ಪಾಟೀದಾರ್ ಸಮುದಾಯ ಓಬಿಸಿಗೆ ಸೇರಿಸಲು ಪಿಎಂಗೆ ಪತ್ರ
Team Udayavani, Sep 4, 2018, 6:55 AM IST
ಬೆಂಗಳೂರು: ಗುಜರಾತ್‌ನ ಪಾಟೀದಾರ್ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕುರಿತು ಓಬಿಸಿ ಆಯೋಗ ರಚಿಸಿ, ಅದರ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡರು,ಈ ಹಿಂದೆ ತಾವು ಪ್ರಧಾನಿಯಾಗಿದ್ದಾಗ ಜಾಟ್ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲು ಓಬಿಸಿ ಆಯೋಗ ರಚಿಸಿ, ಅದರ ವರದಿ ಆಧಾರದ ಮೇಲೆ ಕೈಗೊಂಡ ಕ್ರಮದಂತೆ ಪಾಟೀದಾರ್ ಸಮುದಾಯವನ್ನೂ ಓಬಿಸಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
1996ರಲ್ಲಿ ನಾನು ಪ್ರಧಾನಿಯಾಗಿದ್ದಾಗ ರಾಜಸ್ಥಾನದ ಜಾಟ್ ಸಮುದಾಯವನ್ನು ಓಬಿಸಿಗೆ ಸೇರಿಸುವಂತೆ ಬಂದ ಮನವಿ ಆಧರಿಸಿ ಓಬಿಸಿ ಆಯೋಗ ರಚಿಸಿದ್ದೆ. ಈ ಆಯೋಗ ನೀಡಿದ ವರದಿ ಆಧರಿಸಿ ಜಾಟ್ ಸಮುದಾಯವನ್ನು ಓಬಿಸಿಗೆ ಸೇರಿಸಲಾಗಿತ್ತು. ಈ ಆದೇಶವನ್ನು ಕೋರ್ಟ್ ತಡೆ ಹಿಡಿದಿತ್ತಾದರೂ ನಂತರದಲ್ಲಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಿ ಆ ಸಮುದಾಯವನ್ನು ಓಬಿಸಿಗೆ ಸೇರಿಸುವಲ್ಲಿ ಯಶಸ್ವಿಯಾದೆವು ಎಂಬುದನ್ನು ದೇವೇಗೌಡರು ಪತ್ರದಲ್ಲಿ
ಸ್ಮರಿಸಿಕೊಂಡಿದ್ದಾರೆ.
ಇದೀಗ, ಪಾಟೀದಾರ್ ಸಮುದಾಯವನ್ನು ಓಬಿಸಿಗೆ ಸೇರಿಸುವಂತೆ ಯುವ ಮುಖಂಡ ಹಾರ್ದಿಕ್ ಪಟೇಲ್
ನೇತೃತ್ವದಲ್ಲಿ 3 ವರ್ಷದಿಂದ ಹೋರಾಟ ನಡೆಯುತ್ತಿದೆ. ಹಾರ್ದಿಕ್ ಪಟೇಲ್ ತನ್ನ 25ನೇ ವಯಸ್ಸಿನಲ್ಲೇ ಒಂದು ಸಮಾಜದ ಹಿತಕ್ಕಾಗಿ ಹಗಲು,ರಾತ್ರಿ ಹೋರಾಟ ನಡೆಸುತ್ತಿದ್ದು, ಈ ಸಮಾಜಮುಖೀ ಕಾರ್ಯ ಮನಗಂಡು ಕೇಂದ್ರ ಸರ್ಕಾರ ಆ ಬಗ್ಗೆ ಗಮನ ಹರಿಸಬೇಕು. ಓಬಿಸಿ ಆಯೋಗ ರಚಿಸಿ ಆ ಮೂಲಕ ವರದಿ ಪಡೆದು ಪಾಟೀದಾರ್ ಸಮುದಾಯವನ್ನು ಓಬಿಸಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.