ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಯಾಗಬೇಕು
Team Udayavani, May 15, 2021, 2:55 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕುಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲುಈಗಿರುವ ಲಾಕ್‌ಡೌನ್ ಮುಂದುವರೆಸಿದರೆಅನುಕೂಲವಾಗಲಿದೆ ಎಂದು ಕಂದಾಯ ಸಚಿವಆರ್. ಅಶೋಕ್ ಹೇಳಿದರು.
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿಬಿಬಿಎಂಪಿಯ ನೂತನ ಟ್ರಯಾಜ್ ಮತ್ತುಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆನೆರವೇರಿ ಮಾತನಾಡಿದ ಅವರು, ಲಾಕ್‌ಡೌನ್ ಜಾರಿಯಿಂದ ಈಗ ಕೊರೊನಾಕೇಸ್ ಕಡಿಮೆ ಆಗುತ್ತಿದೆ. ಈಗ ಲಾಕ್‌ಡೌನ್ ಮುಂದುವರಿಸಿದರೆ ಮತ್ತಷ್ಟುಅನುಕೂಲ ಆಗುತ್ತದೆ ಎಂದರು.
ಈ ಬಗ್ಗೆ ಸಿಎಂ ಯಡಿಯೂರಪ್ಪರವರಿಗೂಮನವರಿಕೆ ಮಾಡುತ್ತೇವೆ. ನಾನು ಬೆಂಗಳೂರುನಾಗರಿಕನಾಗಿ ಲಾಕ್‌ಡೌನ್ ಮುಂದುವರಿಕೆಆಗಬೇಕು ಅಂತ ಹೇಳುತ್ತೇನೆ. ಮಹಾರಾಷ್ಟ್ರ, ದೆಹಲಿ,ಪ್ರಕರಣ ನಮ್ಮ ಮುಂದಿದೆ. ಅಲ್ಲಿ ಮೊದಲ ಅಲೆಬಂತು. ಅವರು ಲಾಕ್‌ಡೌನ್ ವಿಸ್ತರಣೆ ಮಾಡಿದರು.ಅದನ್ನು ನಾವು ಅನುಸರಿಸುತ್ತೇವೆ .
ಸಿಎಂಅವರಿಗೂ ನಾವು ಲಾಕ್‌ಡೌನ್‌ವಿಸ್ತರೆಣೆಗೆ ಸಲಹೆ ಕೊಡುತ್ತೇವೆ. ಸಿಎಂಈಗಿರುವ ಲಾಕ್‌ಡೌನ್ ಮುಗಿಯೋ3-4 ದಿನಗಳಲ್ಲಿ ಸಭೆ ಮಾಡುತ್ತಾರೆ. ಆಸಭೆಯಲ್ಲಿ ಈ ಬಗ್ಗೆ ಸಲಹೆ ಕೊಡುತ್ತೇವೆ.ಸಿಎಂ ಅಂತಿಮವಾಗಿ ಲಾಕ್‌ಡೌನ್‌ಮುಂದುವರಿಸುವ ನಿರ್ಧಾರಮಾಡುತ್ತಾರೆ ಎಂದು ಹೇಳಿದರು. ಇದೇ ವೇಳೆಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯಮನೆಯಲ್ಲಿ ಕುಳಿತು ಟ್ವೀಟ್ ಮಾಡುತ್ತಾರೆ. ನಾವು 24ಗಂಟೆ ಜನರ ಜೊತೆ ಇದ್ದು, ಜನರ ಜೊತೆಓಡಾಡುತ್ತಿದ್ದೇವೆ. ಈ ಸಮಯದಲ್ಲಿ ರಾಜಕೀಯಮಾಡುವುದು ಬೇಡ. ಪ್ರಧಾನಿ ಮೋದಿ ಎಲ್ಲಿ ಇದ್ದಾರೆಅಂತ ಜಗತ್ತಿಗೆ ಗೊತ್ತು. ಸಿದ್ದರಾಮಯ್ಯ ಎಲ್ಲಿದ್ದಾರೆಅಂದರೆ ಟ್ವಿಟರ್‌ನಲ್ಲಿ ಇದ್ದಾರೆ. ನಾವು, ನಮ್ಮಸಂಸದರು 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ರಾಜಕೀಯ ಬಿಟ್ಟು ಸಹಕಾರಕೊಡಲಿ. ಈ ಸಮಯದಲ್ಲಿ ರಾಜಕೀಯಮಾಡುವುದು ಬೇಡ ಎಂದು ಸಿದ್ದರಾಮಯ್ಯವಿರುದ್ಧ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಳೆದ ಹತ್ತು ದಿನಗಳಿಂದ ನಮ್ಮ ಅಧಿಕಾರಿಗಳು ಡಾಕ್ಟರ್‌ಗಳು ಶ್ರಮವಹಿಸಿ ಈ ಕೇಂದ್ರಮಾಡಿದ್ದೇವೆ. ಆಕ್ಸಿಜನ್ ಕಡಿಮೆ ಪ್ರಮಾಣದಲ್ಲಿಬೇಕಿರುವ ರೋಗಿಗಳಿಗೆ ಈ ಕೋವಿಡ್ ಆರೈಕೆ ಕೇಂದ್ರಉಪಯೋಗ ಆಗಲಿದೆ. ಡಾಕ್ಟರ್‌ಗಳು, ಸ್ಪೆಷಲಿÓr…ಗಳು ಇಲ್ಲಿ ಇರಲಿದ್ದಾರೆ. ಮುಂದೆ ಮೂರನೇ ಅಲೆಗೂಕೂಡಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಲಸಿಕೆ ಕೊರತೆ ಆಗಿಲ್ಲ. 40 ವರ್ಷಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಈಕೇಂದ್ರ ಪಕ್ಕದಲ್ಲಿ ಮಕ್ಕಳಿಗಾಗಿ ವಿಶೇಷ ಕೇಂದ್ರ ಪ್ರಾರಂಭಮಾಡುತ್ತಿದ್ದೇವೆ. 50 ಮಕಳ R ಬೆಡ್ ಪ್ರಾರಂಭ ಮಾಡಲಾಗುತ್ತಿದ್ದೇವೆ. ಇಲ್ಲಿ ಪೋಷಕರಿಗೂ ಉಳಿಯಲುಅವಕಾಶ ನೀಡಲಾಗುತ್ತದೆ. ಮಕ್ಕಳಿಗೆ ಆಗೋ ಸಮಸ್ಯೆತಡೆಯಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಂತರ ಬನಶಂಕರಿ ಇಂದಿರಾ ಕ್ಯಾಂಟೀನ್ನಲ್ಲಿ ರಿಯಾಲಿಟಿ ಚೆಕ್ ಮಾಡಿದ ಆರ್ ಅಶೋಕ್‌ಕ್ಯಾಂಟೀನಿನಲ್ಲಿ ಜನರಿಗೆ ನೀಡುತ್ತಿ ರುವ ಆಹಾರಗುಣಮಟ್ಟ ಪರಿಶೀಲನೆ ಮಾಡಿ, ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಸೇವನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.