ಕೃಷಿಯ ಜತೆ ಜೀವನ ಕ್ರಮವನ್ನೂ ಬದಲಿಸಿದ ಯಂತ್ರೋಪಕರಣಗಳು


Team Udayavani, Nov 18, 2018, 12:26 PM IST

krushiya.jpg

ಬೆಂಗಳೂರು: ಯಂತ್ರೋಪಕರಣಗಳು ಕೃಷಿ ಪದ್ಧತಿಯನ್ನು ಮಾತ್ರವಲ್ಲ; ರೈತರ ಲೈಫ್ಸ್ಟೈಲ್‌ನಲ್ಲೂ ಬದಲಾವಣೆ ತರುತ್ತಿವೆ. ಇದು ರೈತರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆಯೇ? ಕೃಷಿ ಮೇಳದಲ್ಲಿ ತೆರೆಯಲಾದ ಉಚಿತ ಆರೋಗ್ಯ ತಪಾಸಣಾ ಮಳಿಗೆಯಲ್ಲಿ ಕಂಡು ಬರುತ್ತಿರುವ ಮಧುಮೇಹ ಪ್ರಕರಣಗಳು ಇಂತಹದ್ದೊಂದು ಅನುಮಾನ ಹುಟ್ಟುಹಾಕಿದೆ. 

“ಮೇಳದಲ್ಲಿ ಕಳೆದ 3 ದಿನಗಳಲ್ಲಿ ಸುಮಾರು 733ಕ್ಕೂ ಅಧಿಕ ಜನ ರಕ್ತದೊತ್ತಡ, ಮಧುಮೇಹ ಸೇರಿದಂತೆ ಆರೋಗ್ಯ ತಪಾಸಣೆಗೊಳಪಟ್ಟಿದ್ದಾರೆ. ಅವರಲ್ಲಿ ಅಂದಾಜು ಶೇ.20ರಷ್ಟು ಜನರಲ್ಲಿ ಹೊಸದಾಗಿ ಮಧುಮೇಹ ಇರುವುದು ಕಂಡುಬಂದಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ಆಗಿದ್ದಾರೆ. “ನಮಗೆ ಮಧುಮೇಹ ಇರಲಿಲ್ಲ. ಇವತ್ತೇ ಗೊತ್ತಾಗಿದೆ’ ಎಂದು ಅವರೆಲ್ಲಾ ಅಚ್ಚರಿ ವ್ಯಕ್ತಪಡಿಸಿದರು. ಈ ಬೆಳವಣಿಗೆ ಸ್ವತಃ ನಮಗೂ ಅಚ್ಚರಿ ಮೂಡಿಸಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಅಶ್ವತ್ಥಮ್ಮ “ಉದಯವಾಣಿ’ಗೆ ತಿಳಿಸಿದರು. 

ಕಾರಣ ಏನಿರಬಹುದು?: ರೈತರು ಹೆಚ್ಚು ಶ್ರಮಜೀವಿಗಳು. ಹಗಲು-ರಾತ್ರಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಅಂತಹವರಲ್ಲೂ ಈ ಮಧುಮೇಹ ಹೆಚ್ಚಾಗಿ ಕಂಡುಬರುತ್ತಿರುವುದು ಏಕೆ ಎಂಬುದು ನಮಗೂ ಗೊತ್ತಾಗುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಟ್ರೆಂಡ್‌ ಬದಲಾಗಿದೆ. ಯಂತ್ರೋಪಕರಣಗಳು, ಆಳುಗಳ ಮೇಲಿನ ಅವಲಂಬನೆ ಹೆಚ್ಚಿದೆ. ಅಷ್ಟೇ ಅಲ್ಲ, ವಾಹನಗಳ ಬಳಕೆ ಕೂಡ ಅಧಿಕವಾಗಿದೆ.

ಈ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ; ನಿತ್ಯ ಕಾಲ್ನಡಿಗೆ ಅಥವಾ ಎತ್ತಿನ ಬಂಡಿಗಳಿದ್ದವು. ಇದರೊಂದಿಗೆ ಆಹಾರ ಪದ್ಧತಿಯೂ ಬದಲಾಗಿದೆ. ಇದೆಲ್ಲವೂ ಮಧುಮೇಹ ಹೆಚ್ಚಾಗಿ ಕಂಡುಬರಲು ಕಾರಣವಾಗಿರಬಹುದು ಎಂದು ಡಾ.ಅಶ್ವತ್ಥಮ್ಮ ಅಭಿಪ್ರಾಯಪಡುತ್ತಾರೆ. 

ಒಟ್ಟಾರೆ ರೈತ ಸಮೂಹಕ್ಕೆ ಇದು ಮಾನದಂಡ ಎಂದೂ ಹೇಳಲಿಕ್ಕಾಗದು. ಭಾರತ ಇಂದು ಮಧುಮೇಹಿಗಳ ರಾಜಧಾನಿಯಾಗಿ ಪರಿವರ್ತನೆಯಾಗಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ ಅಷ್ಟೇ. ಆದರೆ, ವಾಸ್ತವವಾಗಿ ಇದುವರೆಗೆ ದೇಶದಲ್ಲಿ ಮಧುಮೇಹಿ ರೈತರು ಹಾಗೂ ರೈತ ಮಹಿಳೆಯರ ಪ್ರತ್ಯೇಕ ಸಮೀಕ್ಷೆ ಅಥವಾ ಅಧ್ಯಯನ ನಡೆದಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ನಿಖರವಾಗಿ ಹೇಳುವುದೂ ಕಷ್ಟ ಎಂದೂ ಅವರು ಸ್ಪಷ್ಟಪಡಿಸಿದರು. 

ಆದರೆ, ಕೃಷಿಯಲ್ಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ವೆಚ್ಚ ಮತ್ತಿತರ ಕಾರಣಗಳಿಂದ ಯಂತ್ರಗಳ ಅವಲಂಬನೆ ಅನಿವಾರ್ಯ ಆಗುತ್ತಿದೆ. ಅಷ್ಟಕ್ಕೂ ಯಂತ್ರೋಪಕರಣಗಳು ರೈತರ ಕೈಹಿಡಿಯುತ್ತಿದ್ದು, ಲಾಭದತ್ತ ಕೊಂಡೊಯ್ಯುತ್ತಿವೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ಈ ಮಧ್ಯೆ ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಭೇಟಿ ನೀಡಿದವರ ಪೈಕಿ ಸುಮಾರು 40ಕ್ಕೂ ಹೆಚ್ಚು ಜನ ಖನ್ನತೆಯಿಂದ ಬಳಲುತ್ತಿರುವವರೂ ಇದ್ದಾರೆ.

ಅವರಲ್ಲಿ ಕೆಲವರು ರೈತರೂ ಆಗಿದ್ದಾರೆ. ಮದ್ಯಪಾನ ಮತ್ತು ಧೂಮಪಾನ ವ್ಯಸನದಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಅವರು ಸಮಾಲೋಚನಾ ಕೇಂದ್ರದಲ್ಲಿ ಸಲಹೆ ಪಡೆದಿದ್ದಾರೆ. ಈ ಪೈಕಿ ಬೆರಳೆಣಿಕೆಯಷ್ಟು ರೈತರು ಸಾಲದಿಂದ ಬೇಸತ್ತಿರುವುದಾಗಿಯೂ ಹೇಳಿದ್ದಾರೆ ಎಂದು ಸಮಾಲೋಚನಾ ಘಟಕದಲ್ಲಿದ್ದ ಪೀಪಲ್‌ ಟ್ರೀ ಮಾರ್ಗದ ಸಮಾಲೋಚಕಿಯೊಬ್ಬರು ತಿಳಿಸಿದರು. 

ಕೃಷಿಯತ್ತ ಟೆಕ್ಕಿಗಳ ಆಸಕ್ತಿ: ಸಾಫ್ಟ್ವೇರ್‌ ಕಂಪೆನಿ ಉದ್ಯೋಗಿಗಳು ಕೃಷಿ ಬಗ್ಗೆ ಆಸಕ್ತಿ ತೋರಿಸುತ್ತಿರುವುದೂ ಮೇಳದಲ್ಲಿ ಕಂಡುಬಂದಿದೆ. ಮೇಳದಲ್ಲಿ ಸಲಹಾ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಕಳೆದ ಮೂರು ದಿನಗಳಿಂದ ಸರಾಸರಿ 600-700 ಜನ ಭೇಟಿ ನೀಡಿ, ಸಲಹೆಗಳನ್ನು ಪಡೆದಿದ್ದಾರೆ. ಇದರಲ್ಲಿ ಶೇ. 5ರಷ್ಟು ಜನ ಟೆಕ್ಕಿಗಳೂ ಆಗಿದ್ದಾರೆ ಎಂದು ಸಲಹಾ ಕೇಂದ್ರದ ಮುಖ್ಯಸ್ಥ ಹಾಗೂ ಬೆಂಗಳೂರು ಕೃಷಿ ವಿವಿಯ ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಡಿ.ಇ. ಗಂಗಪ್ಪ ತಿಳಿಸಿದರು. 

ಟೆಕ್ಕಿಗಳು ಕುರಿ, ಕೋಳಿ ಸಾಕಾಣಿಕೆ ಲಾಭದಾಯಕವೇ? ತಮ್ಮಲ್ಲಿ ಜಮೀನು ಇದ್ದು, ಅದರಲ್ಲಿ ಏನು ಬೆಳೆದರೆ ಲಾಭದಾಯಕ ಆಗಬಹುದು? ಎಂಬ ಇತ್ಯಾದಿ ಮಾಹಿತಿ ಪಡೆದಿದ್ದಾರೆ. ಉಳಿದವರು ಬಹುತೇಕ ರೋಗಗಳ ಹತೋಟಿ, ಹೊಸ ತಳಿಗಳು, ತೋಟಗಾರಿಕೆಯಲ್ಲಿ ಹಣ್ಣಿನ ತಳಿಗಳ ಬಗ್ಗೆ ಹೆಚ್ಚಾಗಿ ಕೇಳುತ್ತಿರುವುದು ಕಂಡುಬಂದಿದೆ ಎಂದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.