Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Team Udayavani, Sep 19, 2024, 11:28 AM IST
ಬೆಂಗಳೂರು: ಪ್ರೀತಿಸುತ್ತಿದ್ದ ಯುವತಿಗೆ ಮದುವೆ ಯಾಗುವಂತೆ ಪೀಡಿಸುತ್ತಿದಲ್ಲದೆ, ಪಾರ್ಕ್‌ಗೆ ಬರುವಂತೆ ಹೇಳಿ ಅಸಭ್ಯವಾಗಿ ನಡೆದುಕೊಂಡಿದ್ದ ಬಟ್ಟೆ ಅಂಗಡಿ ಮಾಲಿಕನಿಗೆ ಪ್ರಿಯಕರ ಚಾಕುವಿನಿಂದ ಇರಿದಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುದ್ದಗುಂಟೆಪಾಳ್ಯ ನಿವಾಸಿ ಹಿತೇಂದ್ರ ಕುಮಾರ್(58) ಚಾಕು ಇರಿತಕ್ಕೊಳಗಾದ ವ್ಯಾಪಾರಿ. ಕೃತ್ಯ ಎಸಗಿದ ಬೆಳಗಾವಿಯ ಸಿದ್ದು(28) ಮತ್ತು ಆತನ ಪ್ರೇಯಸಿ ಕಿರಣ ನಿಕ್ಕಂ (24) ಎಂಬುವರನ್ನು ಬಂಧಿಸಲಾಗಿದೆ. ಹಿತೇಂದ್ರ ಕುಮಾರ್ ಪ್ರಾಣಾಪಾ ಯದಿಂದ ಪಾರಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಿದ್ದು ಮತ್ತು ಕಿರಣ ಒಂದೇ ಊರಿನವರಾಗಿದ್ದು, ಐದಾರು ವರ್ಷ ಗಳಿಂದ ಪ್ರೀತಿಸುತ್ತಿದ್ದರು. ಜೂನ್‌ನಲ್ಲಿ ಬೆಂಗಳೂರಿಗೆ ಬಂದಿದ್ದು, ಸುದ್ದಗುಂಟೆಪಾಳ್ಯ ಸಮೀಪದ ತಾವರೆಕೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸಹ ಜೀವನ ನಡೆಸುತ್ತಿದ್ದರು. ಕಿರಣ, ಜಯನಗರದ 9ನೇ ಬ್ಲಾಕ್‌ಲ್ಲಿರುವ ಹಿತೇಂದ್ರ ಕುಮಾರ್ ಅವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಿದ್ದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ.
ಈ ಮಧ್ಯೆ ಹಿತೇಂದ್ರ ಕುಮಾರ್, ಕಿರಣಗೆ ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದ. ಅದರಿಂದ ಬೇಸರಗೊಂಡಿದ್ದ ಕಿರಣ ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದಳು. ಆದರೂ ಹಿತೇಂದ್ರ ಕುಮಾರ್ ಆಕೆಗೆ ಪ್ರೀತಿಯ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದ. ಅದರಿಂದ ಪ್ರೇರಿತಳಾದ ಕಿರಣ, ಹಿತೇಂದ್ರ ಕುಮಾರ್ ಪ್ರೀತಿಯನ್ನು ಒಪ್ಪಿಕೊಂಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾರ್ಕ್‌ಗೆ ಕರೆದು ಚಾಕು ಇರಿತ: ಈ ನಡುವೆ ಸೆ.14ರಂದು ಹಿತೇಂದ್ರ ಕುಮಾರ್, ಕಿರಣಗೆ ಕರೆ ಮಾಡಿ ಭೇಟಿ ಮಾಡುವಂತೆ ಕೇಳಿದ್ದಾನೆ. ಅದಕ್ಕೆ ಆಕೆ ಕೂಡ ಒಪ್ಪಿಕೊಂಡಿದ್ದು, ಅಂದು ರಾತ್ರಿ 9.30ರ ಸುಮಾರಿಗೆ ಕೆಇಬಿ ಪಾರ್ಕ್‌ನಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಈ ವೇಳೆ ಹಿತೇಂದ್ರ ಕುಮಾರ್, ಕಿರಣಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಅದಕ್ಕೆ ಕಿರಣ ಕೂಡ ಒಪ್ಪಿಕೊಡಿದ್ದಾಳೆ. ಕೆಲ ಹೊತ್ತು ಪಾರ್ಕ್‌ನಲ್ಲೇ ಸಮಯ ಕಳೆದು ಮನೆ ಹೋಗಿದ್ದಾರೆ.
ತಡರಾತ್ರಿ ಮನೆಗೆ ಹೋದ ಕಿರಣಗೆ, ಪ್ರಿಯಕರ ಸಿದ್ದು ಪ್ರಶ್ನಿಸಿದ್ದಾನೆ. ಆಗ ಕಿರಣ, ತನ್ನ ಮೊಬೈಲ್ ತೋರಿಸಿ ಹಿತೇಂದ್ರ ಕುಮಾರ್ ಪ್ರೀತಿಸುವಂತೆ, ಮದುವೆ ಆಗುವಂತೆ ಪೀಡಿಸುತ್ತಿದ್ದಾನೆ. ಆತನ ಭೇಟಿಗೆ ಪಾರ್ಕ್‌ಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾಳೆ. ಆಗ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ಉಂಟಾಗಿದೆ. ಅದರಿಂದ ಕೋಪಗೊಂಡ ಸಿದ್ದು, ಹಿತೇಂದ್ರ ಕುಮಾರ್ ಕೊಲೆಗೆ ಸಂಚು ರೂಪಿಸಿ, ತನ್ನ ಪ್ರೇಯಸಿಯಿಂದಲೇ ಹಿತೇಂದ್ರ ಕುಮಾರ್ ಸೆ.15ರಂದು ಬೆಳಗ್ಗೆ ಕರೆ ಮಾಡಿಸಿ, ಇಂದು ರಾತ್ರಿ ಕೆಇಬಿ ಪಾರ್ಕ್‌ಗೆ ಬರುವಂತೆ ಹೇಳಿಸಿದ್ದಾನೆ. ಅದರಂತೆ ರಾತ್ರಿ 10 ಗಂಟೆ ಸುಮಾರಿಗೆ ಹಿತೇಂದ್ರಕುಮಾರ್ ಪಾರ್ಕ್‌ಗೆ ಬಂದು ಕಲ್ಲಿನ ಬೆಂಚ್ ಮೇಲೆ ಕುಳಿತು, ಕಿರಣ ಜತೆ ಮಾತನಾಡುತ್ತಿದ್ದ.
ಮತ್ತೂಂದೆಡೆ ಮೊದಲೇ ಸಂಚು ರೂಪಿಸಿದಂತೆ ಕಿರಣ ಕುಳಿತಿದ್ದ ಕಲ್ಲಿನ ಬೆಂಚ್ ಹಿಂಭಾಗದಲ್ಲೇ ಸಿದ್ದು ಚಾಕು ಹಿಡಿದು ಅವಿತುಕೊಂಡಿದ್ದ. ಹಿತೇಂದ್ರ ಕುಮಾರ್, ಕಿರಣ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆ ಆತನ ಕುತ್ತಿಗೆ, ಬೆನ್ನು ಹಾಗೂ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಬಳಿಕ ಪ್ರೇಯಸಿ ಜತೆ ಸ್ಥಳದಿಂದ ಪರಾರಿಯಾಗಿದ್ದ.
ನಂತರ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡ ಹಿತೇಂದ್ರ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಸೆ.16ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡು ಪ್ರೇಮಿಗಳ ಬಂಧಿಸಲಾಗಿದೆ. ಹಿತೇಂದ್ರಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.