ಸರ್ಕಾರ ನೆರೆ ಪೀಡಿತ ಕೆಲಸದಲ್ಲಿ ಮೊದಲು ಎಚ್ಚೆತ್ತುಕೊಳ್ಳಲಿ : ಎಂ ಬಿ ಪಾಟೀಲ್
Team Udayavani, Nov 6, 2019, 1:01 PM IST
ಬೆಂಗಳೂರು: ಸರ್ಕಾರಕ್ಕೆ 100 ದಿನ ಆಗಲಿ ಸಾವಿರ ದಿನ ಆಗಲಿ ನೆರೆ ಪೀಡಿತ ಕೆಲಸದಲ್ಲಿ ಮೊದಲು ಎಚ್ಚೆತ್ತುಕೊಳ್ಳಲಿ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ನೆರೆ ಪೀಡಿತ ಪ್ರದೇಶಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ನೀಡಲಿ ನಾನು ಮೃದು ಧೋರಣೆ ತೋರಿಸುತ್ತಿಲ್ಲ , ಜನರ ಕಣ್ಣಿರು ಒರೆಸುವ ಕೆಲಸ ಮಾಡಬೇಕು ಅಷ್ಟೇ ನೂರು ದಿನದಲ್ಲಿ ಇದರ ಬಗ್ಗೆ ಗಮನ ಕೊಟ್ಟಿಲ್ಲ ಇನ್ನೂ ಮುಂದಾದ್ರು ಗಮನ ಕೊಡಲಿ, ನಾನು ಇದರಲ್ಲಿ ರಾಜಕೀಯ ಮಾಡುವುದಕ್ಕೆ ಹೋಗಲ್ಲ ಎಂದರು.
ಔರಾದ್ಕರ್ ವರದಿ ಜಾರಿ ವಿಳಂಬ ವಿಚಾರದಲ್ಲಿ ಮಾತಾನಾಡಿದ ಅವರು ಕಷ್ಟಪಟ್ಟು ಕೆಲಸ ಮಾಡುವವರಿಗೆ ಅನುಕೂಲ ಆಗಬೇಕು ಈ ದೃಷ್ಟಿಯಿಂದ ನಾವು ಅದನ್ನ ಜಾರಿಗೆ ತಂದಿದ್ದೆವು ಈಗಿರುವವರಿಗೂ ಮುಂದಿನವರಿಗೂ ಅನ್ವಯವಾಗಬೇಕು ಈಗ ಎಫ್ ಡಿ ಕಂಡೀಷನ್ ಹಾಕಿದ್ದಾರೆ ಆ ಕಂಡೀಷನ್ ತೆಗೆದುಹಾಕುವಂತೆ ನನ್ನ ಮನವಿಯಿದೆ ಪೊಲೀಸರು ಕೂಡ ಅದರ ಬಗ್ಗೆ ಕಾಯುತ್ತಿದ್ದಾರೆ ಇದರ ಬಗ್ಗೆ ನಾನು ಸಿಎಂ,ಗೃಹ ಸಚಿವರ ಜೊತೆ ಚರ್ಚಿಸುತ್ತೇನೆ ಕಷ್ಟದಲ್ಲಿ ದುಡಿಯುತ್ತಿರುವವರಿಗೆ ಸಹಾಯವಾಗಬೇಕು ಔರಾದ್ಕರ್ ವರದಿ ಜಾರಿಗೆ ಬರಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.