ಸಾಹಿತ್ಯ ಕ್ಷೇತ್ರ ಕಳಂಕಿತವಾಗುತ್ತಿದೆ: ದೊಡ್ಡರಂಗೇಗೌಡ
Team Udayavani, May 12, 2019, 3:06 AM IST
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರ ಕಳಂಕಿತವಾಗುತ್ತಿದ್ದು ರಾಜಕೀಯ ವ್ಯಕ್ತಿಗಳನ್ನು ಮೀರಿಸುವಷ್ಟು ರಾಜಕೀಯ ಸಾಹಿತ್ಯ ವಲಯದಲ್ಲಿ ನಡೆಯುತ್ತಿದೆ ಎಂದು ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಾ.ವಿ.ಗೋಪಾಲಕೃಷ್ಣ ಭಾಷಾಲೋಕ ಪ್ರತಿಷ್ಠಾನ, ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಷ್ಠಾನದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಇದ್ದಷ್ಟು ರಾಜಕಾರಣ ಬೇರೆ ಯಾವುದೇ ಕ್ಷೇತ್ರದಲ್ಲಿ ಈಗಿಲ್ಲ. ಕಲುಷಿತವಾಗದೆ ಉಳಿದಿರುವ ಕ್ಷೇತ್ರ ಅಂದರೆ ಅದು, ಸಂಶೋಧನಾ ಕ್ಷೇತ್ರವಾಗಿದೆ ಎಂದು ಹೇಳಿದರು.
ಸಾಹಿತ್ಯ ಕ್ಷೇತ್ರ ನಾವು -ನೀವು ಅಂದು ಕೊಂಡಂತಿಲ್ಲ. ಈಗಾಗಲೇ ನಾನು ಹಲವು ವಿಮರ್ಶ ಕೃತಿಗಳನ್ನು ರಚಿಸಿದ್ದೇನೆ. ಆದರೆ, ನನ್ನನ್ನು ವಿಮರ್ಶಕನಾಗಿ ನೋಡಲಿಲ್ಲ. ನನ್ನ ಕವನ ಸಂಕಲನಗಳಿಗಿಂತ ವಿಮರ್ಶ ಕೃತಿಗಳು ಹೆಚ್ಚಿವೆ. ಆದರೆ, ಜಾತಿ ಕಾರಣದಿಂದಲೋ ಏನೂ ಯಾರು ಕೂಡ ವಿಮರ್ಶ ಕೃತಿಗಳನ್ನು ತೆಗೆದು ಓದಿಲ್ಲ, ಅವುಗಳನ್ನು ಗುರುತಿಸಲಿಲ್ಲ ಇದು ಬೇಸರದ ಸಂಗತಿ ಎಂದರು.
ಈ ವೇಳೆ ಬಹುಭಾಷಾ ಲೇಖಕರಾದ ಬೊವ್ವೆರಿಯಂಡ ನಂಜಮ್ಮ ಮತ್ತು ಬಿ.ಎಂ.ಚಿಣ್ಣಪ್ಪ ದಂಪತಿಗೆ ಡಾ.ವಿ.ಗೋಪಾಲಕೃಷ್ಣ ಭಾಷಾಲೋಕ ಪ್ರತಿಷ್ಠಾನದ ಚೊಚ್ಚಲ ಪ್ರಶಸ್ತಿ ನೀಡಲಾಯಿತು. ಹಿರಿಯ ಸಂಶೋಧಕ ಡಾ.ಎಚ್.ಎಸ್.ಗೋಪಾಲರಾವ್, ಹಿರಿಯ ಸಂಶೋಧಕ ಡಾ.ಆರ್.ಶೇಷಶಾಸಿŒ, ಡಾ.ಕೆ.ಎಂ.ಲೋಕೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.