ಲೋಕಸಭೆಗೆ ಸಿದ್ದು ಸ್ಪರ್ಧೆ: ಜಿ.ಟಿ.ದೇವೇಗೌಡ ವ್ಯಂಗ್ಯ
Team Udayavani, Aug 25, 2018, 6:05 AM IST
ಬೆಂಗಳೂರು: “ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ, ಹಾಗಾಗಿ ಕಾಲಚಕ್ರದ ಬಗ್ಗೆ ಮಾತನಾಡಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮಾಜಿ ಮುಖ್ಯಮಂತ್ರಿಗೆ ಟಾಂಗ್ ಕೊಟ್ಟಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಸನದಲ್ಲಿ ಕಾಲಚಕ್ರದ ಕುರಿತು ನೀಡಿದ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ ಸೂರ್ಯ-ಚಂದ್ರ ಮೂಡುತ್ತದೆ ಮತ್ತು ಮುಳುಗುತ್ತದೆ, ಆ ಬಗ್ಗೆ ಅವರು ಹೇಳಿರಬಹುದು ಎಂದರು.
ರಾಜಕೀಯವಾಗಿ ನೋಡಿದರೆ ಕಾಲಚಕ್ರಮದ ಮಾತು ಯಾರಿಗೆ ಹೇಳಿರಬಹುದು ಎಂದು ನಿಮಗೆ ಅನಿಸುತ್ತದೆ ಎಂದಿದ್ದಕ್ಕೆ
“ಸಿದ್ದರಾಮಯ್ಯನವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಅದಕ್ಕಾಗಿ ಕಾಲಕಚಕ್ರದ ಬಗ್ಗೆ ಮಾತನಾಡಿದ್ದಾರೆ ಎಂದು ಚಟಾಕಿ ಹಾರಿಸಿದರು.
ಇದೇ ವೇಳೆ ಕೊಡಗಿನಲ್ಲಿ ಪರಿಹಾರ ಕಾರ್ಯ ತ್ವರಿತವಾಗಿ ಆಗಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿ.ಟಿ. ದೇವೇಗೌಡ, ಕೊಡಗು ಕಟ್ಟಲು ಸರ್ಕಾರ ಜನರ ಜೊತೆ ಇದೆ. ಸಮ್ಮಿಶ್ರ ಸರ್ಕಾರದ ವಸತಿ ಸಚಿವರು ಅಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಯು.ಟಿ. ಖಾದರ್ ಅವರಿಗೆ ಜೋರಾಗಿ ಕೆಲಸ ಮಾಡಿ ಅಂತ ಹೇಳಿರಬಹುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.