ಲಿಫ್ಟ್ ಕುಸಿದು ಮಗು ದುರ್ಮರಣ
Team Udayavani, Jul 10, 2019, 3:00 AM IST
ಬೆಂಗಳೂರು: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಲಿಫ್ಟ್ ಗುಂಡಿಯೊಳಗಡೆ ಪ್ರವೇಶಿಸಿದ ನಾಲ್ಕು ವರ್ಷದ ಮಗುವಿನ ಮೇಲೆ ಲಿಫ್ಟ್ ಕುಸಿದು ಬಿದ್ದು ಮಗು ಮೃತಪಟ್ಟಿರುವ ಘಟನೆ ಕಗ್ಗದಾಸಪುರದಲ್ಲಿ ನಡೆದಿದೆ. ಸಂಜಯ್ ಕತ್ರಿ ಮೃತ ಮಗು.
ನೇಪಾಳ ಮೂಲದ ದಲ್ಬೇದರ್ ಕಗ್ಗದಾಸಪುರದ 9ನೇ ಕ್ರಾಸ್ನಲ್ಲಿರುವ ಸಂತೋಷಿ ಅಪಾರ್ಟ್ಮೆಂಟ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಕಮಲಾದೇವಿ ಕತ್ರಿ ಹಾಗೂ ಮಗು ಸಂಜಯ್ ಜತೆ ಅಲ್ಲಿಯೇ ಕೊಠಡಿಯೊಂದರಲ್ಲಿ ವಾಸಿಸುತ್ತಾರೆ.
ಸೋಮವಾರ ಸಂಜೆ 5.30ರ ಸುಮಾರಿಗೆ ನೆಲಮಹಡಿಯಲ್ಲಿ ಆಟವಾಡುತ್ತಿದ್ದ ಸಂಜಯ್ ಕತ್ರಿ ಲಿಫ್ಟ್ ಗುಂಡಿಗೆ ಬಿದ್ದು ಕಿರುಚಿಕೊಂಡಿದೆ. ಮಗುವಿನ ಚೀರಾಟ ಕೇಳಿ ತಾಯಿ ಕಮಾಲದೇವಿ ಓಡಿಬಂದ ಆತಂಕದಿಂದ ಆತುರದಲ್ಲಿ ಲಿಫ್ಟ್ಗುಂಡಿ ಒತ್ತಿದಾಗ ಮೇಲಿದ್ದ ಲಿಫ್ಟ್ ನೇರವಾಗಿ ಮಗುವಿನ ಮೇಲೆ ಬಿದ್ದಿದೆ.
ಪುನಃ ಲಿಫ್ಟ್ ಮೇಲಕ್ಕೆ ಬಂದಾಗ ಮಗುವನ್ನು ಎತ್ತಿಕೊಳ್ಳುವಷ್ಟರಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದರು. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.