ಪ್ರೀತಿ, ಕೀರ್ತಿ ವಂಚಿಸಿದ್ದು 7.19 ಲಕ್ಷ!
Team Udayavani, Nov 7, 2017, 1:25 PM IST
ಬೆಂಗಳೂರು: ಒಬ್ಬಳು ಪ್ರೀತಿ, ಮತ್ತೂಬ್ಬಳು ಕೀರ್ತಿ, ಇನ್ನೊಬ್ಬಳು ರಾಧಿಕಾ! ಹೀಗೆ ಈ ಮೂರು ಹೆಸರುಗಳಿಂದ ಕರೆ ಮಾಡಿ ಕೆಲಸ ಕೊಡಿಸುತ್ತೇವೆ ಎಂದರೆ ಸ್ವಲ್ಪ ಎಚ್ಚರ ವಹಿಸುವುದು ಒಳಿತು. ಅಷ್ಟೇ ಅಲ್ಲ ಉದ್ಯೋಗ ಕೊಡಿಸುವುದಾಗಿ ಕರೆ ಮಾಡಿ ವಂಚಿಸುವವರ ಬಗ್ಗೆ ಜಾಗ್ರತೆ ವಹಿಸಿ.
ಪ್ರೀತಿ, ಕೀರ್ತಿ, ರಾಧಿಕಾ ಎಂಬ ಯುವತಿಯರು ವಿವಿಧ ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿ ಏರ್‌ಟೆಲ್ ಕಂಪನಿಯಲ್ಲಿ ಟ್ರಾವೆಲ್ ಮ್ಯಾನೆಜರ್ ಹುದ್ದೆ ಕೊಡಿಸುತ್ತೇವೆ ಎಂದು ಇಂದ್ರಜಿತ್ ಹಿರಾಲಾಲ್ ಎಂಬುವರಿಂದ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ 7,19,630 ಲಕ್ಷ ಹಣ ಜಮಾ ಮಾಡಿಸಿಕೊಂಡು ವಂಚಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆ ಪೊಲೀಸರು, ಮೂವರು ಯುವತಿಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಅಥವಾ ಒಬ್ಬ ಯುವತಿಯೇ ಮೂರು ಹೆಸರಿನಲ್ಲಿ ವಂಚನೆ ಮಾಡಿದ್ದಾಳಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಅ.9ರಂದು ಪ್ರೀತಿ ಎಂಬಾಕೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇಂದ್ರಜಿತ್ ಹಿರಾಲಾಲ್‌ಗೆ ಕರೆ ಮಾಡಿ, “ಹೈದ್ರಾಬಾದ್‌ನಲ್ಲಿ ಏರ್‌ಟೆಲ್ ಕಂಪನಿಯ ಟ್ರಾವೆಲ್ ವಿಭಾಗದ ವ್ಯವಸ್ಥಾಪಕರ ಹುದ್ದೆ ಖಾಲಿಯಿದ್ದು, ಸಂದರ್ಶನಕ್ಕೆ ಆಹ್ವಾನಿಸಲಾಗುತ್ತಿದೆ. ಆರಂಭದಲ್ಲಿ ನೇಮಕಾತಿ ಶುಲ್ಕ 3 ಸಾವಿರ ರೂ. ಪಾವತಿಸಬೇಕು’ ಎಂದಿದ್ದಾಳೆ.
ನಂತರ ಅ.10ರಂದು ರಾಧಿಕಾ ಎಂಬ ಹೆಸರಿನಲ್ಲಿ ಕರೆ ಮಾಡಿದ ಮತ್ತೂಬ್ಬಳು, “ನಿಮಗೆ ಉದ್ಯೋಗ ಸಿಕ್ಕಿದೆ’ ಎಂದು ಖಾತ್ರಿ ಮಾಡಿದ್ದಳು. ಕೆಲವೇ ಕ್ಷಣಗಳಲ್ಲಿ ಕರೆ ಮಾಡಿದ ಮತ್ತೂಬ್ಬ ಯುವತಿ ತನ್ನ ಹೆಸರು ಕೀರ್ತಿ ಎಂದು ಪರಿಚಯಿಸಿಕೊಂಢಿದ್ದು, ಅನಿಲ್ ಕುಮಾರ್ ರಾಯ್ ಎಂಬ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟು, ಆ ಖಾತೆಗೆ ನೇಮಕಾತಿ ಶುಲ್ಕ 3 ಸಾವಿರ ರೂ. ಜಮಾ ಮಾಡುವಂತೆ ಹೇಳಿದ್ದಾಳೆ. ಇಂದ್ರಜಿತ್ ಹಣ ಜಮಾ ಮಾಡಿದ್ದಾರೆ.
ಆ ನಂತರ ದಾಖಲೆಗಳ ಪರಿಶೀಲನಾ ಶುಲ್ಕ 6400 ರೂ. ಹಾಗೂ ಉದ್ಯೋಗ ಖಾತ್ರಿ ಮಾಡಿದಕ್ಕೆ 11,700 ರೂ., ಗುರುತಿನ ಚೀಟಿ ಚಾಲನೆಯಲ್ಲಿಡಲು 43,650 ರೂ., ಸಂದರ್ಶನ ಶುಲ್ಕ 52,400 ರೂ. ಹಾಗೂ ಹಿರಿಯ ಅಧಿಕಾರಿಗಳು ಸಹಿ ಮಾಡಲು 65,900 ರೂ. ಜತೆಗೆ ಜಿಎಸ್‌ಟಿ ಶುಲ್ಕ 68, 642 ರೂ. ಎಂದು ವಿವಿಧ ಹಂತಗಳಲ್ಲಿ, ವಿವಿಧ ಕಾರಣ ಹೇಳಿ ಒಟ್ಟು 7,19,630 ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ.
ಆದರೆ, ಉದ್ಯೋಗವನ್ನು ನೀಡದೆ, ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಇಂದ್ರಜಿತ್ ಹಿರಾಲಾಲ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರೀತಿ, ರಾಧಿಕಾ, ಕೀರ್ತಿ, ಕಾರ್ತಿಕ್, ಭಾರತಿ, ಅನಿಲ್‌ಕುಮಾರ್ ರಾಯ್ ಎಂಬುವವರ ವಿರುದ್ಧ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಯಾವುದಕ್ಕೆ ಎಷ್ಟು ಹಣ
-ಪರಿಶೀಲನಾ ಶುಲ್ಕ 6400 ರೂ.
-ಉದ್ಯೋಗ ಖಾತ್ರಿ ಶುಲ್ಕ 11,700 ರೂ.
-ಗುರುತಿನ ಚೀಟಿ ಚಾಲನೆಯಲ್ಲಿಡಲು 43,650 ರೂ.
-ಸಂದರ್ಶನ ಶುಲ್ಕ 52,400 ರೂ.
-ಹಿರಿಯ ಅಧಿಕಾರಿಗಳು ಸಹಿಗೆ 65,900 ರೂ.
-ಜಿಎಸ್‌ಟಿ ಶುಲ್ಕ 68, 642 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.