ಉದ್ಯೋಗವೇ ಇಲ್ಲ ಜೀವನ ಹೇಗೆ…
14 ದಿನ ಜನತಾ ಕರ್ಫ್ಯೂ ಹಿನ್ನೆಲೆ ಗಂಟು-ಮೂಟೆ ಸಮೇತ ಊರುಗಳತ್ತ ಪಯಣ ಬೆಳೆಸಿದ ಜನತೆ
Team Udayavani, Apr 27, 2021, 11:38 AM IST
ಬೆಂಗಳೂರು: “ರಾಜಧಾನಿಯ ಬಹುತೇಕ ಬಸ್ ನಿಲ್ದಾಣಗಳ ಬಳಿ ಸಾಲು ನಿಂತಿದ್ದ ಜನರು. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ನೆಲಮಂಗಲ- ತುಮಕೂರು ಮಾರ್ಗವಾಗಿ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗಳು. ಬಸ್ ಬಂದು ದಿಢೀರನೆ ಬ್ರೇಕ್ ಹಾಕಿದ ತಕ್ಷಣ ಒಂದು ಕೈಯಲ್ಲಿ ಬ್ಯಾಗ್, ಮತ್ತೂಂದು ಕೈಯಲ್ಲಿ ತಮ್ಮ ಮಕ್ಕಳನ್ನು ಹಿಡಿದು ಸರ್.. ಈ ಬಸ್ ಹಾವೇರಿಗೆ, ಗುಲ್ಬರ್ಗಾಕ್ಕೆ, ಗಂಗಾವತಿಗೆ ಹೋಗುತ್ತಾ? ಎಂದು ಕಂಡಕ್ಟರ್‌ನನ್ನು ಕೇಳಿ ಬಸ್ ಹತ್ತುತ್ತಿದ್ದ ಜನರು’ ಇನ್ನೊಂದೆಡೆ, ನಾನ್ ಸ್ಟಾಫ್ ತುಮಕೂರು.. ನಾನ್ ಸ್ಟಾಫ್ ಚಿತ್ರದುರ್ಗ, ದಾವಣಗೆರೆ..ಎಂದು ಕೂಗುತ್ತಿದ್ದ ಕಂಡಕ್ಟರ್.
ಬಸ್ ಹತ್ತಿದ ಕೂಡಲೇ, ಪ್ರಯಾಣಿಕರಿಗೆಬಸ್‌ನಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ. ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿ ತುಕೊಳ್ಳಿ. ಸರಿಯಾಗಿ ಮಾಸ್ಕ್ ಧರಿಸುವಂತೆ ಜಾಗೃತಿಮೂಡಿಸುತ್ತಲೇ ಟಿಕೆಟ್ ನೀಡುತ್ತಿದ್ದ ಕಂಡಕ್ಟರ್.. ಇದು.. ಸರ್ಕಾರ, ಕೊರೊನಾ ಕರ್ಫ್ಯೂ ಆದೇಶ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ನೆಲಮಂಗಲ- ತುಮಕೂರು ರಸ್ತೆ ಮಾರ್ಗದಲ್ಲಿನ ಬಹುತೇಕ ಬಸ್ ನಿಲ್ದಾಣ(ಬಸ್‌ಸ್ಟಾಪ್)ಗಳ ಬಳಿ ಕಂಡು ಬಂದ ದೃಶ್ಯ.
ಗಂಟು-ಮೂಟೆ ಸಮೇತ ಪಯಣ: ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯದ ಉದ್ಯೋಗಿಗಳಿಗೆ ನೆಲೆಯನ್ನು ನೀಡಿದ್ದ ರಾಜಧಾನಿ ಬೆಂಗಳೂರು, ಈಗ ಕೋವಿಡ್ ಹಾಟ್ ಸ್ಪಾಟ್ ಕೇಂದ್ರವಾಗಿದೆ. ಇದರಿಂದ ಕಾರ್ಮಿಕರು, ಜನರು ಕೋವಿಡ್ ಭೀತಿಗೆಒಳಗಾಗಿದ್ದಾರೆ. ಈ ನಡುವೆ ಸರ್ಕಾರ, ಕೋವಿಡ್ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮತ್ತೆ ಏ.27 ರಿಂದ 14 ದಿನ ಕಟ್ಟುನಿಟ್ಟಿನ ನಿಯಮ ಜಾರಿ (ಕೋವಿಡ್ ಕರ್ಫ್ಯೂ)ಗೆ ಆದೇಶಿಸಿದೆ. ಈ ಹಿನ್ನೆಲೆ ಬದುಕು ಕಟ್ಟಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಉದ್ಯಾನ ನಗರಿಗೆ ಬಂದು ನೆಲೆಸಿದ್ದ ಜನರು, ಗಂಟು-ಮೂಟೆ ಕಟ್ಟಿಕೊಂಡು ತಮ್ಮ ಕುಟುಂಬಸ್ಥರೊಂದಿಗೆ ಬಸ್‌ಗಳ ಮೂಲಕ ತಮ್ಮ ಊರುಗಳತ್ತ ಪಯಣ ಆರಂಭಿಸಿದ್ದಾರೆ.
ಊರಿನಲ್ಲಿದ್ದರೆ ಗಂಜಿ ಕುಡಿದು ಬದುಕಬಹುದು: “ನನ್ನದು ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪ ಒಂದು ಹಳ್ಳಿ. ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು,ಮಲ್ಲೇಶ್ವರ ಸಮೀಪದಲ್ಲಿರುವ ಒಂದು ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಳೆದ ಗುರುವಾರದಿಂದ ಮೊಬೈಲ್ ಶಾಪ್ ಬಂದ್ ಮಾಡಿದ್ದಾರೆ. ಸರ್ಕಾರ ದಿಢೀರನೆ ಮತ್ತೆ 14 ದಿನಗಳ ಕಾಲ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಕಳೆದ ಬಾರಿಯಂತೆ ರಾಜಧಾನಿ ಸಂಪೂರ್ಣ ಲಾಕ್‌ಡೌನ್ ಆದರೆ ನಮ್ಮ ಪರಿಸ್ಥಿತಿ ಏನು? ಕೈಯಲ್ಲಿ ಉದ್ಯೋಗ ಇಲ್ಲ, ಊಟಕ್ಕೆಹಣವಿಲ್ಲ. ಹೀಗಾದರೆ ಜೀವನ ಮಾಡುವುದು ಹೇಗೆ ಎಂಬ ಗೊಂದಲ ಮೂಡಿದೆ. ನಮ್ಮ ಊರಿಗೆ ಹೋದರೆ ಕನಿಷ್ಠ ಗಂಜಿಯನ್ನಾದರೂ ಕುಡಿದು ಜೀವನ ಮಾಡಬಹುದು’ ಎಂದು ಜಾಲಹಳ್ಳಿ ಬಸ್‌ಸ್ಟಾಪ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಸಮಸ್ಯೆ ಬಿಚ್ಚಿಟ್ಟರು.
ರಾಜಧಾನಿಗೆ ಬಾಯ್ ಎಂದ ಉ.ಕ. ಜನತೆ :
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಬದುಕು ಕಟ್ಟಿಕೊಳ್ಳುವುದಕ್ಕೆ ಬೆಂಗಳೂರಿಗೆ ಬಂದಿದ್ದವರು, ಬೆಂಗಳೂರನ್ನೇ ಖಾಲಿಮಾಡಿ ತೆರಳಿದರು. ಕೆಲವರು ಟಾಟಾ ಏಸ್, ಆಟೋ,ಮ್ಯಾಕ್ಸಿ ಕ್ಯಾಬ್, ಕಾರು, ಚಿಕ್ಕ ಗೂಡ್ಸ್ ವಾಹನಗಳಲ್ಲಿ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ತುಂಬಿಕೊಂಡುಊರಿನತ್ತ ಪಯಣ ಬೆಳೆಸಿದರು. ತಮಿಳುನಾಡಿನಿಂದ ಕೆಲಸ ಅರಸಿ ಬಂದಿದ್ದ ಕಾರ್ಮಿಕರು ಮತ್ತೆ ಅತ್ತಿಬೆಲೆ ಗಡಿ ಮುಖಾಂತರ ತೆರಳಿದ್ದಾರೆ. ಉಳಿದಂತೆ, ನಗರದ ವಿವಿಧಬಸ್ ನಿಲ್ದಾಣದಲ್ಲಿ ತಮ್ಮೂರಿಗೆ ತೆರಳಲು ಜನರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.
ನೆಲಮಂಗಲ- ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ : ವೀಕೆಂಡ್ ಕರ್ಫ್ಯೂ ಹಿನ್ನೆಲೆ ಭಾನುವಾರ ತಮ್ಮಊರುಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸೋಮವಾರ ಸರ್ಕಾರ ಲಾಕ್‌ಡೌನ್‌ಘೋಷಿಸಬಹುದು ಎಂಬ ಸೂಚನೆ ಅರಿತವರು,ಭಾನುವಾರವೇ ಬೆಂಗಳೂರಿನಿಂದ ತಮ್ಮಊರುಗಳತ್ತ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಬೆಳಗ್ಗೆಯೇ ಜನರು ಬಸ್‌ನಿಲ್ದಾಣಗಳತ್ತ ಮುಖ ಮಾಡಿದರು. ಹೀಗಾಗಿ,ನಗರದ ಜಾಲಹಳ್ಳಿ ಕ್ರಾಸ್, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ ಬಸ್‌ನಿಲ್ದಾಣದಲ್ಲಿ ಜನಜಂಗುಳಿ ಕಂಡುಬಂದಿತು.
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮತ್ತೆ14 ದಿನ ಕರ್ಫ್ಯೂ ಜಾರಿಗೊಳಿಸಿದೆ.ಹೀಗಾಗಿ, ಜನರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಬಸ್‌ನಲ್ಲಿ ಶೇ.50ರಷ್ಟುಪ್ರಯಾಣಿಕರಿಗೆ ಅವಕಾಶ ನೀಡಿದ್ದಾರೆ. ನಾನು ವಿಶೇಷ ಚೇತನ. ಗುಲ್ಬರ್ಗಾಕ್ಕೆ ತೆರಳಬೇಕು. ನನ್ನ ಬಳಿ ಪಾಸ್ ಇದ್ದರೂ, ಬಸ್ ಟಿಕೆಟ್ ಸಿಗುತ್ತಿಲ್ಲ. – ಪ್ರಶಾಂತ್, ಪ್ರಯಾಣಿಕ
ನಾನು ಗುಲ್ಬರ್ಗಾದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದೆ.ಕಂಪನಿಯಲ್ಲಿ ಕೆಲಸ ಮಾಡುವ ಅನೇಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ.ಬೆಂಗಳೂರಿನಲ್ಲಿ ಜೀವನ ನಡೆಸುವುದಕ್ಕೆಭಯ ಆಗುತ್ತದೆ. ಹೀಗಾಗಿ, ಕೆಲಸಕ್ಕೆ ರಾಜಿನಾಮೆ ನೀಡಿ ಊರಿಗೆ ತೆರಳುತ್ತಿದ್ದೇನೆ. – ನವೀನ್, ಪ್ರಯಾಣಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.