯಾಟರಿ ಶೆಲ್‌ಗಳನ್ನು ನೀಡಿದ್ದು, ಇದಕ್ಕೆ ಪ್ರತ್ಯೇಕವಾದ ಹಣವನ್ನು ಪಡೆದುಕೊಂಡಿದ್ದರು. ಅನಂತರವೂ ಎಲ್‌ಇಡಿ ಲೈಟ್ ಗಳು ಕಾರ್ಯಾಚರಿಸಿಲ್ಲ. ಈ ಬಗ್ಗೆ ಮತ್ತೆ ಕಂಪನಿಯನ್ನು ಸಂಪರ್ಕಿಸಿದ್ದರೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸಂಸ್ಥೆಯವರ ವರ್ತನೆ ಯಿಂದ ಬೇಸರಗೊಂಡ ದೂರುದಾರರು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ 2ನೇ ನ್ಯಾಯಾಲಯದಲ್ಲಿ ದೂರ ದಾಖಲಿಸಿದ್ದರು.
ಇದನ್ನೂ ಓದಿ: ಕಂಪನಿ ವಸ್ತು ಖರೀದಿಸಿದ್ರೆ ಉಚಿತ ಪ್ರವಾಸದ ಆಫರ್: ಕೋರ್ಟ್ ಮೆಟ್ಟಿಲೇರಿದ ಮಹಿಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.