ಮಡಿಕೇರಿ, ಸೇಲಂಗೂ ಫ್ಲೈ ಬಸ್ ಸೇವೆ
Team Udayavani, Jan 9, 2018, 12:31 PM IST
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್)ರಾಜ್ಯದ ವಿವಿಧ ನಗರಗಳಿಗೆ “ಫ್ಲೈ ಬಸ್’ ಸೇವೆ ಆರಂಭಿಸಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಅದನ್ನು ಈಗ ಮಡಿಕೇರಿ ಹಾಗೂ ತಮಿಳುನಾಡಿನ ಸೇಲಂಗೂ ವಿಸ್ತರಿಸಿದೆ.
ಮಡಿಕೇರಿ ಹಾಗೂ ಸೇಲಂಗೆ ನೂತನ ಫ್ಲೈ ಬಸ್ ಸೇವೆಗೆ ಸೋಮವಾರ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಐಎಎಲ್ ಸಹಾಯಕ ಉಪಾಧ್ಯಕ್ಷ ಎಚ್.ಆರ್. ವೆಂಕಟರಾಮನ್ ಮತ್ತಿತರರು ಉಪಸ್ಥಿತರಿದ್ದರು. ವಿಮಾನ ನಿಲ್ದಾಣದಿಂದ ನಿತ್ಯ ಮಡಿಕೇರಿಗೆ ಒಂದು ಮತ್ತು ಸೇಲಂಗೆ ಎರಡು ಬಸ್‌ಗಳು ಕಾರ್ಯಚರಣೆ ಮಾಡಲಿವೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿರುವ ಫ್ಲೈಬಸ್‌ನಲ್ಲಿ 48 ಆಸನಗಳಿವೆ. ಅಂದಾಜು 1.10 ಕೋಟಿ ರೂ. ಮೌಲ್ಯದ ಈ ಬಸ್‌ನಲ್ಲಿ ಶೌಚಾಲಯ ವ್ಯವಸ್ಥೆ ಇದೆ. ಕೆಎಐಎಲ್‌ನಿಂದ ಸೇಲಂಗೆ ತೆರಿಗೆ ಸಹಿತ ಒಬ್ಬರಿಗೆ 800 ರೂ. ಮತ್ತು ಮಡಿಕೇರಿಗೆ ಒಂದು ಸಾವಿರ ರೂ. ಪ್ರಯಾಣ ದರ ಇದೆ.
ಹೊಸ ಮಾರ್ಗದ ಆರಂಭದಿಂದಾಗಿ ಫ್ಲೈ ಬಸ್‌ಗಳ ಸಂಖ್ಯೆ 11ಕ್ಕೇರಿದೆ. ಕೆಐಎಎಲ್‌ನಿಂದ ಮೈಸೂರು ನಡುವೆ 6 ಮತ್ತು ಕುಂದಾಪುರಕ್ಕೆ 2 ಬಸ್‌ಗಳು ಸಂಚರಿಸುತ್ತಿವೆ. ಈಗ ಸೇಲಂಗೆ ಎರಡು ಮತ್ತು ಮಡಿಕೇರಿಗೆ 1 ಬಸ್ ಸೇವೆ ಆರಂಭವಾಗಿದೆ.
ಹೊಸ ಮಾರ್ಗದಲ್ಲಿ ಬಸ್‌ಗಳ ವೇಳಾಪಟ್ಟಿ
ಮಾರ್ಗ ನಿರ್ಗಮನ ತಲುಪುವ ಸಮಯ
ಕೆಐಎಎಲ್-ಸೇಲಂ 10.00 ಮತ್ತು 22.30 15.00 ಮತ್ತು 03.30
ಸೇಲಂ-ಕೆಐಎಎಲ್ 04.30 ಮತ್ತು 16.00 0930 ಮತ್ತು 2100
ಕೆಐಎಎಲ್-ಮಡಿಕೇರಿ 12.30 19.00
ಮಡಿಕೇರಿ-ಕೆಐಎಎಲ್ 23.30 06.00
ಮೈಸೂರು, ಕುಂದಾಪುರ ಮಾರ್ಗದ ಸೇವೆ ಕಾರ್ಯಚರಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೇಲಂ, ಮಡಿಕೇರಿಗೆ ಫಲೈ ಬಸ್ ಸೇವೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಿರುಪತಿ ಮತ್ತು ಕ್ಯಾಲಿಕಟ್‌ಗೂ ಸೇವೆ ಆರಂಭಿಸಲಾಗುವುದು. ಇನ್ನೂ 7 ಹೊಸ ಫ್ಲೈಬಸ್‌ಗಳ ಕಾರ್ಯಾಚರಣೆ ಆರಂಭಿಸುವ ಉದ್ದೇಶವಿದೆ.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.