ಜನಾರ್ದನ ರೆಡ್ಡಿಗೆ ಸೆರೆ ಭೀತಿ
Team Udayavani, Nov 8, 2018, 6:00 AM IST
ಬೆಂಗಳೂರು: ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಾಜಿ ಸಚಿವ ಜನಾರ್ದನ ರೆಡ್ಡಿಗೆ “ಸಂಕಷ್ಟ’ ಪ್ರಾರಂಭವಾಗಿದೆ. ಆ್ಯಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಸೈಯದ್ ಅಹಮದ್ ಫರೀದ್‌ನನ್ನು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಚಾವ್ ಮಾಡಲು 18 ಕೋಟಿ ರೂ.ಮೌಲ್ಯದ 57 ಕೆ.ಜಿ ಚಿನ್ನದ ಗಟ್ಟಿ ಪಡೆದ ಆರೋಪದ ಉರುಳು ಸುತ್ತಿಕೊಂಡಿದೆ.
ಅಕ್ರಮ ಗಣಿಗಾರಿಕೆ ಹಗರಣದಲ್ಲಿ ನ್ಯಾಯಾಧೀಶರಿಗೆ 100 ಕೋಟಿ ರೂ. ಲಂಚ ನೀಡಲು ಮುಂದಾಗಿದ್ದ ಆರೋಪದಲ್ಲೂ ಸಿಲುಕಿದ್ದ ಜನಾರ್ದನ ರೆಡ್ಡಿ ಈಗ ಅಂತದ್ದೇ ಮತ್ತೂಂದು ಗಂಭೀರ ಆರೋಪ ಕೇಳಿಬಂದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಣ ದ್ವಿಗುಣಗೊಳಿಸುವ ನೆಪದಲ್ಲಿ ಜನರಿಂದ 600 ಕೋಟಿ ರೂ. ಪಡೆದು ವಂಚಿಸಿರುವ ಆರೋಪಿ ಫರೀದ್ ವಿರುದ್ಧ ಸಿಸಿಬಿ ತನಿಖೆ ನಡೆಸುತ್ತಿದ್ದ ವೇಳೆ ಈ ಮಹತ್ವದ ಸಂಗತಿ ಬಯಲಾಗಿದೆ. ಇದೀಗ ಜನಾರ್ಧನ ರೆಡ್ಡಿಗೆ ಬಂಧನ ಭೀತಿ ಎದುರಾಗಿದ್ದು, ಕೆಲ ದಿನಗಳಿಂದ ಅವರು ತಲೆ ಮರೆಸಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ರೆಡ್ಡಿ ತನ್ನ ಆಪ್ತನ ಜತೆ ಉಳಿದುಕೊಂಡಿರುವ ಮಾಹಿತಿ ಮೇರೆಗೆ ಸಿಸಿಬಿಯ ತನಿಖಾ ತಂಡ ಅಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.ಜಾರಿನಿರ್ದೇಶನಾಲಯದ ತನಿಖೆ ಸಂಬಂಧ ಆರೋಪಿ ಫರೀದ್‌ಗೆ ಸಹಾಯ ಮಾಡುವ ಸಲುವಾಗಿ ಜನಾರ್ದನರೆಡ್ಡಿ ಹಾಗೂ ಆಲಿಖಾನ್ ಆತನೊಂದಿಗೆ 20 ಕೋಟಿ ರೂ.ಗೆ ಮಾತುಕತೆ ನಡೆಸಿ 57 ಕೆ.ಜಿ ಚಿನ್ನ ಪಡೆದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ಜನಾರ್ದನ ರೆಡ್ಡಿ ವಿಚಾರಣೆ ನಡೆಸಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮತ್ತೂಂದೆಡೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಜನಾರ್ದನ ರೆಡ್ಡಿಯ ಬೆಂಗಳೂರಿನಲ್ಲಿರುವ “ಪಾರಿಜಾತ’ ಅಪಾರ್ಟ್‌ಮೆಂಟ್, ರೆಡ್ಡಿಯ ಆಪ್ತ ಮೆಹು¤ಜ್ ಅಲಿಖಾನ್‌ನ ಆರ್.ಟಿ ನಗರ ನಿವಾಸಲ್ಲಿಯೂ ಕೆಲ ಗಂಟೆಗಳ ಕಾಲ ಪ್ರತ್ಯೇಕ ಶೋಧ ನಡೆಸಿ ಹಲವು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಚಿನ್ನದ ಗಟ್ಟಿ ರಹಸ್ಯ ಬಯಲಾಗಿದ್ದು ಹೇಗೆ?
ಹಣ ದ್ವಿಗುಣಗೊಳಿಸುವ ಆಮಿಷ ಆ್ಯಂಬಿಡೆಂಟ್ ಕಂಪೆನಿಯ ಮೂಲಕ ಸೈಯದ್ ಫರೀದ್ 600 ಕೋಟಿ ವಂಚಿಸಿರುವ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದ್ದು, ಆರೋಪಿ ಫರೀದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆತ ಅಕ್ರಮ ಹಣ ವರ್ಗಾವಣೆ ಸಂಬಂಧ ಜನವರಿ ತಿಂಗಳಲ್ಲಿ ಇ.ಡಿ. ದಾಳಿ ನಡೆಸಿತ್ತು ಎಂಬ ಮಾಹಿತಿ ನೀಡಿದ್ದ. ಇದಾದ ಬಳಿಕ ಬೆಂಗಳೂರಿನ ಚಿಕ್ಕಪೇಟೆಯ ಅಂಬಿಕಾ ಜ್ಯುವೆಲರ್ನ ರಮೇಶ್ ಕೊಠಾರಿ ಅವರ ಅಕೌಂಟ್‌ಗೆ ಫರೀದ್ 17.5 ಕೋಟಿ ರೂ. ಹಾಗೂ 1 ಕೋಟಿ ರೂ. ಚೆಕ್ ರೂಪದಲ್ಲಿ ವರ್ಗಾವಣೆ ಮಾಡಿದ್ದ. ರಮೇಶ್ ಕೊಠಾರಿ, ಫೆ.4ರಿಂದ ಫೆ.15ರವೆರೆಗೆ 7 ಬಾರಿ 57 ಕೆ.ಜಿ. ಚಿನ್ನವನ್ನು ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜುವೆಲ್ಲರ್ನ ರಮೇಶ್‌ಗೆ ನೀಡಿದ್ದ ಸಂಗತಿ ಬಯಲಾಗಿತ್ತು.
ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದ ಸಿಸಿಬಿ ಪೊಲೀಸರು ಸೈಯದ್ ಫರೀದ್, ರಮೇಶ್ ಕೊಠಾರಿ, ರಮೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇ.ಡಿ ತನಿಖೆಯಿಂದ ಬಚಾವ್ ಆಗಲು ಫರೀದ್ ಬಿಲ್ಡರ್ ಬ್ರಿಜೇಶ್ ರೆಡ್ಡಿ ಎಂಬಾತನ ಮೂಲಕ ತಾಜ್‌ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಜನಾರ್ದನ ರೆಡ್ಡಿ ಆಪ್ತ ಅಲೀಖಾನ್‌ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ. ಈ ವೇಳೆ ಪ್ರಕರಣದಿಂದ ಬಚಾವ್ ಮಾಡಲು ರೆಡ್ಡಿ 20 ಕೋಟಿ.ರೂ ಬೇಡಿಕೆಯಿಟ್ಟಿದ್ದರು. ಜತೆಗೆ, ನಗದು ಹಣದ ಬದಲಾಗಿ 20 ಕೋಟಿ.ರೂ ಮೌಲ್ಯದ ಚಿನ್ನ ನೀಡುವಂತೆ ರೆಡ್ಡಿ ಷರತ್ತು ವಿಧಿಸಿದ್ದರು ಎಂಬುದು ಬೆಳಕಿಗೆ ಬಂದಿತ್ತು.
ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಾತುಕತೆಯಂತೆ, ರಮೇಶ್ ಕೊಠಾರಿಯಿಂದ ಚಿನ್ನ ಪಡೆದಿದ್ದ ಬಳ್ಳಾರಿಯ ರಮೇಶ್, ಜನಾರ್ದನ ರೆಡ್ಡಿ ಆಪ್ತ ಮೆಹು¤ಜ್ ಅಲಿಖಾನ್ ಮೂಲಕ ರೆಡ್ಡಿಗೆ ತಲುಪಿಸಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ರೆಡ್ಡಿ ಆಪ್ತನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು
ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ರೆಡ್ಡಿ ಆಪ್ತ ಆಲಿಖಾನ್‌ಗೆ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮುಂಜೂರು ಮಾಡಿದೆ. ಪ್ರಕರಣದ ಇತರೆ ಆರೋಪಿಗಳಾದ ಫರೀದ್, ರಮೇಶ್ ಕೊಠಾರಿ, ರಮೇಶ್ ಕೂಡ ಜಾಮೀನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
57 ಚಿನ್ನದ ಗಟ್ಟಿ ವಶಕ್ಕೆ ಕಾರ್ಯಾಚರಣೆ
ಆರೋಪಿ ಫರೀದ್, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿ ನಡುವೆ ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಮಾತುಕತೆ ನಡೆದ ಸಂಬಂಧ ಹೋಟೆಲ್‌ನಲ್ಲಿ ಶೋಧಕಾರ್ಯ ನಡೆಸಿರುವ ಪೊಲೀಸರು, ಸಿಸಿಟಿವಿ ಫೂಟೇಜ್, ಲಾಗ್ ಸೇರಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ, ತಾಜ್ ವೆಸ್ಟ್ ಎಂಡ್‌ನಲ್ಲಿ ಪಂಚನಾಮೆ ಪೂರ್ಣಗೊಳಿಸಿದ್ದು 57 ಕೆ.ಜಿ ಚಿನ್ನ ಅಲಿಖಾನ್ ಅಥವಾ ರೆಡ್ಡಿ ಬಳಿಯಿದೆಯೇ ಎಂಬುದು ಅವರಿಬ್ಬರ ವಿಚಾರಣೆ ಬಳಿಕ ಗೊತ್ತಾಗಲಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಕೈ ನಾಯಕರ ಜತೆಗೂ ನಂಟು?
ಒಂದೆಡೆ, ರೆಡ್ಡಿ ಪ್ರಕರಣ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದರೆ, ವಂಚನೆ ಆರೋಪ ಎದುರಿಸುತ್ತಿರುವ ಫರೀದ್ ಜತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ನಂಟು ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಫರೀದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಪಾಲ್ಗೊಂಡಿದ್ದರು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫರೀದ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.