ವಿಮರ್ಶ ಪ್ರಶಸ್ತಿಗೆ ದೇಣಿಗೆ ನೀಡಿದ ಎಲ್‌ಎಸ್‌ಎಸ್
Team Udayavani, Feb 6, 2017, 11:49 AM IST
ಬೆಂಗಳೂರು: ಸಾಹಿತ್ಯ ವಿಮರ್ಶಕರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಹಿರಿಯ ಸಾಹಿತಿ ಹಾಗೂ ವಿಮರ್ಶಕ ಪ್ರೊ.ಎಲ್.ಎಲ್.ಶೇಷಗಿರಿರಾವ್ ಅವರು ಬಿಎಂಶ್ರೀ ಪ್ರತಿಷ್ಠಾನದಲ್ಲಿ ತಮ್ಮ ಹೆಸರಿನ ವಿಮರ್ಶ ಪ್ರಶಸ್ತಿಗಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೆ, ಈ ವರ್ಷದಿಂದಲೇ ಪ್ರಶಸ್ತಿ ಆರಂಭಿಸುವಂತೆ ಪ್ರತಿಷ್ಠಾನವನ್ನು ಕೋರಿದ ಎಲ್‌ಎಸ್‌ಎಸ್ ಅವರು ಅದಕ್ಕಾಗಿ 10 ಸಾವಿರ ರೂ. ಹೆಚ್ಚುವರಿ ಮೊತ್ತವನ್ನೂ ಹಸ್ತಾಂತರಿಸಿದರು.
ಕನ್ನಡ ಗೆಳೆಯರ ಬಳಗವು ಜೆ.ಪಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ 93ರ ಹರೆಯದ ಎಲ್‌ಎಸ್‌ಎಸ್, ವಿಮರ್ಶ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಎಂಶ್ರೀ ಪ್ರತಿಷ್ಠಾನದಲ್ಲಿ “ಎಲ್‌ಎಸ್‌ಎಸ್ ವಿಮರ್ಶ ಪ್ರಶಸ್ತಿ’ ಆರಂಭಿಸುತ್ತಿರುವುದಾಗಿ ಹೇಳಿ ಅದಕ್ಕೆ ತಮ್ಮಿಂದಲೇ ಎರಡು ಲಕ್ಷ ರೂ. ಪ್ರಕಟಿಸಿದರು.
ಎಲ್‌ಎಸ್‌ಎಸ್ ಅವರು ಬರೆದಿರುವ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ ವಿದ್ವಾಂಸ ಡಾ.ಪಿ.ವಿ.ನಾರಾಯಣ, ಹಿರಿಯ ವಿಮರ್ಶಕರಾದ ಎಲ್‌ಎಸ್‌ಎಸ್ ಓದುಗರಲ್ಲಿ ಸಾಹಿತ್ಯದ ಆಸಕ್ತಿಯನ್ನು ಹೆಚ್ಚಿಸುವಂತೆ ಸರಳ ಭಾಷೆಯಲ್ಲಿ ಮತ್ತು ಪರಿಣಾಮಕಾರಿಯಾಗಿ ಬರೆಯುವ ಅಪರೂಪದ ಪ್ರತಿಭಾವಂತ ಎಂದು ಬಣ್ಣಿಸಿದರು.
ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಪ್ರಸಿದ್ಧ ಕವಿ ಷೇಕ್ಸ್‌ಪಿಯರ್ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ ಆ ಕುರಿತ ಮಾಹಿತಿಯನ್ನು ಮುಂದಿನ ತಲೆಮಾರಿಗೂ ತಿಳಿಸುವಂತೆ ಮಾಡಿದ ಕೆಲವೇ ಪ್ರತಿಭಾವಂತರಲ್ಲಿ ಶೇಷಗಿರಿರಾಯರು ಕೂಡ ಒಬ್ಬರು ಎಂದು ಹೇಳಿದರು.
ಈ ವೇಳೆ ಎಲ್ಲೆಸ್ಸೆಸ್ ಅವರ “ನಾಟಕ ರತ್ನಗಳು’, “ಷೇಕ್ಸ್‌ಪಿಯರ್‌ನ ಸಮಗ್ರ ನಾಟಕ ಕತೆಗಳು’ ಮತ್ತು “ಕಾದಂಬರಿ ರತ್ನಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಅಭಿನವ ಪ್ರಕಾಶನ, ವಸಂತ ಪ್ರಕಾಶನ ಮತ್ತು ಸಪ್ನ ಪುಸ್ತಕ ಮಳಿಗೆಗಳು ಕ್ರಮವಾಗಿ ಈ ಪುಸ್ತಕಗಳನ್ನು ಪ್ರಕಟಿಸಿವೆ. ಕಾರ್ಯಕ್ರಮದಲ್ಲಿ ಭಾರತಿ ಶೇಷಗಿರಿರಾವ್, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಕವಿ ಎಚ್.ಎಸ್.ವೆಂಕಟೇಶಮೂರ್ತಿ, ಡಾ.ಜಿ.ರಾಮಕೃಷ್ಣ, ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಖರ್ ಮತ್ತಿತರರು ಇದ್ದರು.
ಇನ್ನೊಂದೇ ಪುಸ್ತಕ ಪ್ರಕಟಿಸುವೆ
ನನಗೀಗ 93ರ ಹರೆಯ. ಈಗ ಮೂರು ಪುಸ್ತಕಗಳನ್ನು ಕೊಟ್ಟಿದ್ದೇನೆ. ಇನ್ನು ಸುಮಾರು ಒಂದು ಸಾವಿರ ಪುಟಗಳ ಸಮಗ್ರ ವಿಮರ್ಶ ಕೃತಿಯೊಂದನ್ನು ಸಿದ್ಧಪಡಿಸಿ ಸಮಗ್ರ ಸಾಹಿತ್ಯ ಸಂಪುಟದಲ್ಲಿ ಬಿಡುಗಡೆ ಮಾಡುತ್ತೇನೆ. ಅದು ನನ್ನ ಕೊನೆಯ ಕೃತಿಯಾಗಿರುತ್ತದೆ.
-ಎಲ್.ಎಸ್.ಶೇಷಗಿರಿರಾವ್, ಹಿರಿಯ ವಿಮರ್ಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.