ರಾಜಾನುಕುಂಟೆಯಲ್ಲಿ ದ್ರವ ತ್ಯಾಜ್ಯ ನಿರ್ವಹಣಾ ಘಟಕ


Team Udayavani, Oct 12, 2019, 10:31 AM IST

bng-tdy-3

ಬೆಂಗಳೂರು: ಘನ ತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಪ್ರಗತಿ ಹೆಜ್ಜೆ ಇರಿಸಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಇದೀಗ ಪರಿಸರ ಸ್ವಚ್ಛತೆ ಸಂಕಲ್ಪದೊಂದಿಗೆ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಮುಂದಾಗಿದೆ.

ದ್ರವ ತ್ಯಾಜ್ಯ ನಿರ್ವಹಣಾ ಘಟಕವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಪುರಸಭೆಯಿಂದ ನಿರ್ಮಿಸಿದ್ದು, ಅದೇ ಮಾದರಿ ಅಳವಡಿಸಿಕೊಳ್ಳಲು ನಗರ ಜಿ.ಪಂ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿ.ಪಂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ನಿಯೋಗ ದೇವನಹಳ್ಳಿಗೆ ಭೇಟಿ ನೀಡಿ, ದ್ರವ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಅಂದಾಜು 70 ಲಕ್ಷದಿಂದ 1 ಕೋಟಿ ರೂ. ವೆಚ್ಚದಲ್ಲಿ ದೇವನಹಳ್ಳಿಯಲ್ಲಿ ರಾಜ್ಯದ ಮೊದಲ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿದ್ದು, ಅಂಥದ್ದೇ ಘಟಕವನ್ನು ನಗರ ಜಿ.ಪಂ ವ್ಯಾಪ್ತಿಯ ರಾಜಾನುಕುಂಟೆಯಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯಲ್ಲಿ 1 ಎಕರೆ ಜಾಗದಲ್ಲಿ ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಗೊಳ್ಳಲಿದೆ. ಸರ್ಕಾರ ಹಸಿರು ನಿಶಾನೆ ತೋರಿದ ತಕ್ಷಣ ಈ ಕಾರ್ಯ ಆರಂಭವಾಗಲಿದೆ ಎಂದು ರಾಜಾನುಕುಂಟೆ ಪಿಡಿಒ ರಾಜೇಶ್‌ ಮಾಹಿತಿ ನೀಡಿದ್ದಾರೆ. ರಾಜಾನುಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಕುಟುಂಬಗಳಿವೆ. ಈ ಕಾರ್ಯದಲ್ಲಿ ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪಂಚಾಯಿತಿಗಳಲ್ಲಿ ಈ ವ್ಯವಸ್ಥೆ ಅನುಷ್ಠನಗೊಳಿಸಬಹುದು ಎಂದು ತಿಳಿಸಿದ್ದಾರೆ.

ಪರಿಸರ ಸ್ವಚ್ಛತೆಗೆ ಆದ್ಯತೆ: ಕೆಲವು ಪ್ರದೇಶಗಳಲ್ಲಿ ಇಂಗುಗುಂಡಿಯ ಶೌಚಾಲಯ ನಿರ್ಮಿಸುತ್ತಾರೆ. ಇನ್ನೂ ಕೆಲವು ಕಡೆ ಈ ರೀತಿಯ ವ್ಯವಸ್ಥೆ ಇರುವುದಿಲ್ಲ. ಹೀಗಾಗಿಯೇ ಶೌಚಾಲಯ ತುಂಬಿದ ನಂತರ ಅದನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಾರೆ. ಅದು ಹಲವು ರೀತಿಯ ರೋಗಗಳ ಹರಡುವಿಕೆ ಮತ್ತು ಪರಿಸರ ನೈರ್ಮಲ್ಯಕ್ಕೆ ಕಾರಣವಾಗಲಿದೆ.

ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇರಿಸಲು ಸಲುವಾಗಿಯೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜೊತೆಗೂಡಿ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಈ ಯೋಜನೆ ರೂಪಿಸಿವೆ ಎಂದು ನಗರ ಜಿ.ಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದ್ರವ ತ್ಯಾಜ್ಯ ನಿರ್ವಹಣೆ ಘಟಕ (ಮಲವನ್ನು ಗೊಬ್ಬರವಾಗಿಸುವುದು) ಸ್ಥಾಪನೆಯಿಂದ ಹಲವು ರೀತಿಯ ಅನುಕೂಲಗಳಿವೆ. ಇದರಿಂದ ತಯಾರಾಗುವ ಗೊಬ್ಬರವನ್ನು ಕೃಷಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಜತೆಗೆ ಗೊಬ್ಬರದ ನೀರನ್ನು ತೋಟಗಾರಿಕೆಗೂ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳುತ್ತಾರೆ

 

ಬೆಂಗಳೂರು ನಗರ ಜಿಲ್ಲಾಡಳಿತ ಈಗಾಗಲೇ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಗತಿ ಸಾಧಿಸಿದೆ. ಅದೇ ರೀತಿಯಲ್ಲಿ ಈಗ ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಮತ್ತೂಂದು ಮೈಲುಗಲ್ಲು ಸಾಧಿಸಲಾಗುವುದು. ●ಕೆ.ಜಿ.ಜಗದೀಶ್‌, ಸಹಾಯಕ ಯೋಜನಾಧಿಕಾರಿ

 

-ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Ajit-Car-Accident

Car Crash: ಕಾರು ರೇಸ್‌ ತರಬೇತಿ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ!

Ramamandir-Glaas

Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!

Satish Jarkiholi

Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ

Jaiswal in the Champions Trophy; debut in the England series?

Jaiswal: ಚಾಂಪಿಯನ್ಸ್‌ ಟ್ರೋಫಿಗೆ ಯಶಸ್ವಿ ಜೈಸ್ವಾಲ್;‌ ಇಂಗ್ಲೆಂಡ್‌ ಸರಣಿಯಲ್ಲೇ ಪದಾರ್ಪಣೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru: ಮೀನುಗಾರಿಕಾ ಸಾಮಗ್ರಿಗಳ ನಾಶ: ಪೊಲೀಸರಿಗೆ ದೂರು

Mangaluru: ಮೀನುಗಾರಿಕಾ ಸಾಮಗ್ರಿಗಳ ನಾಶ: ಪೊಲೀಸರಿಗೆ ದೂರು

GDP growth expected to be 6.4% this year: 4-year low

GDP: ಈ ವರ್ಷ ಶೇ.6.4ರಷ್ಟು ಜಿಡಿಪಿ ಪ್ರಗತಿ ನಿರೀಕ್ಷೆ: 4 ವರ್ಷಗಳ ಕನಿಷ್ಠ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.