ಪ್ರಮುಖರ ಟ್ವಿಟ್‌ಗಳು
Team Udayavani, May 16, 2018, 11:14 AM IST
ಭವಿಷ್ಯಕ್ಕಾಗಿ ಈ ಟ್ವೀಟನ್ನು ಸೇವ್ ಮಾಡಿಟ್ಟುಕೊಳ್ಳಿ. ಒಂದು ವೇಳೆ ಮುಂದೆ ನಾನು ಚುನಾವಣೆಯಲ್ಲಿ ಗೆದ್ದರೆ ಅದಕ್ಕೆ ನನ್ನ ವರ್ಚಸ್ಸು ಮತ್ತು ಕಠಿಣ ಪರಿಶ್ರಮ ಕಾರಣ. ಒಂದು ವೇಳೆ ಸೋತರೆ ಅದಕ್ಕೆಲ್ಲ ಆ ಇವಿಎಂಗಳೇ ಕಾರಣ.
-ಓಮರ್ ಅಬ್ದುಲ್ಲಾ
ಕರ್ನಾಟಕ ಚುನಾವಣೆಯ ಬಗ್ಗೆ ಮಾತನಾಡುತ್ತಿರುವ ಉತ್ತರ ಭಾರತದ ಪರಿಣತರೇ ಇಲ್ಲಿ ಕೇಳಿ, ನಮ್ಮ ರಾಜ್ಯದ ಹೆಸರು “ಕರ್ನಾಟಕ’, ಕರ್ನಾಟಕ್ ಅಲ್ಲ. ನಮ್ಮ ಭಾಷೆ ಕನ್ನಡ, ಕನ್ನಡ್ ಅಲ್ಲ, ನಾವು ಕನ್ನಡಿಗರು, “ಕನ್ನಡ್ಸ್’ ಅಲ್ಲ.
-ಶಿಲ್ಪ ಕನ್ನನ್
ಮತದಾನ ಮಾಡದೇ ಮನೆಯಲ್ಲಿ ಉಳಿದ ಕರ್ನಾಟಕ ಜನತೆಗಳೇ, ನೀವು ಬದಲಾವಣೆಯ ಅವಕಾಶವನ್ನು ಕಳೆದುಕೊಂಡಿರಿ. ಈಗ ನೋಡಿ ನಾಟಕ ಶುರುವಾಗುತ್ತದೆ ಮತ್ತೆ ಹಣದಾಟ ಆರಂಭವಾಗುತ್ತದೆ, ಅವಕಾಶವಾದಿಗಳು ಆರ್ಭಟಿಸುತ್ತಾರೆ.
-ರಾಮಕೃಷ್ಣ
ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸಿದರೆ ತಪ್ಪೇನಿದೆ? ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿಯೂ ಇದೇ ರೀತಿ ಅಧಿಕಾರಕ್ಕೆ ಬಂದಿತ್ತಲ್ಲವೇ?
-ಅಭಿಜಿತ್ ಮಜುಂದಾರ್
ಕರ್ನಾಟಕದಲ್ಲಿ ಎರಡು ಸನ್ನಿವೇಶಗಳು ನಿರ್ಮಾಣವಾಗಬಹುದು.
1) ಬಿಜೆಪಿ ಈಗ ಸರ್ಕಾರ ರಚಿಸುತ್ತದೆ.
2) ಬಿಜೆಪಿ ಕೆಲವು ತಿಂಗಳ ನಂತರ ಸರ್ಕಾರ ರಚಿಸುತ್ತದೆ!
-ಸಾಗರ್‌ಕ್ಯಾಸಂ
ವಿನಾಶದ ಅಂಚಿನಲ್ಲಿರುವ ಪಕ್ಷಕ್ಕೆ ಅಪಾಯ ಎದುರೊಡ್ಡುತ್ತಿರುವ ಅಪರಾಧದ ಮೇಲೆ ಮೋದಿ ಮತ್ತು ಅಮಿತ್ ಶಾ ಅವರಿಗೆ ಶಿಕ್ಷೆಯಾಗಬೇಕು!
-ಬ್ಲ್ಯಾಂಕ್ ಪೇಜ್
ಅದೆಲ್ಲ ಓಕೆ… ಇವ ನಾರ್ವ, ಇವ ನಾರ್ವ, ಇವ ನಾರ್ವ ಎಲ್ಲಿ ಹೋದ್ರು?
-ತೂಜಾನೇನಾ?
ಅತಿ ಕಡಿಮೆ ಸೀಟು ಗೆದ್ದ ಪಕ್ಷದವರು ಸಿಎಂ ಆಗಲು ಯೋಚಿಸುತ್ತಾರೆ, ಇದು ನಿಜವಾದರೆ ಜಾಸ್ತಿ ಸೀಟು ಪಡೆದ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡಬೇಕು. ಭಾರತೀಯ ರಾಜಕಾರಣ!
-ವಿಕ್ರಂ ಸಂಜಯ್
ಡಿಸ್ಟಿಂಕ್ಷನ್ ಪಡೆದವನಿಗಿಂತ 35 ಪರ್ಸೆಂಟ್ ಅಂಕಗಳಿಸಿದವನೇ ಜೀವನದಲ್ಲಿ ಸುಖವಾಗಿರುತ್ತಾನೆ ಎನ್ನುವುದನ್ನು ಜೆಡಿಎಸ್ ಪಕ್ಷ ರುಜುವಾತು ಮಾಡುತ್ತಿದೆ!
-ಅನಿಲ್‌ಕುಮಾರ್ ಎಂ
ಜೆಡಿಎಸ್ ಸರ್ಕಾರ ರಚಿಸಬಾರದು ಎಂದರೆ ಒಂದೇ ಒಂದು ದಾರಿಯಿದೆ. ರಾಜ್ಯಪಾಲರು ಹುಷಾರಿಲ್ಲವೆಂದು ಆಸ್ಪತ್ರೆಗೆ ಅಡ್ಮಿಟ್ ಆಗಬೇಕು!
-ವಿಜಯ್ ನಾರಾಯಣನ್
ಅರವಿಂದ್ ಕೇಜ್ರಿವಾಲ್ ದೇವೇಗೌಡರಿಗೆ ಕರೆ ಮಾಡಿದರಂತೆ… “ನಿಮ್ಮ ಎಂಎಲ್‌ಎಗಳ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮೆರಾ ಕೊಟ್ಟು ಕಳುಹಿಸುತ್ತೇನೆ’ ಎಂದಿದ್ದಾರಂತೆ.
-ಸಿದ್ಧಾರ್ಥ್ ಮೊಹಂತಿ.
ಇನ್ನೊಂದು ತಿಂಗಳು ರೆಸಾರ್ಟ್ ಮಾಲೀಕರಿಗೆ ಹಬ್ಬವೋ ಹಬ್ಬ. ನಮ್ಮ ಪಕ್ಷಗಳು ರೆಸಾರ್ಟ್‌ಗಳಲ್ಲಿ ಏನು ಮಾಡುತ್ತವೆ ಎನ್ನುವುದು ನಮಗೆ ಗೊತ್ತು. ಆದರೂ ನಾವವನ್ನು ಬೆಂಬಲಿಸುತ್ತೇವೆ. ಮತದಾರ ದೊಡ್ಡ ಮೂರ್ಖ!
-ಅನಂತ್ ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ
Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ
Atul Subhash: ಟೆಕಿ ಅತುಲ್ ಪತ್ನಿ ಬೇಲ್ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.