ಜೀವನ ಒಂದು ಸುಂದರ ಕಾವ್ಯ
Team Udayavani, Jan 27, 2017, 11:29 AM IST
ಬೆಂಗಳೂರು: ದಾಂಪತ್ಯ ಒಂದು ಸುಂದರ ಕಾವ್ಯವಿದ್ದಂತೆ. ಅದಕ್ಕೆ ನಂಬಿಕೆ, ಪ್ರೀತಿ, ನೈತಿಕತೆ ಎಂಬ ಸಾಲುಗಳನ್ನು ಸೇರಿಸುತ್ತಾ ಹೋದರೆ ಜೀವನ ಸಾರ್ಥಕ ಆಗುತ್ತದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟಿದ್ದಾರೆ.
“ಸ್ನೇಹ ಬುಕ್ ಹೌಸ್’ ವತಿಯಿಂದ ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಕಣಕಾರ ಸಂತೋಷ್‌ಕುಮಾರ್ ಮೆಹೆಂದಳೆ ಅವರ “ಅವನು ಶಾಪಗ್ರಸ್ತ ಗಂಧರ್ವ’ ಹಾಗೂ ಅಮೃತಾ ಮೆಹೆಂದಳೆ ಅವರ “ಹನಿಯೆಂಬ ಹೊಸ ಭಾಷ್ಯ’ ಪುಸ್ತಕ ಲೋಕಾರ್ಪಣೆ ಮಾಡಿದರು.
“ದಾಂಪತ್ಯದಲ್ಲಿ ಗಂಡು – ಹಣ್ಣು ಇಬ್ಬರೂ ಸಮಾನರು. ವೈಯಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕು ಒಂದೇ ಆಗಿರಬೇಕು. ದಾಂಪತ್ಯ ಜೀವನದ ಅತಿ ಮುಖ್ಯ ಘಟ್ಟ. ಅದೊಂದು ಸುಂದರ ಕಾವ್ಯ. ಆ ಕಾವ್ಯದಲ್ಲಿ ನಂಬಿಕೆ, ಪ್ರೀತಿ, ನೈತಿಕತೆಯ ಸಾಲುಗಳಿದ್ದರೆ ಜೀವನ ಸಾರ್ಥಕವಾಗುತ್ತದೆ,” ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್, ಅಂಕಣಕಾರ್ತಿ ಪ್ರೇಮಶೇಖರ್, ಚಿಂತಕ ಉದಯ್ ಪುರಾಣಿಕ್, ಅಮೃತಾ ಮೆಹಂದಳೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.