Mahalakshmi Case: ಪ್ರಮುಖ ಆರೋಪಿಯನ್ನು ಪ.ಬಂಗಾಳದಲ್ಲಿ ಗುರುತಿಸಲಾಗಿದೆ ಎಂದ ಗೃಹ ಸಚಿವರು
Team Udayavani, Sep 23, 2024, 4:04 PM IST
ಬೆಂಗಳೂರು: ವೈಯಾಲಿಕಾವಲ್ ನ ವಿನಾಯಕನಗರದಲ್ಲಿ ಮಹಾಲಕ್ಷ್ಮೀ (Mahalakshmi Case) ಎಂಬಾಕೆಯನ್ನು ಕೊಂದು ಸುಮಾರು 50 ತುಂಡುಗಳನ್ನಾಗಿ ಮಾಡಿ, ಫ್ರಿಡ್ಜ್ ನಲ್ಲಿ ಇರಿಸಿದ ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ (West Bengal) ಪೊಲೀಸರು ಗುರುತಿಸಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಸೆ. 21 ರಂದು 29 ವರ್ಷದ ಮಹಾಲಕ್ಷ್ಮಿ ಅವರ ಮೃತದೇಹವು 50 ತುಂಡುಗಳಾಗಿ ಕತ್ತರಿಸಿ ಫ್ಲಾಟ್‌ನಲ್ಲಿ ಫ್ರಿಡ್ಜ್ ನಲ್ಲಿ ಇರಿಸಿದ್ದು ಪತ್ತೆಯಾಗಿತ್ತು.
“ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ಶಂಕಿತನಾಗಿರುವ ಬಗ್ಗೆ ಮಾಹಿತಿ ಇದೆ. ಅವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ” ಎಂದು ಪರಮೇಶ್ವರ ಹೇಳಿದರು.
ಯಾವುದೇ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, “ಇಲ್ಲ, ಶಂಕಿತರನ್ನು ವಿಚಾರಣೆ ಮಾಡಲಾಗುತ್ತಿದೆ” ಎಂದರು.
ದೇಹದ ಪೀಸ್ ಜೋಡಿಸೋದೇ ಸವಾಲು
50ಕ್ಕೂ ಹೆಚ್ಚು ತುಂಡಾಗಿರುವ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ 2 ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೊದಲು ತುಂಡು ತುಂಡಾದ ದೇಹವನ್ನು ರಿಅಸ್ಸೆಂಬಲ್ ಮಾಡಿಕೊಂಡು, ನಂಬರ್‌ಗಳನ್ನು ಕೊಡಲಾಗಿತ್ತು. ಮೃತದೇಹವನ್ನು ಯಾವ ಆಯುಧದಿಂದ ಕತ್ತರಿಸಲಾಯಿತು ಎಂದು ಪರೀಕ್ಷಿಸಲಾಯಿತು. ಇದು ಮಹತ್ತರವಾದ ಸಾಕ್ಷಿ ಆಗುತ್ತದೆ. ಮಹಿಳೆ ಸತ್ತ ನಂತರ ಆಕೆಯ ದೇಹವನ್ನು ಪೀಸ್ ಪೀಸ್ ಮಾಡಲಾಗಿತ್ತೆ, ಇಲ್ಲವೇ, ವಿಷಕಾರಿಯಾದ ವಸ್ತು ಕೆಟ್ಟು ಸಾಯುವುದಕ್ಕೂ ಮುಂಚೆಯೇ ಪೀಸ್ ಪೀಸ್ ಮಾಡಲಾಯಿತ್ತೆ ಎಂಬುದರ ಬಗ್ಗೆ ಪರೀಕ್ಷೆ ನಡೆಲಾಗಿದೆ. ತಲೆಗೆ ಹೊಡೆದು ಕೊಲೆ ಮಾಡಲಾಯಿತೆ, ಅಥವಾ ಡ್ರಗ್ಸ್, ಪಾಯಿಸನ್ ಕೊಟ್ಟು ಹತ್ಯೆ ಮಾಡಲಾಗಿತ್ತೇ ಎಂಬುದನ್ನು ಪತ್ತೆ ಹಚ್ಚಬೇಕು. ದೇಹದ ಪ್ರತಿ ತುಂಡನ್ನು ರೆಡಿಯಾಲಿಜಿಕಲ್, ಸಿಟಿ ಸ್ಕ್ಯಾನ್, ಎಕ್ಸರೇ, ಟಾಕ್ಸಿಕಲ್ ಎಕ್ಸಾಮಿನೇಷನ್, ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಹಾಗೂ ಡಿಎನ್‌ಎ ಪರೀಕ್ಷೆ ಮಾಡಿ ಅಂತಿಮವಾಗಿ ಕಂಡು ಬಂದ ಅಂಶಗಳ ವರದಿಯನ್ನು ಸಿದ್ಧಪಡಿಸಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.