ಒತ್ತುವರಿ ಪ್ರಕರಣಕ್ಕೆ ಜೀವ
Team Udayavani, Aug 8, 2018, 12:21 PM IST
ಬೆಂಗಳೂರು: ಪ್ರಭಾವಿ ಉದ್ಯಮಿ ಕುಟುಂಬದಿಂದ ಒತ್ತುವರಿಯಾಗಿದೆ ಎನ್ನಲಾದ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಮನವರ್ತೆ ಕಾವಲ್‌ನಲ್ಲಿರುವ ( ಚೋಡನಹಳ್ಳಿ) ಸಾವಿರಾರು ಕೋಟಿ ರೂ.ಮೌಲ್ಯದ 180 ಎಕರೆ ಜಮೀನು ಪ್ರಕರಣಕ್ಕೆ ಮರುಜೀವ ಬಂದಿದೆ.
ಅಂದಾಜು 2000 ಸಾವಿರ ಕೋಟಿ ರೂ.ಮೌಲ್ಯದ ಜಮೀನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಕೈಗೊಂಡಿರುವ ಕ್ರಮಗಳು ಹಾಗೂ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಎರಡು ಬಾರಿ ಆದೇಶ ಮಾಡಿದ್ದರೂ ವರದಿ ಸಲ್ಲಿಕೆಯಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು, ಜಿಲ್ಲಾಡಳಿತಕ್ಕೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಜಮೀನು ರಕ್ಷಣೆ ಕುರಿತು ವಸ್ತುಸ್ಥಿತಿ ವರದಿ ನೀಡುವಂತೆ ಸೂಚಿಸಿದ 2 ಆದೇಶವನ್ನು ಉಲ್ಲಂ ಸಿರುವ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಯಾಕೆ ಶಿಫಾರಸು ಮಾಡಬಾರದು? ಎಂದು ಪ್ರಶ್ನಿಸಿರುವ ಲೋಕಾಯುಕ್ತರು, ಮುಂದಿನ ಮೂರು ವಾರಗಳಲ್ಲಿ 180 ಎಕರೆ ಜಮೀನು
ಒತ್ತುವರಿ ತೆರವು ಸಂಬಂಧದ ವಸ್ತುಸ್ಥಿತಿ ವರದಿ, ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪು, ಅಧೀನ ನ್ಯಾಯಾಲಯಗಳ ಆದೇಶಗಳನ್ನು ಸಲ್ಲಿಸುವಂತೆ ಆದೇಶಿಸಿ ಜುಲೈ 31ರಂದು ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಗೆ ನೀಡಿರುವ ಶೋಕಾಸ್ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.
ಈ ಕುರಿತು ತಡೆಯಾಜ್ಞೆ ಇದ್ದರೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ತಡೆಯಾಜ್ಞೆ ತೆರವುಗೊಳಿಸಲು ಕ್ರಮ ವಹಿಸಬೇಕು. ಆದಷ್ಟು ಬೇಗ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಮುಂದಾಗಬೇಕು ಮಂಗಳವಾರ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಜಮೀನು ಎಂಬ ಅಂಶ ಎತ್ತಿಹಿಡಿದಿದ್ದ ಹೈಕೋರ್ಟ್!: ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಮನವರ್ತೆ ಕಾವಲ್ ( ಚೋಡನಹಳ್ಳಿ) ಸರ್ವೇ ನಂಬರ್ 137ರಲ್ಲಿನ 180 ಎಕರೆ ಭೂಮಿಯನ್ನು ರಾಜಕಾರಣಿಗಳ ಪ್ರಭಾವ ಹೊಂದಿರುವ ಉದ್ಯಮಿ ಕುಟುಂಬ 1953-54ರಲ್ಲಿ ಕಂದಾಯ ಇಲಾಖೆ ದಾಖಲೆಗಳನ್ನು ತಿದ್ದುಪಡಿ ಮಾಡಿ ಮೂಲ ಮಾಲೀಕರಿಂದ ಖರೀದಿ ಮಾಡಿದ ಬಗ್ಗೆ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಆರೋಪವಿತ್ತು.
ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿಗಳನ್ನು ಹೈಕೋರ್ಟ್ ಈ ಸಂಬಂಧ 2001ರಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಿತ್ತು. ಹೈಕೋರ್ಟ್ ಸೂಚನೆ ಮೇರೆಗೆ ಭೂ ವ್ಯಾಜ್ಯದ ವಿಚಾರಣೆ ನಡೆಸಿದ್ದ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ, ಉದ್ಯಮಿ ಕುಟುಂಬ 180 ಎಕರೆ ಜಮೀನು ಖರೀದಿಸಿದ್ದಕ್ಕೆ ಕಾನೂನು ಮಾನ್ಯತೆಯಿಲ್ಲ, ಜಮೀನು ಸರ್ಕಾರದ ಸ್ವತ್ತು ಎಂದು ಆದೇಶ ಹೊರಡಿಸಿದ್ದರು. ಇದನ್ನು ಮಾತ್ರ ಮಾಡಿದ ಹೈಕೋರ್ಟ್ ಜಿಲ್ಲಾಧಿಕಾರಿಗಳ ಆದೇಶವನ್ನೇ 2008 ಪುರಸ್ಕರಿಸಿ ತೀರ್ಪು ನೀಡಿತ್ತು.
ಸರ್ಕಾರದ ಲೋಪ ಎತ್ತಿಹಿಡಿದಿದ್ದ ಲೋಕಾ: 180 ಎಕರೆ ಭೂಮಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಭೂ ಕಬಳಿಕೆ ತಡೆ ಸಮಿತಿ ನೀಡಿದ್ದ ದೂರಿನ ಸಂಬಂಧ 2015 ಮೇ 2ರಂದು ಭೂ ಕಬಳಿಕೆ ತಡೆ ಸಮಿತಿ ಅಧ್ಯಕ್ಷ ಎ.ಟಿ ರಾಮಸ್ವಾಮಿ ನೀಡಿದ್ದ ದೂರಿನ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಆಗಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ,
180 ಎಕರೆ ಸರ್ಕಾರಕ್ಕೆ ಸೇರಿದೆ ಎಂಬ ಬಗ್ಗೆ ವಿಶೇಷ ಜಿಲ್ಲಾಧಿಕಾರಿ ಆದೇಶ, ಈ ಆದೇಶ ಮಾನ್ಯ ಮಾಡಿರುವ ಹೈಕೋರ್ಟ್ ತೀರ್ಪುಗಳಿದ್ದರೂ, ಭೂಮಿ ವಶಕ್ಕೆ ಪಡೆಯುವ ಸಂಬಂಧ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಈ ಬಗ್ಗೆ ಕಂದಾಯ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ಮೇ 8, 2015ರಂದು ನೋಟಿಸ್ ಜಾರಿಗೊಳಿಸಿದ್ದರು.
ಬಿ.ಎಂ ಕಾವಲ್‌ನ ಜಮೀನು ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಅಹವಾಲನ್ನು ಆಲಿಸಿ ವಿಚಾರಣೆ ಪೂರ್ಣಗೊಳಿಸಲಾಗಿದೆ. ಸದ್ಯದಲ್ಲಿಯೇ ಆದೇಶವನ್ನೂ ಹೊರಡಿಸಲಾಗುತ್ತದೆ. ಈ ಕುರಿತು ವಸ್ತುಸ್ಥಿತಿ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸಲಿದ್ದೇನೆ
-ಎಸ್.ರಂಗಪ್ಪ, ವಿಶೇಷ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.