ಸಮಸ್ಯೆಗಳ ಕೂಪವಾಗಿದೆ ನಾಯಂಡಹಳ್ಳಿ

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಬಿಬಿಎಂಪಿ | ಮಳೆ ಬಂತೆಂದರೆ ಮತ್ತೆ ಅನಾಹುತಗಳು ಕಟ್ಟಿಟ್ಟ ಬುತ್ತಿ

Team Udayavani, Aug 10, 2019, 9:08 AM IST

bng-tdy-1

ಬೆಂಗಳೂರು: ಇಲ್ಲಿ ಬೀದಿ ದೀಪಗಳಿಲ್ಲ. ರಸ್ತೆಯಲ್ಲಂತೂ ಗುಂಡಿಗಳೇ ಹೆಚ್ಚು. ಜತೆಗೆ ಸಂಚಾರ ದಟ್ಟಣೆ, ಕಳ್ಳರ ಹಾವಳಿ ಇರುವುದೂ ಇಲ್ಲೇ. ಕೊನೆಗೆ ನಗರದಲ್ಲಿ ಮಳೆಬಂದರೂ ದಿಢೀರ್‌ ನೆರೆಗೆ ತುತ್ತಾಗುವುದು ಇದೇ ಪ್ರದೇಶ.

ಅದು ನಾಯಂಡಹಳ್ಳಿ. ಸಮಸ್ಯೆಗಳ ಕೂಪವಾದರೂ ಈ ಭಾಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಮತ್ತೆ ಮಳೆಗಾಲ ಬಂದಿದ್ದು, ಈ ವರ್ಷವೂ ಜನರಿಗೆ ಗೋಳು ತಪ್ಪಿದ್ದಲ್ಲ. ಕಾರಣ, ಪಾಲಿಕೆ ಈ ಬಾರಿಯೂ ಚರಂಡಿ ಸ್ವಚ್ಛತೆ, ಸ್ಲ್ಯಾಬ್‌ ಅಳವಡಿಕೆ, ಗುಂಡಿ ಮುಚ್ಚುವುದು, ಬೀದಿ ದೀಪಗಳ ಅಳವಡಿಕೆಯಂತಹ ಯಾವ ಮುನ್ನೆಚ್ಚಕೆ ಕ್ರಮವನ್ನೂ ಕೈಗೊಂಡಿಲ್ಲ.

ಇದರ ನೇರ ಪರಿಣಾಮ ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿನ ಜನರು ಮೇಲಾಗುತ್ತಿದೆ. ಬೀದಿ ದೀಪ ಇಲ್ಲದೆ ಕಳ್ಳರ ಹಾವಳಿ, ಕಿಡಿಗೇಡಿಗಳ ಕಾಟ, ಸ್ವಚ್ಛಗೊಳ್ಳದ ಚರಂಡಿಗಳಿಂದ ದುರ್ವಾಸನೆ ಹೀಗೆ ಹಲವು ಸಮಸ್ಯೆಗಳು ಇಲ್ಲಿವೆ. ಜೋರು ಮಳೆ ಬಂದರೆ ನೀರು ರಸ್ತೆಗೆ ಬಂದು ಮನೆಗಳ ಮುಂದೆ ನಿಲ್ಲಲಿದೆ ಎಂಬ ಆತಂಕದಲ್ಲಿ ಜನ ಜೀವನ ನಡೆಸುತ್ತಿದ್ದಾರೆ.

ಕೆಲ ಚರಂಡಿಗಳಲ್ಲಿ ಹೂಳು ತೆಗೆದಿಲ್ಲ. ಇನ್ನೂ ಕೆಲವೆಡೆ ಹೂಳೆತ್ತಿದ್ದರೂ, ಸ್ಲ್ಯಾಬ್‌ ಜೋಡಿಸಿಲ್ಲ. ಮಕ್ಕಳು ರಸ್ತೆಯಲ್ಲೇ ಆಟವಾಡುವ ಕಾರಣ ಮಳೆ ಜೋರಾಗಿ, ಅವಘಡಗಳು ಸಂಭವಿಸುವ ಮುನ್ನ ಪಾಲಿಕೆ ಸದಸ್ಯರು ಮತ್ತು ವಾರ್ಡ್‌ ಎಂಜಿನಿಯರ್‌ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಸರವಣ.

ಪಂತರಪಾಳ್ಯದಲ್ಲಿ ಮಳೆನೀರು ಹರಿಯುವ ಚರಂಡಿಗೆ ಶೌಚ ನೀರು ಬಿಡುತ್ತಿದ್ದು, ಸುತ್ತಲಿನ ಪ್ರದೇಶಕ್ಕೆ ಅದರ ದುರ್ವಾಸನೆ ಹಬ್ಬಿದೆ. ಹೀಗಿರುವಾಗ ಹೂಳೆತ್ತಲು ಯಾರು ಮುಂದೆಬರುತ್ತಾರೆ ಎಂದು ಬಿಬಿಎಂಪಿ ಅಧಿಕಾರಿ ಪ್ರಶ್ನಿಸಿದ್ದಾರೆ. ಪಂತರಪಾಳ್ಯ ಕೊಳಗೇರಿಯಲ್ಲಿ ಕಳ್ಳರ ಹಾವಳಿ, ಕಿಡಿಗೇಡಿಗಳ ಕಾಟವಿರುವ ಕಾರಣ ಹೊಯ್ಸಳ ವಾಹನ ದಿನದ 24 ಗಂಟೆಯೂ ನಾಯಂಡಹಳ್ಳಿಯಿಂದ ರಾಜರಾಜೇಶ್ವರಿನಗರ ಗೇಟ್, ಪಂತರಪಾಳ್ಯ, ನಾಯಂಡಹಳ್ಳಿ ರೈಲು ನಿಲ್ದಾಣ ರಸ್ತೆ ಸೇರಿ ಸುತ್ತಲ ಪ್ರದೇಶದಲ್ಲಿ ಗಸ್ತಿನಲ್ಲಿರುತ್ತದೆ ಎನ್ನುತ್ತಾರೆ ಬ್ಯಾಟರಾಯನಪುರ ಠಾಣೆಯ ಪೊಲೀಸರು. ಅಲ್ಲದೆ, ಆರು ತಿಂಗಳ ಹಿಂದೆ ಡಾಂಬರೀಕರಣಗೊಂಡಿದ್ದ ನಾಯಂಡಹಳ್ಳಿಯಿಂದ ಆರ್‌.ಆರ್‌.ನಗರ ಗೇಟ್ವರೆಗಿನ ರಸ್ತೆ ಗುಂಡಿಮಯವಾಗಿದೆ. ಇದರಿಂದ ವಾಹನ ಸವಾರರು ತೊಂದರೆ ಪಡುತ್ತಿದ್ದಾರೆ.

ಅನುದಾನಕ್ಕೆ ಕೊರತೆ ಇಲ್ಲ:

ಪಾಲಿಕೆ ಪ್ರತಿ ವರ್ಷ ವಾರ್ಡ್‌ಗಳ ಅಭಿವೃದ್ಧಿಗೆ 2ರಿಂದ 3 ಕೋಟಿ ರೂ. ಮೀಸಲಿಟ್ಟಿದ್ದು, ಈ ಅನುದಾನದಲ್ಲಿ ಶೇ.10ರಷ್ಟು ಹಣ ಚರಂಡಿಗಳ ಹೂಳೆತ್ತಲು, ನಿರ್ವಹಣೆ, ಹೊಸ ಚರಂಡಿ ಕಾಮಗಾರಿ, ಗುಂಡಿ ಮುಚ್ಚಲು ಬಳಸಬಹುದು. ಈಗಾಗಲೇ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಚರಂಡಿ ಸ್ವಚ್ಛತಾ ಕಾರ್ಯ ನಿರಂತರವಾಗಿದ್ದು, ವರ್ಷಪೂರ್ತಿ ನಿರ್ವಹಣೆ ಮಾಡಲಾಗು ವುದು ಎನ್ನುತ್ತಾರೆ ಪಾಲಿಕೆ ಪ್ರಧಾನ ಎಂಜಿನಿಯರ್‌ ವೆಂಕಟೇಶ್‌.
ಎಲ್ಲೆಲ್ಲಿ ನೀರು ನಿಲ್ಲುತ್ತೆ?:

ನಾಯಂಡಹಳ್ಳಿ ಕ್ವಾಟ್ರರ್ಸ್‌, ಕೆಂಪೇಗೌಡ ರೈಲು ನಿಲ್ದಾಣದ ಪಾರ್ಸಲ್ ಕಚೇರಿ ಬಳಿ, ದೀಪಾಂಜಲಿನಗರ ಮೆಟ್ರೋ ನಿಲ್ದಾಣದ ಹತ್ತಿರ, ರಾಜರಾಜೇಶ್ವರಿ ಗೇಟ್ ಸೇರಿದಂತೆ ಹಲವೆಡೆ ಚರಂಡಿಯಲ್ಲಿ ಹೂಳು, ಸ್ಲ್ಯಾಬ್‌ ಅಳವಡಿಸದ ಕಾರಣ ನೀರು ರಸ್ತೆ ಮೇಲೆ ಬರುತ್ತದೆ.
ಅನಾಹುತಕ್ಕೆ ಆಹ್ವಾನ ನೀಡುತ್ತಿದೆ ತೆರೆದ ಚರಂಡಿ:

ನಾಯಂಡಹಳ್ಳಿ ಬಸ್‌ ನಿಲ್ದಾಣದಿಂದ ಆರ್‌.ಆರ್‌.ನಗರ ಗೇಟ್ವರೆಗೆ 2 ಕಿ.ಮೀ. ಮುಖ್ಯರಸ್ತೆ ಇದ್ದು, ಹತ್ತಕ್ಕೂ ಅಧಿಕ ಕಡೆ ಚರಂಡಿಗಳ ಮೇಲೆ ಸ್ಲ್ಯಾಬ್‌ ಹಾಕಿಲ್ಲ. ಇದು ಪಾದಚಾರಿ ರಸ್ತೆಯಾಗಿರುವ ಕಾರಣ ಪಾದಚಾರಿಗಳು ಕೈಯಲ್ಲಿ ಜೀವಹಿಡಿದು ಸಂಚರಿಸುವ ಪರಿಸ್ಥಿತಿ ಇದೆ. ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿರುವ ವಿಭಜಕದ ಮೇಲೆ ಹುಲ್ಲು ಬೆಳೆದು, ಬುಡದಲ್ಲಿ ಹೂಳುತುಂಬಿದೆ. ಇದರಿಂದ ನೀರು ಸರಾಗವಾಗಿ ಹೋಗುವುದಿಲ್ಲ. ಮಳೆ ಬಂದರಂತೂ ಮೇಲ್ಸೇತುವೆ ಜಲಾವೃತಗೊಂಡಿರುತ್ತದೆ. ಇದರಿಂದ ವಾಹನಗಳ ಓಟಕ್ಕೆ ಬ್ರೇಕ್‌ ಬೀಳುತ್ತದೆ. ಇದರಿಂದ ಸವಾರರು ಪರದಾಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮಂಜುನಾಥ್ ಗಂಗವತಿ

ಟಾಪ್ ನ್ಯೂಸ್

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.