ಸಂಘಟನೆ ನಿಷೇಧ ಕೋರಿ ಶಾಗೆ ಪತ್ರ


Team Udayavani, Jan 29, 2020, 3:08 AM IST

angatane

ಬೆಂಗಳೂರು: ದೇಶದಲ್ಲಿ ಶಾಂತಿ, ಸಾಮರಸ್ಯ, ಐಕ್ಯತೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ವತಿಯಿಂದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರು ಹಿಂದೂ ಸಂಘಟನೆಗಳ 23 ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾಗಿ ದ್ದು, ಹಲವರ ಬಂಧನ ವಾಗಿತ್ತು. ಆದರೆ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈ ಪ್ರಕರಣಗಳನ್ನು ಹಿಂಪಡೆದಿತ್ತು. ಈ ಕೆಟ್ಟ ನಿರ್ಧಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ರವಿಕುಮಾರ್‌ ಪತ್ರದಲ್ಲಿ ತಿಳಿಸಿದ್ದಾರೆ.

ಪಿಎಫ್ಐ ಕಾರ್ಯಕರ್ತರು ಇತ್ತೀಚೆಗೆ ಮಾಜಿ ಸಚಿವರಾದ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಡಾ.ಜಿ. ಪರಮೇಶ್ವರ್‌ ಅವರು, ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ತಡೆಯಲು ಪಕ್ಷವು ಎಸ್‌ಡಿಪಿಐನೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪ್ರಕಟಿಸಿದ್ದರು.

ಇದು ಕಾಂಗ್ರೆಸ್‌ ಪಕ್ಷಕ್ಕೆ ಎಸ್‌ಡಿಪಿಐ, ಪಿಎಫ್ಐನೊಂದಿಗೆ ಸಂಬಂಧವಿರುವುದನ್ನು ತೋರಿಸುತ್ತದೆ ಎಂದು ಉಲ್ಲೇಖೀಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಪಿಎಫ್ಐ ಸಂಘಟನೆಯಿಂದ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಭಯೋತ್ಪಾದನೆಯ ಮಾತೃ ಸಂಘಟನೆ ಎನಿಸಿದ್ದ “ಸಿಮಿ’ ಸಂಘಟನೆ ನಿಷೇಧದ ನಂತರ ಹುಟ್ಟಿಕೊಂಡ ಈ ಎರಡು ಸಂಘಟನೆಗಳು ಅದೇ ಚಟುವಟಿಕೆಯನ್ನು ಮುಂದುವರಿಸಿರುವುದು ಸ್ಪಷ್ಟವಾಗಿದೆ.

ದೇಶದಲ್ಲಿ ಶಾಂತಿ, ಸಾಮಾಜಿಕ ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಎರಡೂ ಸಂಘಟನೆಗಳನ್ನು ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರವಿಕುಮಾರ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.ಸಿಎಎ ಪರ ಅಭಿಯಾನದ ಸಹ ಸಂಚಾಲಕರಾದ ಭಾರತಿ ಮುಗದಮ್‌, ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ್‌ ಉಪಸ್ಥಿತರಿದ್ದರು.

ಪ್ರಧಾನಿ ಜನಪ್ರಿಯತೆ ಸಹಿಸದೆ ವಿರೋಧ:‌ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್‌.ರವಿಕುಮಾರ್‌, ದೇಶದಲ್ಲಿ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯನ್ನು ಸಹಿಸದೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮೂಲಕ ಎಸ್‌ಡಿಪಿಐ, ಪಿಎಫ್ಐ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ.

ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಪ್ರಧಾನಿಯವರ ವರ್ಚಸ್ಸು ಕುಗ್ಗಿಸಲು ಈ ಸಂಘಟನೆಗಳು ವಿರೋಧ ವ್ಯಕ್ತಪಡಿ ಸುತ್ತಿವೆ ಎಂದು ವಾಗ್ಧಾಳಿ ನಡೆಸಿದರು. ಸಿಎಎ ವಿರೋಧಿ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ 73 ಮಂದಿಗೆ ವಿದೇಶಗಳಿಂದ 123 ಕೋಟಿ ರೂ. ಸಂದಾಯವಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಹಲವರಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆಯಲಾಗಿದೆ ಎಂದು ರವಿಕುಮಾರ್‌ ಹೇಳಿದರು.

ಮಿಣಿ-ಮಿಣಿ ಕುಮಾರಸ್ವಾಮಿ: ಮಂಗಳೂರು ವಿಮಾನನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮುಖಕ್ಕೆ ಹಚ್ಚಿ ಕೊಳ್ಳುವ ಮಿಣಿ, ಮಿಣಿ ಪೌಡರ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಸಿ.ಡಿ ಕುಮಾರಸ್ವಾಮಿಯವರು ಈಗ ಮಿಣಿ, ಮಿಣಿ ಕುಮಾರಸ್ವಾಮಿಯಾಗಿ ದ್ದಾರೆ ಎಂದು ಕಿಡಿ ಕಾರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಿಎಎ ಕಾಯ್ದೆಯು ದಲಿತರು ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವಿರೋಧಿ ಎಂದಿದ್ದಾರೆ. ಆದರೆ ಪೌರತ್ವ ಪಡೆಯುತ್ತಿರುವ ನಿರಾಶ್ರಿತರಲ್ಲಿ ಶೇ. 70ರಷ್ಟು ಜನ ದಲಿತರೇ ಆಗಿದ್ದಾರೆ. ಕಾಯ್ದೆ ವಿರೋಧಿಸುವ ಮೂಲಕ ಸಿದ್ದರಾಮಯ್ಯ ಅವರು ದಲಿತರು, ಅಂಬೇಡ್ಕರ್‌ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿದರು.

1.15 ಕೋಟಿ ಜನರಿಗೆ ಮಾಹಿತಿ: ಪಕ್ಷದ ಕರೆಯ ಮೇರೆಗೆ ಸಿಎಎ ಬೆಂಬಲಿಸಿ ಮನೆ- ಮನೆ ಸಂಪರ್ಕ, ಮಿಸ್ಡ್ ಕಾಲ್‌, ಸಹಿ ಸಂಗ್ರಹ, ಜಿಲ್ಲಾ- ಮಂಡಲ ಮಟ್ಟಗಳಲ್ಲಿ ಸಾರ್ವಜನಿಕ ಸಭೆ, ಚಾಯ್‌ ಪೇ ಚರ್ಚಾ, ಪಂಜಿನ ಮೆರವಣಿಗೆ, ಜಿಲ್ಲಾ ಮಟ್ಟದ ಪ್ರಬುದ್ಧರ ಗೋಷ್ಠಿ, ಕಾರ್ಯಾಗಾರ ಸೇರಿದಂತೆ 12 ರೀತಿಯ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ 1,15,13,075 ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿ ಮಾಹಿತಿ ಪಡೆದಂತಾಗಿದೆ. ಪ್ರಧಾನಿ, ಕೇಂದ್ರ ಗೃಹ ಸಚಿವರು ಸೇರಿದಂತೆ 50ಕ್ಕೂ ಹೆಚ್ಚು ನಾಯಕರು ಸಾರ್ವಜನಿಕ ಸಭೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿಎಎ ಪರ ಜಾಗೃತಿ ಅಭಿಯಾನದ ಸಂಚಾಲಕ ಎನ್‌. ರವಿಕುಮಾರ್‌ ಹೇಳಿದರು.

ಜಾಗೃತಿ ಅಭಿಯಾನದ ವಿವರ
* ಮನೆ- ಮನೆ ಸಂಪರ್ಕ- 32,21,653 (96,64,959 ಜನರನ್ನು ತಲುಪಲಾಗಿದೆ)
* ಮಿಸ್ಡ್ ಕಾಲ್‌- 16,54,805
* ಸಹಿ ಸಂಗ್ರಹ- 10,20,672
* ಅಭಿನಂದನಾ ಪತ್ರ- 2,19,000
* ಭಾರತ ಮಾತಾ ಪೂಜಾ- 12,174
* ಬೃಹತ್‌ ರ್ಯಾಲಿ- 4 (ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಚಿಂತಾಮಣಿ)
* ಜಿಲ್ಲಾ ಮಟ್ಟದ ರ್ಯಾಲಿ- 19
* ಮಂಡಲ ಮಟ್ಟದ ರ್ಯಾಲಿ- 17
* ವಿಭಾಗ ಮಟ್ಟದ ರ್ಯಾಲಿ- 12
* ಮಂಡಲ ಮಟ್ಟದ ಕಾರ್ಯಾಗಾರ- 221
* ಜಿಲ್ಲಾ ಮಟ್ಟದ ಪ್ರಬುದ್ಧರ ಗೋಷ್ಠಿ- 15
* ಮಂಡಲ ಮಟ್ಟದ ಪ್ರಬುದ್ಧರ ಗೋಷ್ಠಿ- 51
* ಎಲ್ಲ ಮೋರ್ಚಾಗಳ ಕಾರ್ಯಾಗಾರ- 1
* ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರ ಕಾರ್ಯಾಗಾರ- 1
* ಪಂಜಿನ ಮೆರವಣಿಗೆ- 8 ಜಿಲ್ಲೆ
* ಕಾಲ್ನಡಿಗೆ ಜಾಥಾ- 1 ಜಿಲ್ಲೆ (ಬೆಂಗಳೂರು- 1000 ಮಂದಿ)
* ಜ.26ರಂದು ರಾಷ್ಟ್ರ ಧ್ವಜಾರೋಹಣ- 47,312 ಬೂತ್‌ (ಭಾಗವಹಿಸಿದ್ದವರು- 11,82,800)
* ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಕೃತಿ 36,703 ಬೂತ್‌ಗಳಿಗೆ ಮಾರಾಟ
* ಅತಿಗಣ್ಯರು, ಗಣ್ಯರಿಂದ ಪ್ರಧಾನಿಗೆ ಅಭಿನಂದನಾ ಪತ್ರ- 160

ಟಾಪ್ ನ್ಯೂಸ್

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.