ವಿಧಾನಸಭೆಯಲ್ಲಿ ಪಕ್ಷಕ್ಕಿಂತ ಸಮುದಾಯದ ಬಲ ಹೆಚ್ಚು
Team Udayavani, May 22, 2018, 6:35 AM IST
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ 222 ಶಾಸಕರ ಪೈಕಿ 105 ಶಾಸಕರು ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳಲ್ಲಿ ಅತಿದೊಡ್ಡ ಪಾಲು ಹೊಂದಿರುವುದು ಲಿಂಗಾಯತ ಸಮುದಾಯ. ಈ ಸಮುದಾಯದ 62 ಮಂದಿ ಶಾಸಕರಾಗಿದ್ದಾರೆ. ಎರಡನೇ ಅತಿದೊಡ್ಡ ಸಂಖ್ಯೆಯಲ್ಲಿ ಒಕ್ಕಲಿಗರಿದ್ದು, ಒಟ್ಟಾರೆ 45 ಶಾಸಕರು ಚುನಾಯಿತರಾಗಿದ್ದಾರೆ.
ಉಳಿದಂತೆ, ಪರಿಶಿಷ್ಟ ಜಾತಿಯ 28, ಪರಿಶಿಷ್ಟ ಪಂಗಡದ 17, ಕುರುಬ ಸಮುದಾಯದ 12, ರೆಡ್ಡಿ ಹಾಗೂ ಬ್ರಾಹ್ಮಣರು ತಲಾ 9, ಮುಸ್ಲಿಮರು 7, ಈಡಿಗ ಹಾಗೂ ಬಂಟರು ತಲಾ 5, ಮರಾಠರು 3, ರಜಪೂತ, ಕೊಡವ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಇಬ್ಬರು, ಮೊಗವೀರ, ಕ್ರಿಶ್ಚಿಯನ್, ನಾಮಧಾರಿ, ಗಾಣಿಗ ಶೆಟ್ಟಿ, ಕೊಂಕಣಿ ಮರಾಠ, ಜೈನ, ಯಾದವ, ಉಪ್ಪಾರ ಪಂಗಡದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ.
ಪಕ್ಷಾವಾರು ಲೆಕ್ಕ
ಲಿಂಗಾಯತ ಸಮುದಾಯದ ಗರಿಷ್ಠ 39 ಶಾಸಕರನ್ನು ಬಿಜೆಪಿ ಹೊಂದಿದೆ. ಆಡಳಿತರೂಢ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಕ್ರಮವಾಗಿ 18 ಮಂದಿ ಐವರು ಲಿಂಗಾಯತ ಶಾಸಕರಿದ್ದಾರೆ.
ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್‌ನಲ್ಲಿದ್ದು, 21 ಮಂದಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ನಿಂದ 15 ಮತ್ತು ಬಿಜೆಪಿಯಿಂದ 9 ಮಂದಿ ಒಕ್ಕಲಿಗರು ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿಯ ಶಾಸಕರು ಬಿಜೆಪಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿದ್ದು, 17 ಮಂದಿ ಚುನಾಯಿತರಾಗಿದ್ದಾರೆ. ಕಾಂಗ್ರೆಸ್‌ನಿಂದ 12 ಹಾಗೂ ಜೆಡಿಎಸ್‌ನಿಂದ 6 ಮಂದಿ ಗೆದ್ದಿದ್ದಾರೆ. ಜತೆಗೆ ಬಿಎಸ್‌ಪಿ ಹಾಗೂ ಪಕ್ಷೇತರರು ತಲಾ ಒಬ್ಬರಿದ್ದಾರೆ. ಪರಿಶಿಷ್ಟ ಪಂಗಡದ ಶಾಸಕರು ಕಾಂಗ್ರೆಸ್‌ನಿಂದ ಗರಿಷ್ಠ 10 ಮಂದಿ ಇದ್ದು, ಬಿಜೆಪಿಯಿಂದ 7 ಮಂದಿ ಗೆಲುವು ಸಾಧಿಸಿದ್ದಾರೆ.
ರೆಡ್ಡಿ ಸಮುದಾಯದ ಬಿಜೆಪಿಯಿಂದ ಗರಿಷ್ಠ ಐವರು, ಕಾಂಗ್ರೆಸ್‌ನಿಂದ ಮೂವರು ಹಾಗೂ ಜೆಡಿಎಸ್‌ನಿಂದ ಒಬ್ಬರು ಗೆದ್ದಿದ್ದಾರೆ. ಕುರುಬ ಸಮುದಾಯದಿಂದ ಕಾಂಗ್ರೆಸ್‌ನಲ್ಲಿ 8 ಮಂದಿ, ಜೆಡಿಎಸ್‌ನಲ್ಲಿ ಇಬ್ಬರು, ಬಿಜೆಪಿ ಹಾಗೂ ಕೆಪಿಜೆಪಿಯಿಂದ ತಲಾ ಒಬ್ಬರು ಜಯ ಪಡೆದಿದ್ದಾರೆ. ಮರಾಠ ಸಮುದಾಯದಿಂದ ಬಿಜೆಪಿ 1 ಹಾಗೂ ಕಾಂಗ್ರೆಸ್‌ನಿಂದ ಇಬ್ಬರು ಗೆದ್ದಿದ್ದಾರೆ. ಮುಸ್ಲಿಂ ಸಮುದಾಯದಿಂದ ಕಾಂಗ್ರೆಸ್‌ನಲ್ಲಿ 7 ಮಂದಿ ಗೆದ್ದಿ ದ್ದಾರೆ. ಬಿಜೆಪಿಯಲ್ಲಿ ಬ್ರಾಹ್ಮಣ ಸಮುದಾಯದ 8, ಬಂಟ ಸಮುದಾಯದ 5, ಈಡಿಗ ಸಮುದಾಯದ ಐವರು, ಇಬ್ಬರು ಕೊಡವರು ಆಯ್ಕೆಯಾಗಿದ್ದರೆ, ಮೊಗವೀರ, ಗೌಡ ಸಾರಸ್ವತ, ನಾಮಧಾರಿ, ಗಾಣಿಗ ಶೆಟ್ಟಿ, ಕೊಂಕಣಿ ಮರಾಠ, ಜೈನ, ಯಾದವ ಸಮುದಾಯದಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನಿಂದ ರಜಪೂತ ಸಮುದಾಯದಿಂದ ಇಬ್ಬರು, ಕ್ರಿಶ್ಚಿಯನ್ ಸಮುದಾಯ ಮತ್ತು ಉಪ್ಪಾರ, ಬ್ರಾಹ್ಮಣ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಿಂದ ತಲಾ ಒಬ್ಬರು ಗೆದ್ದು ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.