ಆನ್‌ಲೈನ್ ಲಾಟರಿಯಲ್ಲಿ ದೋಷ: ತನಿಖೆಗೆ ಆಗ್ರಹ
Team Udayavani, Jun 11, 2018, 6:25 AM IST
ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಶೇ.25ರಷ್ಟು ಉಚಿತ ಸೀಟುಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ ಕೆಲವೊಂದು ದೋಷವಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆರ್‌ಟಿಇ ಕಾರ್ಯಪಡೆ ಆಗ್ರಹಿಸಿದೆ.
ಆರ್‌ಟಿಇ ಕಾಯ್ದೆ ಉಲ್ಲಂಘಿಸಿದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ನಗರದ ಪ್ರತಿಷ್ಠಿತ ಖಾಸಗಿ ಶಾಲೆಗೆ ಆರ್‌ಟಿಇ ಅಡಿ 40 ಮಕ್ಕಳು ಆಯ್ಕೆಯಾಗಿದ್ದಾರೆ. ಆದರೆ, 20 ಮಕ್ಕಳಿಗೆ ಆಯ್ಕೆಗೆ ಮುನ್ನವೇ ಸೀಟು ನೀಡಿದ್ದು, ಯಾವ ಮಾನದಂಡ ಅನುಸರಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಇದನ್ನು ಪ್ರಶ್ನಿಸಿಲ್ಲ. ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ ಈ ರೀತಿಯ ಅನೇಕ ದೋಷಗಳಿವೆ.
ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಆನ್‌ಲೈನ್ ಲಾಟರಿ ಪ್ರಕ್ರಿಯೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಆರ್‌ಟಿಇ ಕಾರ್ಯಪಡೆ ರಾಜ್ಯ ಸಂಚಾಲಕ ನಾಗಸಿಂಗ್ ಜಿ.ರಾವ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಆರ್‌ಟಿಇ ಸೀಟಿಗೆ ಅರ್ಜಿ ಸಲ್ಲಿಸಿದ ಮಕ್ಕಳಲ್ಲಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಮಕ್ಕಳು ಯಾವುದೇ ಅರ್ಜಿ ಸಲ್ಲಿಸದೆ ಮತ್ತೆ ಎರಡನೇ ಸುತ್ತಿನ ಲಾಟರಿಯಲ್ಲೂ ಹೇಗೆ ಆಯ್ಕೆಯಾದರು?
ಲಾಟರಿ ಪ್ರಕ್ರಿಯೆಯಲ್ಲಿ ಮೊದಲೇ ಫಲಿತಾಂಶ ಹೇಳಲು ಅಸಾಧ್ಯ ಎಂದಾದ ಮೇಲೆ ಕೆಲವು ಖಾಸಗಿ ಶಾಲೆಗೆ ಫಲಿತಾಂಶಕ್ಕೂ ಮೊದಲೇ ಮಕ್ಕಳು ಆಯ್ಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಒಮ್ಮೆ ಆಯ್ಕೆಯಾದ ಮಕ್ಕಳ ಹೆಸರು, ವಯಸ್ಸನ್ನು ತಂತ್ರಾಂಶ ಏಕೆ ತಿರಸ್ಕರಿಸಲಿಲ್ಲ? ಯಾರಿಗೆ ಅವಕಾಶ ದೊರೆಯುತ್ತದೆಂದು ಮೊದಲೇ ತಿಳಿಯುವುದಾದರೆ ಲಾಟರಿ ಪ್ರಕ್ರಿಯೆ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿರುವ ಅವರು, ಆರ್‌ಟಿಇ ಸೀಟುಗಳು ಬಿಇಒ ಕಚೇರಿಗಳಿಗೆ ಹಣ ಮಾಡಿಕೊಳ್ಳುವ ಸಾಧನ ಆಗುತ್ತಿದೆ.
ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಆರ್‌ಟಿಇ ಉಲ್ಲಂಘನೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಅನೇಕ ದೂರುಗಳು ಬರುತ್ತಿರುತ್ತದೆ. ಆರ್‌ಟಿಇ
ಕಾರ್ಯಪಡೆಯಿಂದ ಬಂದಿರುವ ಪತ್ರವನ್ನು ಸಮಗ್ರವಾಗಿ ಪರಿಶೀಲಿಸಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದೇವೆ.
– ಡಾ.ಕೃಪಾ ಆಳ್ವ,
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.