ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌


Team Udayavani, Dec 6, 2021, 12:46 PM IST

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ರಿಯಲ್‌ ಎಸ್ಟೇಟ್‌ ಸಮಸ್ಯೆ, ಹಣ ಸುಲಿಗೆ, ರಸ್ತೆ ಗುಂಡಿಗಳು, ಪುಂಡರ ಹಾವಳಿ, ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ, ಪಾರ್ಕಿಂಗ್‌ ಸಮಸ್ಯೆ, ಪೊಲೀಸರನಿರ್ಲಕ್ಷ್ಯ ಹೀಗೆ ನಗರದಲ್ಲಿ ಸಾವಿರಾರು ಸಮಸ್ಯೆಗಳಿವೆ. ಅಂಥ ಸಮಸ್ಯೆಗಳಿಗೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರ ಕನಸಿನ ಕೂಸು “ಮಾಸಿಕ ಜನಸಂಪರ್ಕ್‌ ದಿವಸ್‌’ “ಸಂಚಾರಸಂಪರ್ಕ್‌ ದಿವಸ್‌’ “ಟ್ವಿಟರ್‌ ಮತ್ತು ಫೇಸ್‌ಬುಕ್‌ಲೈವ್‌’ ವೇದಿಕೆ ಪರಿಹಾರ ಕಲ್ಪಿಸಿಕೊಟ್ಟಿದೆ. ಈ ಬಗ್ಗೆ ಸುದ್ದಿ ಸುತ್ತಾಟದಲ್ಲಿ ಒಂದು ನೋಟ.

“ಮಾಸಿಕ ಜನಸಂಪರ್ಕ್‌ ದಿವಸ್‌’, “ಸಂಚಾರ ಸಂಪರ್ಕ್‌ ದಿವಸ್‌’, “ಟ್ವಿಟರ್‌ ಮತ್ತು ಫೇಸ್‌ಬುಕ್‌ ಲೈವ್‌’ ಅಂಥ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕಉತ್ತಮ ಸ್ಪಂದನೆ ದೊರೆಯುತ್ತಿದ್ದು, ಎಲ್ಲ ವರ್ಗದ ಸಾರ್ವಜನಿಕರು ಮುಕ್ತವಾಗಿಸಂವಾದ ಅಥವಾ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ವಾರದ ಪ್ರತಿ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಆಯ್ದ ಠಾಣೆಗಳಲ್ಲಿ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌, ಹೆಚ್ಚುವರಿ ಪೊಲೀಸ್‌ ಆಯುಕ್ತರು, ಡಿಸಿಪಿಗಳು ಪ್ರತ್ಯೇಕವಾಗಿ ಸಾರ್ವಜನಿಕ ಸಭೆ ನಡೆಸುತ್ತಾರೆ.

ಇಂಥದೊಂದು ವೇದಿಕೆ ಕಲ್ಪಿಸದಿದ್ದರೆ ನಗರದ ಅದೆಷ್ಟೋ ಸಮಸ್ಯೆಗಳು ಹಾಗೇ ಕಣ್ಮರೆಯಾಗುತ್ತಿದ್ದವೇನೋ? ಈ ವೇದಿಕೆ ಮೂಲಕ ನೂರಾರು ಸಾರ್ವಜನಿಕರು ತಮ್ಮ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ. ಪೊಲೀಸರ ಮೂಲಕ ಸಂಬಂಧಿಸಿದ ಇಲಾಖೆಗೆ ಬಿಸಿ ಮುಟ್ಟಿಸಿದ್ದಾರೆ. ಕೇವಲ ಪೊಲೀಸರಿಂದಲೇ ಸಮಸ್ಯೆ ಇರಲ್ಲ. ಸಾಮಾನ್ಯವಾಗಿಪೊಲೀಸ್‌ ಇಲಾಖೆ ಹೊರತು ಪಡಿಸಿ ಬೇರೆ ಯಾವುದೇ ಇಲಾಖೆಅಧಿಕಾರಿಗಳು ಸಾರ್ವಜನಿಕರಿಗೆ ಸಿಗುವುದಿಲ್ಲ. ಈ ಮೊದಲು ಸಾರ್ವಜನಿಕರೇ ಪೊಲೀಸರ ಬಳಿ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಇದೀಗ ಈ ಕಾರ್ಯಕ್ರಮದ ಮೂಲಕ ಪೊಲೀಸರೇ ಸಾರ್ವಜನಿಕರ ಬಳಿ ಹೋಗಿ ಸಮಸ್ಯೆ ಆಲಿಸಿ, ಪರಿಹಾರ ಸೂಚಿಸುತ್ತಿದ್ದಾರೆ.

ಈ ರೀತಿಯ ಸಭೆಯಲ್ಲಿ ಸಾರ್ವಜನಿಕ ಸಮಸ್ಯೆ ಮಾತ್ರವಲ್ಲ, ಕಿರಿಯ ಪೊಲೀಸ್‌ ಅಧಿಕಾರಿ-ಸಿಬ್ಬಂದಿ ಕರ್ತವ್ಯ ಲೋಪಗಳ ನೇರ ಆರೋಪಕ್ಕೂ ಮುಕ್ತ ಅವಕಾಶವಿದೆ. ಸಾರ್ವಜನಿಕರ ಬಹುತೇಕ ದೂರುಗಳಿಗೆ ಸ್ಥಳದಲ್ಲೇ ಉತ್ತರ ನೀಡಲಾಗುತ್ತಿದೆ. ಪರಿಹಾರ ಕೂಡ ಸೂಚಿಸಲಾಗುತ್ತಿದೆ. ಸುಮಾರು 10 ತಿಂಗಳಿಂದ ಪ್ರತಿ ಶನಿವಾರ ಆನ್‌ಲೈನ್‌ ಅಥವಾ ನೇರವಾಗಿಪೊಲೀಸ್‌ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳು ಸಾರ್ವಜನಿಕರ ಮುಂದೆ ಹೋಗುತ್ತಿದ್ದೇವೆ. ಈ ರೀತಿಯ ಸಭೆ ನಡೆಸುವುದರಿಂದ ನಮಗೇ ಗೊತ್ತಿಲ್ಲದಎಷ್ಟು ವಿಚಾರಗಳು ಪ್ರಸ್ತಾಪವಾಗುತ್ತವೆ. ಜತೆಗೆ ಪಾರ್ಕಿಂಗ್‌ ಸಮಸ್ಯೆ, ಸಿಗ್ನಲ್‌ಲೈಟ್‌, ಶಬ್ಧ ಮಾಲಿನ್ಯ, ರಸ್ತೆ ಗುಂಡಿಗಳು, ರೌಡಿ, ಪುಂಡರ ಹಾವಳಿ, ಪ್ರಕರಣಗಳ ಇತ್ಯರ್ಥ ಪಡಿಸದಿರುವುದು.

 

ರಿಯಲ್‌ ಎಸ್ಟೇಟ್‌ ಏಜೆಂಟರ್‌ ಜತೆ ಪೊಲೀಸ್‌ ಅಧಿಕಾರಿಗಳ ಶಾಮೀಲು, ಕರ್ತವ್ಯ ಲೋಪ, ಬೀದಿ ದೀಪಗಳ ಸಮಸ್ಯೆ, ಸರ ಕಳ್ಳತನ, ಮಾದಕವಸ್ತು ದಂಧೆ, ಮಹಿಳೆ-ಮಕ್ಕಳಭದ್ರತೆ, ವೈಯಕ್ತಿಕ ಸಮಸ್ಯೆಗಳು, ಪ್ರಸ್ತುತ ಕೊರೊನಾನಿಯಮಾವಳಿಗಳ ಬಗ್ಗೆಯೂಪೊಲೀಸರ ಬಳಿ ಹೇಳಿಕೊಳ್ಳುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದೇವೆ. ಬೇರೆ ಇಲಾಖೆ ಸಮಸ್ಯೆಯನ್ನು ಆಯಾ ಇಲಾಖೆಗೆ ಪತ್ರ ಮೂಲಕ ಪರಿಹಾರಕ್ಕೆ ಸಲಹೆ ನೀಡುತ್ತೇವೆ ಎನ್ನುತ್ತಾರೆ ಸಭೆಯಲ್ಲಿಪಾಲ್ಗೊಳ್ಳುವ ಹಿರಿಯ ಅಧಿಕಾರಿಯೊಬ್ಬರು.

ಸ್ಥಳೀಯ ಸಂಸ್ಥೆಗಳ ನೆರವು ಶೂನ್ಯ: ಪೊಲೀಸ್‌ ಇಲಾಖೆ ಹೊರತು ಪಡಿಸಿ ಬೇರೆ ಇಲಾಖೆ ಸಮಸ್ಯೆಗೆ ಪತ್ರ ಮೂಲಕ

ಸಲಹೆ ನೀಡಲಾಗುತ್ತಿದೆ. ಮತ್ತೂಂದೆಡೆ ಜಂಟಿ ಪರಿಹಾರಕ್ಕೂ ಸ್ಥಳೀಯ ಸಂಸ್ಥೆಗಳ ನೆರವು ಸಿಗುವುದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ, ಬೆಸ್ಕಾಂ, ಬಿಬಿಎಂಪಿ, ಕೊಳಚೆ ಮಂಡಳಿ ಸ್ಪಂದಿಸಿದರೆ ಸಾಕಷ್ಟು ಸಮಸ್ಯೆಗಳು ಸ್ಥಳದಲ್ಲೇ ಪರಿಹಾರ ಕೊಡಿಸಬಹುದು. ಆದರೆ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಪೊಲೀಸರನ್ನೇ ಪೇಚಿಗೆ ಸಿಲುಕಿಸುತ್ತವೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಗಂಭೀರ ವಿಚಾರ ಚರ್ಚೆ:

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್‌ಸ್ಟ್ರಾಗ್ರಾಂನಲ್ಲೂ (ಬೆಂಗಳೂರು ಸಿಟಿ ಪೊಲೀಸ್‌) ಬೆಂಗಳೂರು ಪೊಲೀಸರು ಸಕ್ರಿಯವಾಗಿದ್ದು, ಅವುಗಳ ನಿರ್ವಹಣೆಗೆಂದೆ ಒಂದು ಪ್ರತ್ಯೇಕ ವಿಭಾಗವಿದೆ. ಸಾರ್ವಜನಿಕರು ಅಲ್ಲಿಯೂ ದೂರುಗಳನ್ನು ನೀಡಬಹುದು. ಅದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧಕಾನೂನು ಕ್ರಮಕೈಗೊಳ್ಳಲಾಗುತ್ತದೆ.ಕಮಲ್‌ಪಂತ್‌ ಅವರು ಪೊಲೀಸ್‌ ಆಯುಕ್ತರಾಗಿಬಂದ ನಂತರ ಪ್ರತಿ 15 ದಿನಕ್ಕೊಮ್ಮೆ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಲೈವ್‌ ಕಾರ್ಯಕ್ರಮ ಹಮ್ಮಿಕೊಂಡು, ಅಲ್ಲಿಯೂ ಸಾರ್ವಜನಿಕರ ನೇರ ಪ್ರಶ್ನೆಗೆ ಉತ್ತರಿಸುತ್ತಾರೆ.

ಫೇಸ್‌ಬುಕ್‌, ಟ್ವಿಟರ್‌ ಸಂವಾದದಲ್ಲಿ ಹೈ-ಫೈ ಅಥವಾ ಹೆಚ್ಚು ಜ್ಞಾನ ಹೊಂದಿದವರು ಪಾಲ್ಗೊಳ್ಳುತ್ತಾರೆ. ಜತೆಗೆಅಷ್ಟೇ ಆಕ್ರಮಣಕಾರಿಗಳಾಗಿರುತ್ತಾರೆ. ಈ ವೇದಿಕೆಯಲ್ಲಿಗಂಭೀರ ವಿಚಾರಗಳು ಚರ್ಚೆ ಆಗುತ್ತವೆ. ಆದರೆ, ಜನರಅಪೇಕ್ಷೆಯೇ ಬೇರೆ, ಅವರ ವರ್ತನೆಗಳೇ ಬೇರೆ ಆಗಿರುತ್ತದೆ ಎಂದು ಸಾಮಾಜಿಕ ಜಾಲತಾಣ ನಿರ್ವಹಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚಿಸಿದರೆ ಉತ್ತಮ: ಠಾಣಾ ಮಟ್ಟದಲ್ಲಿ ನಡೆಯುವ ಕೆಲವೊಂದು ವಿಚಾರಗಳು ಪೊಲೀಸ್‌ ಆಯುಕ್ತರ ಗಮನಕ್ಕೆ ಬರುವುದಿಲ್ಲ. ಹೀಗಾಗಿಪೊಲೀಸ್‌ ಆಯುಕ್ತರ ಆನ್‌ಲೈನ್‌ ಮತ್ತು ಜನ ಸಂಪರ್ಕ ದಿವಸ್‌ ಉತ್ತಮ ವೇದಿಕೆಯಾಗಿದೆ. ಬೇರೆ ಇಲಾಖೆಗಿಂತ ಪೊಲೀಸರಿಗೆ ನೆಟ್‌ವರ್ಕ್‌ ಜಾಸ್ತಿ ಇರುತ್ತದೆ. ಪ್ರತಿಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಉತ್ತಮ ವಿಚಾರಗಳಚರ್ಚೆಯಾಗುತ್ತವೆ. ಸ್ಥಳೀಯ ಪೊಲೀಸರ ಕಾರ್ಯವೈಖರಿ ಏನು ಎಂಬುದು ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳಿಗೆ ಮನದಟ್ಟಾಗುತ್ತದೆ ಎನ್ನುತ್ತಾರೆ ನಮ್ಮ ಬೆಂಗಳೂರು ಫೌಂಡೇಶನ್‌ನ ವಿನೋದ್‌ ಜೆಕಬ್‌.

ಜನಸಂಪರ್ಕ ದಿವಸ್‌ ಕಾರ್ಯಕ್ರಮ ಠಾಣಾ ಮಟ್ಟದಲ್ಲಿ ಮಾತ್ರವಲ್ಲದೆ, ವಿಭಾಗ ಅಥವಾ ವಲಯ ಮಟ್ಟದಲ್ಲಿ ಮಾಡಿದರೆ ಚೆನ್ನಾಗಿರುತ್ತದೆ.ಆಗ ಠಾಣೆಗಳಲ್ಲಿ ಬಾಕಿ ಉಳಿದಿರುವಪ್ರಕರಣಗಳು, ಬಡವರು,ಮಧ್ಯಮ ವರ್ಗದ ಜನರ ಪ್ರಕರಣಗಳು ಯಾವ ಹಂತದಲ್ಲಿದೆ? ಸುರಕ್ಷತೆ, ಬೀಟ್‌ ಪೊಲೀಸ್‌ ಇದ್ದಾರಾ? ಸಂಚಾರ ಸಮಸ್ಯೆ, ಬಸ್‌ನಿಲ್ದಾಣ ಇದೆಯೇ? ಇಲ್ಲವೇ?ಬೇರೆ ಸಮಸ್ಯೆಗಳ ಬಗ್ಗೆ ಆಲಿಸಬಹುದು. ಶಾಲಾ-ಕಾಲೇಜಿನ 300 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಮದ್ಯ ಮತ್ತು ಸಿಗರೇಟ್‌ ಅಂಗಡಿ ತೆರೆ ಯಬಾರದು ಎಂಬ ನಿಯಮವಿದೆ. ಆದರೆ,ಕೆಲವೆಡೆ ನಿಯಮ ಪಾಲಿಸುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳ ಬೇಕಿದೆ ಎನ್ನುತ್ತಾರೆ. ಇದರೊಂದಿಗೆ ಬಿಬಿಎಂಪಿ ಅಧಿಕಾರಿಗಳ ಜತೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದರೆ, ಬಸ್‌ನಿಲ್ದಾಣ, ಕುಡಿಯು ನೀರು, ರಸ್ತೆ, ವಿದ್ಯುತ್‌ ದೀಪಗಳ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಹಾಗೂ ನಾಗರೀಕ ಸಮಸ್ಯೆಗಳ ಕುರಿತು ಚರ್ಚಿಸಬಹುದು ಎಂದು ವಿನೋದ್‌ ಜೆಕಬ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಠಾಣಾ ಮಟ್ಟದಲ್ಲಿ ಸಮಸ್ಯೆ ಆಲಿಸಿ:  ಆನ್‌ಲೈನ್‌ನಲ್ಲಿ ಪಿಐ, ಎಸಿಪಿ ಭಾಗಿಯಾಗಲು ತಾಂತ್ರಿಕ ಸಮಸ್ಯೆಪ್ರತಿ ಠಾಣಾಧಿಕಾರಿ, ಎಸಿಪಿಗಳು ಠಾಣಾ ಮಟ್ಟದಲ್ಲಿ ಸಾರ್ವಜನಿಕ ಸಮಸ್ಯೆ ಆಲಿಸಲು ಸೂಚಿಸಲಾಗಿದೆ. ಅದರ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಆದರೆ, ಆನ್‌ಲೈನ್‌ ಮೂಲಕ ಪರಿಹಾರ ಸೂಚಿಸಲು ತಾಂತ್ರಿಕ ಸಮಸ್ಯೆ ಜತೆಗೆ ವ್ಯಾಪ್ತಿ ಸಮಸ್ಯೆ ಕೂಡ ಇದೆ. ಈ ಬಗ್ಗೆ ಹಿಂದೆ ಸಾಕಷ್ಟು ಬಾರಿ ಚರ್ಚಿಸಲಾಗಿತ್ತು. ಆದರೆ, ವ್ಯಾಪ್ತಿ ಮೀರಿ ಯಾವುದೇ ಅಧಿಕಾರಿ ಉತ್ತರ ನೀಡಲು ಅವಕಾಶವಿಲ್ಲ. ಒಂದು ವೇಳೆ ಉತ್ತರಿಸಿದರೆ, ಅದು ರೆಕಾರ್ಡ್‌ ಆಗುತ್ತದೆ. ಹೀಗಾಗಿ ಠಾಣಾ ಮಟ್ಟದಲ್ಲಿ ಸಭೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

2 ದಿನ ಮೊದಲೇ ಸಭೆ ಮಾಹಿತಿ:

ಮಾಸಿಕ ಜನಸಂಪರ್ಕ ದಿವಸ, ಸಂಚಾರ ಸಂಪರ್ಕ ದಿವಸ ಮತ್ತು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಆನ್‌ಲೈನ್‌ ಸಭೆ, ಸಂವಾದ ಪ್ರತಿ ಶನಿವಾರ ನಡೆಯಲಿದೆ. ಮಾಸಿಕ ಜನಸಂಪರ್ಕ ದಿವಸ ಮತ್ತು ಸಂಪರ್ಕ ದಿವಸ ಆಯ್ದ ಪೊಲೀಸ್‌ ಠಾಣೆಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ನಡೆಯಲಿದೆ. ಫೇಸ್‌ಬುಕ್‌ (https://www.facebook.com/BlrCityPolice) ನಲ್ಲಿ ಮತ್ತು ಟ್ವಿಟರ್‌ನಲ್ಲಿ BengaluruCityPolice @BlrCityPolice ಅಥವಾ https://twitter.com/CPBlr  ನಿಗದಿತ ದಿನಾಂಕ ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 12ಗಂಟೆವರೆಗೂ ಸಿಗುತ್ತಾರೆ. ಸಾರ್ವಜನಿಕ ಸಭೆ ಮತ್ತು ಆನ್‌ಲೈನ್‌ ಸಂವಾದ ದಿನಾಂಕ ಹಾಗೂ ಸಮಯವನ್ನು ಎರಡು ದಿನದ ಮೊದಲು ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಪ್ರಕಟಿಸಲಾಗುತ್ತ¨

ಕೊಳೆಗೇರಿಯಲ್ಲಿ ಸಭೆಗೆ ಆಗ್ರಹ :

ನೇರವಾಗಿ ಸಾರ್ವಜನಿಕರ ಮುಂದೆ ಹೋಗುವುದರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಂಘ-ಸಂಸ್ಥೆಗಳ ಸದಸ್ಯರು, ಕೆಲವೊಂದು ವರ್ಗದ ಜನರಷ್ಟೇ ಸಭೆಗಳಲ್ಲಿ ಭಾಗಿಯಾಗುತ್ತಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಪಾಲ್ಗೊಳ್ಳಬೇಕಾದರೆ, ಇಂತಹ ಸಭೆಗಳನ್ನು ಪ್ರತಿ ರಸ್ತೆ ಮತ್ತು ಕೊಳೆಗೇರಿಗಳಲ್ಲಿಮಾಡಬೇಕು ಎಂದು ಕೆಲ ವರ್ಗದ ಜನಆಗ್ರಹಿಸುತ್ತಿದ್ದಾರೆ. ಆದರೆ, ಕೆಲವೊಂದು ತಾಂತ್ರಿಕ ಸಮಸ್ಯೆಗಳಿರುವುದರಿಂದ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ವಿವರಿಸಿದರು.

ಪೊಲೀಸ್‌ ಇಲಾಖೆಯಲ್ಲಿಯೇ ಮೊದಲು :

ಅಪರಾಧ ತಡೆ ಮಾಸಾಚರಣೆ ಹೀಗೆ ಆಗೊಮ್ಮೆ ಹೀಗೊಮ್ಮೆ ಸಾರ್ವಜನಿಕರ ಮುಂದೆ ಪೊಲೀಸರು ಹೋಗುತ್ತಿದ್ದರು. ಆದರೆ, ಪ್ರತಿವಾರ ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಸ್ಪಂದಿಸುತ್ತಿರುವ ಏಕೈಕಕಾರ್ಯಕ್ರಮ ಜನಸಂಪರ್ಕ ದಿವಸ್‌. ಹೀಗಾಗಿ ಇದು ರಾಜ್ಯ ಪೊಲೀಸ್‌ ಇಲಾಖೆಯಲ್ಲಿಯೇ ವಿನೂತನ ಕಾರ್ಯಕ್ರಮ.

ಜನಸಂಪರ್ಕ ದಿವಸ್‌ ಕಾರ್ಯಕ್ರಮದಲ್ಲಿ ನಾನು ಮಾತ್ರ ಭಾಗಿಯಾಗುತ್ತಿಲ್ಲ. ಆಯ್ದ ಶನಿವಾರ ಹೆಚ್ಚುವರಿ ಪೊಲೀಸ್‌ ಆಯುಕ್ತರು, ಡಿಸಿಪಿಗಳು ತಮ್ಮ ವ್ಯಾಪ್ತಿಯ ಠಾಣೆಗಳನ್ನು ಆಯ್ಕೆಮಾಡಿಕೊಂಡು ಸಭೆ ನಡೆಸಿ ಅದರ ವರದಿಯನ್ನು ನೀಡುತ್ತಿದ್ದಾರೆ. ಆದರೆ, ಆನ್‌ಲೈನ್‌ ಸಂವಾದವನ್ನು ಮುಂದಿನ ದಿನಗಳಲ್ಲಿ ಡಿಸಿಪಿ ಮಟ್ಟದಲ್ಲೂ ಮಾಡಲು ಚಿಂತಿಸಲಾಗಿದೆ. – ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

-ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-cm

Waqf: ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.