ರಾಜ್ಯದ ಸಾಲದ ಪ್ರಮಾಣ ಹೆಚ್ಚಳ ..!
Team Udayavani, Dec 15, 2021, 12:37 PM IST
Representative Image used
ಸುವರ್ಣ ವಿಧಾನಸೌಧ: ಕೊರೊನಾ, ಲಾಕ್ ಡೌನ್‌ದಿಂದ ರಾಜ್ಯದ ಸಾರ್ವಜನಿಕ ಸಾಲದ ಪ್ರಮಾಣವು 2019-20 ಮತ್ತು 2020-21ನೇ ಸಾಲಿನಲ್ಲಿ ಶೇ. 31.38 ಹೆಚ್ಚಾಗಿದೆ ಎಂದು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿರುವ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಯಿಂದ ತಿಳಿದು ಬಂದಿದೆ.
ಲಾಕ್‌ಡೌನ್ ಸಮಯದಲ್ಲಿ ಉಂಟಾಗಿದ್ದ ಆದಾಯದ ಕೊರತೆ ಸರಿದೂಗಿಸಲು ರಾಜ್ಯ ಸರ್ಕಾರ ಹೆಚ್ಚುವರಿ ಸಾಲ ಮಾಡಿದೆ. ಇದು ಒಟ್ಟಾರೆ ಸಾಲದ ಪ್ರಮಾಣದಲ್ಲಿ ಏರಿಕೆಗೆ ಕಾರಣ ವಾಗಿದೆ. 2019-20ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಸಾರ್ವಜನಿಕ ಸಾಲ 2.34 ಲಕ್ಷ ಕೋಟಿ ಇತ್ತು.
2020-21ರ ವೇಳೆಗೆ ಇದು 3.07 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದಿಂದ 2019-20ರ ಅಂತ್ಯದಲ್ಲಿ 13908 ಕೋಟಿ ಸಾಲ ಮತ್ತು ಮುಂಗಡವಿತ್ತು, 2020-21ರಲ್ಲಿ ಇದು ಕೂಡ ದ್ವಿಗುಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಿದೆ. ಹಾಗೆಯೇ ಕಳೆದ ಹಣಕಾಸು ವರ್ಷದಲ್ಲಿ ಜಿಎಸ್‌ಡಿಪಿಯ ಶೇ.5ರಷ್ಟು (ಸುಮಾರು 80 ಸಾವಿರ ಕೋಟಿ) ಸಾಲವನ್ನು ಪಡೆದಿರುವುದು ಸಾಲದ ಹೊರೆ ಹೆಚ್ಚಳಕ್ಕೆ ಇನ್ನೊಂದು ಕಾರಣವಾಗಿದೆ.
ಇದನ್ನೂ ಓದಿ:- ಮಡಿಕೇರಿ: ಪಿಎಸ್‍ಐ ಹೃದಯಾಘಾತದಿಂದ ನಿಧನ
ಕೊರೊನಾದಿಂದ ಜಿಎಸ್‌ಟಿ ಆದಾಯದಲ್ಲೂ ಕೊರತೆಯಾಗಿತ್ತು. ಇದರ ಜತೆಗೆ ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಹಾರವನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಿತ್ತು. ಇದರಿಂದ ಸಾಲದ ಹೊರೆ 18 ಸಾವಿರ ಕೋಟಿಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಆದಾಯವೂ ಕುಸಿತವಾಗಿತ್ತು. ಇದು ಕೂಡ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ.
ರಾಜ್ಯದ ಆದಾಯದ ಮೂಲಗಳಲ್ಲೂ ಕುಸಿತವಾಗಿದೆ. ಜಿಎಸ್‌ಟಿ 2019-20ರಲ್ಲಿ 42.147 ಕೋಟಿ ರೂ.ಗಳಿಂದ 2020-21ರಲ್ಲಿ 37.711 ಕೋಟಿ ರೂ.ಗಳಿಗೆ ಇಳಿಸಿದೆ. ಸರ್ಕಾರದ ವಿವಿಧ ಆದಾಯದ ಮೂಲಗಳಾದ ರಾಜ್ಯ ಅಬಕಾರಿ, ಅಂಚೆಚೀಟಿಗಳು, ನೋಂದಣಿ ಶುಲ್ಕ ಹಾಗೂ ಇತರೆ ತೆರಿಗೆಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಸರ್ಕಾರದ ಸಾಲವು ವರ್ಷದಲ್ಲಿ 96506 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಇದರಲ್ಲಿ 18,421 ಕೋಟಿ ರೂ. ಬಜೆಟ್ ಸಾಲವು ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರು ಹೈಕೋರ್ಟ್‌ಗೆ
MUST WATCH
ಹೊಸ ಸೇರ್ಪಡೆ
Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.